
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮಾ25: ದೇಶದ ದ್ವಿತೀಯ, ರಾಜ್ಯದ ಪ್ರಥಮ ಲೋಕಸಭಾ ಕಟ್ಟಡದ ಮೇಲೆ ನಿಂತಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕಂಚಿನ ಪ್ರತಿಮೆ ಲೋಕಾರ್ಪಣೆಗೊಂಡಿತು.
ಶುಕ್ರವಾರ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಆದಿಜಾಂಬವ ಮಠದ ಶ್ರೀ ಷಡಕ್ಷರ ಮುನಿಗಳು, ಹಂಪಿ ಮಾತಂಗಪರ್ವತ ಪೂಜ್ಯ ಪೂರ್ಣಾನಂದ ಭಾರತಿ ಸ್ವಾಮಿಗಳು. ಮಾಜಿ ಸಚಿವ ಹೆಚ್.ಆಂಜನೇಯ ನಗರಸಭಾ ಅಧ್ಯಕ್ಷತೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ್, ಸಂಘದ ಗೌರವಾಧ್ಯಕ್ಷ ಎಂ.ಸಿ.ವೀರಸ್ವಾಮಿ, ಅಧ್ಯಕ್ಷ ಕೆ.ಪಿ.ಉಮಾಪತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಹೊಸಪೇಟೆಯ ಸೃಷ್ಟಿ ಆರ್ಕಿಟೆಕ್ಚರ್ ನ ಭೂಪಾಳ ಶ್ರೀಪಾದ ವಿನ್ಯಾಸಗೋಳಿಸಿದ ಹಾಗೂ ಹುಬ್ಬಳ್ಳಿಯ ಸ್ವಾಮಿನಾಥನ್ ನಿರ್ಮಾಣ ಮಾಡಿದ 1ಕೋಟಿ ವೆಚ್ಚದಲ್ಲಿ ಸಚಿವ ಆನಂದ್ ಸಿಂಗ್ ಸ್ವಂತ ಅನುದಾನದಲ್ಲಿ ಲೋಕಸಭಾ ಕಟ್ಟಡದ ಮಾದರಿಯ ಮೇಲೆ ನಿಂತಿರುವ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾತು.
ಅಂಬಣ್ಣ ಅರೋಲಿಕರ್, ಹಾಗೂ ಯಲ್ಲಪ್ಪ ಭಂಡಾರ್ ದಾರ್ ತಂಡದ ಸದಸ್ಯರುಗಳಿಂದ ಕ್ರಾಂತಿಗೀತೆ ಹಾಗೂ ಅಂಬೇಡ್ಕರ್ ಜೀವನಗೀತ ಗಾಯನ ನೆರೆದಿದ್ದ ಕಲಾರಸಿಕರನ್ನು ರಂಚಿಸಿತು.