ದೇಶದ ಅಭಿವೃದ್ದಿ ದಿಕ್ಕನ್ನೆ ಬದಲಿಸಿದ ಪ್ರಧಾನಿ ನರೇಂದ್ರ ಮೋದಿ: ಸಂಸದ ರಮೇಶ ಜಿಗಜಿಣಗಿ

ವಿಜಯಪುರ, ಮೇ.31-ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇಂದು ಎರಡನೇ ಅವಧಿಯ ಏಳು ವರ್ಷ ಇಂದಿಗೆ ಪೂರೈಸಿದ ಪ್ರಯುಕ್ತ, ಈ ದಿನವನ್ನು ಸೇವೆಯೇ ಸಂಘಟನೆ ಎಂಬ ಉದಾತ್ತ ಧ್ಯೇಯ ಸೇವಾ ಸಪ್ತಾಹ”ವಾಗಿ ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಘಟಕದ ವತಿಯಿಂದ ಹಲವಾರು ಬಡಾವಣೆಗಳಲ್ಲಿ ಮಾಸ್ಕ್ ಸ್ಯಾನಿಟೈಜರ್, ಆಹಾರ ಕಿಟ್‍ಗಳು, ಸಸಿ ನೆಡುವ ಕಾರ್ಯಕ್ರಮ ಆಚರಿಸಲಾಯಿತು.
ವಾರ್ಡ ನಂ. 4ರಲ್ಲಿ ಬರುವ ಶಾಲೆ ನಂ. 24ರಲ್ಲಿ ಸಂಸದ ರಮೇಶ ಜಿಗಜಿಣಗಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ದೇಶದ ಅಭಿವೃದ್ದಿ ದಿಕ್ಕನ್ನೆ ಬದಲಿಸಿದ ಪ್ರಧಾನಿ ನರೇಂದ್ರ ಮೋದಿ ಸಜ್ಜನಶೀಲವಾಗಿ ಕೆಲಸ ಮಾಡಲು ಬಾರದ ಪ್ರತಿಪಕ್ಷಗಳು ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ನಮ್ಮ ದೇಶದ ಪ್ರಧಾನಮಂತ್ರಿಗಳು ಕೊರೋನಾ ನಿಯಂತ್ರಣ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಇಡೀ ವಿಶ್ವಕ್ಕೆ ವಾಕ್ಸಿನೆಶನ ಕೊಡುವ ಸಂಜೀವಿನಿ ಭಾರತ ದೇಶ ಎಂಬುದು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪ್ರಧಾನಿಯವರು ಬಿಡುವಿಲ್ಲದೆ ಶ್ರಮಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಭಾರತ ಕೈಗೊಂಡ ಕ್ರಮಗಳಿಗೆ ಹಲವು ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಕೋವಿಡ್-19ರ ವಿರುದ್ಧ ಹೋರಾಟಕ್ಕೆ ನಾವೆಲ್ಲ ಪ್ರಧಾನಿಯವರ ಕೈಜೋಡಿಸಬೇಕಾಗಿದೆ ಎಂದರು.
ಬೆಳಗಾಂವ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಲಕೋಟ, ಉಮೇಶ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ರವಿಕಾಂತ ಬಗಲಿ, ನಗರಮಂಡಲ ಅಧ್ಯಕ್ಷರಾದ ಮಳುಗೌಡ ಪಾಟೀಲ್, ಗೋಪಾಲ ಘಟಕಾಂಬಳೆ, ಪಾಪುಸಿಂಗ್ ರಜಪುತ, ಸಂತೋಷ ನಿಂಬರಗಿ, ವಿಜಯ ಜೋಶಿ, ಸತೀಶ ಪಾಟೀಲ್, ವಿಠ್ಠಲ ನಡುವಿನಕೇರಿ, ಸಂತೋಷ ಸವನಳ್ಳಿ, ಸಾಗರ ಶೇರ್ಖಾನೆ, ಪ್ರಹ್ಲಾದ ಕಾಂಬಳೆ, ಯೋಗೇಶ ನಡುವಿನಕೇರಿ, ಶಿವು ಕಾರಜೋಳ, ಬಸವರಾಜ ಶಹಪೂರ, ಅಲ್ಲಾಭಕ್ಷ ಅಥಣಿ ಮುಂತಾದವರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾ ವತಿಯಿಂದ ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ಸನ್ಮಾನಿಸಿ ಉಪಹಾರ ವಿತರಣೆ ಮಾಡಲಾಯಿತು. ಕೊಲ್ಲಾಪುರ ಕನ್ಹೇರಿಮಠ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಿದ್ಧಪಡಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೀರಿನ ಬಾಟಲ್ ವಿತರಿಸಲಾಯಿತು.