ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅನನ್ಯ: ಮಾಜಿ ಸಚಿವ ರಾಜಶೇಖರ್ ಪಾಟೀಲ್

ಹುಮನಾಬಾದ್:ಡಿ.29:ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರ ದೇಶದ ಸವಾರ್ಂಗೀಣ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನುಪಮವಾದ್ದು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದರು.

ಪಟ್ಟಣದ ಮಾಜಿ ಸಚಿವೆ ರಾಜಶೇಖರ ಬಿ.ಪಾಟೀಲ್ ರವರ ಸ್ವ-ಗೃಹದಲ್ಲಿ ಕಾಂಗ್ರೇಸ್ ಪಕ್ಷದ ಧ್ವಜಾರೋಹಣ ನೇರವೆರಿಸಿದರು. ಬಳಿಕ ಮಾತನಾಡಿದ

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್’ ದೇಶದ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನವರೆಗೂ ದೇಶ ಮೊದಲು ಎಂಬ ಧ್ಯೇಯದೊಂದಿಗೆ, ಐಕ್ಯತೆ, ನ್ಯಾಯ, ಸಮಾನತೆ, ಅಹಿಂಸೆ, ಸ್ವಾತಂತ್ರ್ಯ, ಸ್ವಾಭಿಮಾನದ ಜೊತೆಗೆ 139ನೇ ಕಾಂಗ್ರೇಸ್ ಸಂಸ್ಥಾಪನಾ ದಿನ ಆಚರಿಸಲಾಯಿತು. ಎಂದರು

ದೇಶ ಬದಲಾವಣೆ ಬಯಸುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವಿನೊಂದಿಗೆ ಬೀದರ್ ಜಿಲ್ಲೆಯವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಧಾನಿ ಆಗಲಿದ್ದಾರೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಯಾರಿಗೆ ಅಭ್ಯರ್ಥಿ ಎಂದು ಘೋಷಣೆ ಮಾಡಿದರೂ ಅವರ ಗೆಲುವಿಗಾಗಿ ಅವರನ್ನು ಗೆಲ್ಲಿಸುವ ಕೆಲಸ ಇಂದಿಲಿಂದಲೇ ಪ್ರಾರಂಭಿಸಲು ಕಾರ್ಯಕರ್ತರು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕನ ಉಪಾಧ್ಯಕ್ಷರು, ಅಭೀಷೆಕ ಆರ್.ಪಾಟೀಲ್, ಬ್ಲಾಕ್ ಕಾಂಗ್ರೇಸ್ ಸಮೀತಿ ನಗರ ಅಧ್ಯಕ್ಷರಾದ ಅಫ್ಸರಮಿಯ್ಯಾ, ಬ್ಲಾಕ್ ಕಾಂಗ್ರೇಸ್ ಗ್ರಾಮೀಣ ಅಧ್ಯಕ್ಷರಾದ ಓಂಕಾರ ತುಂಬಾ, ಮಾಜಿ ಜಿ.ಪಂ ಉಪಾಧ್ಯಕ್ಷರಾದ ಲಕ್ಷ್ಮಣ್ ರಾವ್ ಬುಳ್ಳಾ, ಕಂಠೆಪ್ಪ ಧಾನಾ, ಮಹೇಶ ಅಗಡಿ, ಬಾಬುರಾವ ಪರಮಶೇಟ್ಟಿ, ವೀರಪ್ಪ ಭುತಾಳೆ, ಧರಂ ರೆಡ್ಡಿ, ಬಸು ಶೇರಿಕಾರ, ಸಚೀನ ದಾಡಗೆ, ಸುರೇಶ ಘಾಂಗ್ರೆ, ಆಜಂ, ಸಂತೋಷ, ರವಿಚಂದ್ರ ಸಂಗಮ, ರಂಜಿತ ಮಾನಕರೆ, ಜ್ಞಾನೇಶ್ವರ ಭೋಸ್ಲೆ, ರಾಹಿಲ್ ಖಿಲ್ಜಿ, ನರಸಪ್ಪ ಪರಸನೋರ, ವಿಜಯಕುಮಾರ ಪವಾರ , ಸೇರಿದಂತೆ ಅನೇಕರು ಇದ್ದರು.