ದೇಶದ ಆರ್ಥಿಕಸ್ಥಿತಿ ಮೂರನೇ ಸ್ಥಾನಕ್ಕೆ ಬರಬೇಕಿದೆ: ಗೆಹ್ಲೋಟ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,13-  ಭಾರತ ಆರ್ಥಿಕವಾಗಿ ಸುಸ್ಥಿರದಲ್ಲಿದೆ, ವಿಶ್ವದಲ್ಲಿ ಐದನೇ ಸ್ಥಾನದಲ್ಲಿದ್ದು. ಮೂರನೇ ಸ್ಥಾನಕ್ಕೆ ತರಲು ಶ್ರಮಿಸಬೇಕಿದೆ ಅದಕ್ಕಾಗಿ ಯುವ ಜನತೆ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು.  ಸ್ವಾಭಿಮಾನಿ, ಆತ್ಮನಿರ್ಭಾರ ಭಾರತದ ಅಭಿವೃದ್ಧಿಯಲ್ಲಿ  ಸಹ ಭಾಗಿತ್ವ ಬೇಕೆಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ ಹೇಳಿದ್ದಾರೆ.
ಅವರು ಇಂದು ನಗರದ ವಿಎಸ್ ಕೆವಿವಿಯ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  ವಿವಿಗಳ  ಭೋದಕ ಸಿಬ್ಬಂದಿ ಬದಲಾಗುತ್ತಿರುವ  ತಂತ್ರಜ್ಞಾನವನ್ನು ಅಧ್ಯಯನ ಮಾಡಿಕೊಂಡು ಭೋದಿಸುವ ಕಾರ್ಯ ಆಗಬೇಕು ಎಂದರು.
ಎಲ್ಲಾ ವಿವಿಗಳಿಗೆ ಪತ್ರ ಬರೆದು ಜಲ, ವಾಯು ವನ  ಸಂರಕ್ಷಣೆ ಮಾಡಿ ಸ್ವಚ್ಚ ಪರಿಸರ   ನಿರ್ಮಾಣಕ್ಕೆ ಆಧ್ಯತೆ ನೀಡಲು ತಿಳಿಸಿದೆಂದರು.