ದೇಶದ ಅಭಿವೃದ್ಧಿಯಲ್ಲಿ ಯುವ ಜನರ ಪಾತ್ರ ಹಿರಿದು

ಭಾಲ್ಕಿ:ನ.11:ದೇಶದ ತ್ವರಿತ ಪ್ರಗತಿಯಲ್ಲಿ ಯುವ ಜನರ ಪಾತ್ರ ಅಗಾಧವಾಗಿದ್ದು, ಯುವ ಜನರು ರಾಷ್ಟ್ರದ ಸೇವೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರಮುಖರಾದ ಧನರಾಜ ಪಾಟೀಲ ಹೇಳಿದರು.
ತಾಲ್ಲೂಕು ತಾಲ್ಲೂಕಿನ ಹಲಬರ್ಗಾದ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ನೈಜ ಸಂಪತ್ತಾಗಿರುವ ಯುವ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು, ಸಕಾರಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಶಿವಾಜಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ, ಶಿಸ್ತು, ಸಂಯಮ, ರಾಷ್ಟ್ರಪ್ರೇಮ ಸೇರಿದಂತೆ ಇತರ ಮೌಲಿಕ ಗುಣಗಳನ್ನು ಬೆಳೆಸುತ್ತದೆ ಎಂದು ಮಾರ್ಮಿಕ ಉದಾಹರಣೆಗೆ ಸಹಿತ ವಿವರಿಸಿದರು.
ಚಿಟಗುಪ್ಪ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಮಾರುತಿ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಜ್ಞಾನ ದಾಹಿಗಳಾಗಿ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಹಂಬಲಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶಿವರಾಜ ಬೋರಾಳೆ ಮಾತನಾಡಿ, ಸದ್ಗುಣ, ಸತ್ ಚಿಂತನೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕರಿಸುತ್ತವೆ ಎಂದರು.ಎನ ಎಸ ಎಸ್ ಎಸ್ ಅಧಿಕಾರಿ ಭಗವಾನ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.
ರಾಜಕುಮಾರ ಹೂಗಾರ, ಸುಹಾಸಿನಿ ದಾಮಾ, ನಾರಾಯಣ ನೇಳಗೆ, ಪ್ರೇಮಕುಮಾರ, ಪತ್ರಕರ್ತ ಬಸವರಾಜ ಪ್ರಭಾ ಇದ್ದರು.ಶಿವಲೀಲಾ ಕಾಳೆ ನಿರೂಪಿಸಿದರು.ಸುಭಾಷ ಗೋಬರೆ ವಂದಿಸಿದರು.