ದೇಶದ ಅಭಿವೃದ್ದಿಗೆ ಎಂಜಿನಿಯರ್‍ಗಳ ಕೊಡುಗೆ ಅಪಾರ

ಹುಮನಾಬಾದ್: ಸೆ.16:ದೇಶದ ಸರ್ವಾಂಗೀಣ ಅಭಿವೃದ್ದಿಯಲ್ಲಿ ಎಂಜಿನಿಯರಗಳ ಕೊಡುಗೆ ಅಪಾರವಾಗಿದೆ, ಎಂದು ಪಂಚಾಯತ ರಾಜ ಎಂಜಿನಿಯರಿಂಗ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುಭಾಷ ವಾಘಮಾರೆ ಹೇಳಿದರು.

ಇಲ್ಲಿನ ಪಂಚಾಯತ ರಾಜ ಎಂಜಿನಿಯರಿಂಗ ಉಪ ವಿಭಾಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಎಂಜಿನಿಯರಗಳ ದಿನಾಚಾರಣೆಯನ್ನು ಸರ್.ಎಂ.ವಿಶ್ವೇಶ್ವರಯ್ಯನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಸರ್.ಎಂ.ವಿಶ್ವೇಶ್ವರಯ್ಯನವರು ಕರ್ತವ್ಯ ನಿಷ್ಠೆಗೆ ಹೆಸರುವಾಸಿಯಾಗಿ ದೇಶದಲ್ಲಿಯೇ ಕಲ್ಪನೆಗು ಮೀರಿದ ಸಾಧನೆ ಮಾಡಿದ್ದಾರೆ. ಅವರಂತೆ ಎಂಜಿನಿಯರ್‍ಗಳು ಜೀವನದ ತಮ್ಮ ವೃತ್ತಿ ರಂಗದಲ್ಲಿ ವಿಶ್ವೇಶ್ವರಯ್ಯನವರ ತತ್ವ ಆದರ್ಶಗಳನ್ನು ಮೈಗೊಡಿಸಿಕೂಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಾಮಸುಂದರ್ ಕಾಳೇಕರ್, ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯ ಮಠಪತಿ, ಕಿರಿಯ ಅಭಿಯಂತರರಾದ ಶಿವಕುಮಾರ ಕೌಟಗೆ, ಸಚಿನ ಮೇತ್ರೆ, ರಾಜಕುಮಾರ ಹೆಬ್ಬಾಳೆ, ಪೀರಾಜಿ, ಮಹಮದ್ ಗೌಸ್, ಅಲ್ತಾಫ್ ರಸೂಲ್, ಬಸವರಾಜ ಗುರಣ್ಣ, ಮಹಮೆದ್ ಗೌಸ್, ಶಿವಕುಮಾರ ಭಾಲ್ಕಿ, ಬಸವಂತ ಗಂದಗೆ, ಗೋರಖನಾಥ, ವಿಜಯಕುಮಾರ ಜಮಾದಾರ್, ಓಂಕಾರ ಪಾಟೀಲ, ಶಿವರಾಜ ಗೋರ್ಟಾ, ಮಾಣಿಕ ನಾಗನಾಯಕ, ಅಲೀಮ್ ಎಂ ಜಮಾದಾರ್, ಹಂಸರಾಜ ಢೋಲೆ, ಪ್ರಭುರೆಡ್ಡಿ ಮುಸ್ತರಿ, ಸಿದ್ದು ಕಲ್ಲೂರು, ಪ್ರಭು ಅಡಕೈ, ರವೀಂದ್ರನಾಥ ಭೋಲಾ, ಬಸವರಾಜ ನೆಳಕೋಡ್, ಬಸವಣಪ್ಪ ಹಣಕುಣಿ, ಶೈಲಜಾ, ಪ್ರೇಮನಾಥ ಹಂದಕೇರಾ, ಲಖನ್ ಬೇನಚಿಂಚೋಳಿ, ಹಾಶಪ್ಪ, ಶಂಕರ್, ಶಮಶೋದ್ದೀನ್, ಈರಪ್ಪಾ ಕಣಜಿ, ಝರೇಪ್ಪಾ ವಾಡಿ, ಇದ್ದರು.