ದೇಶದೆಲ್ಲೆಡೆ ಆಕ್ಸಿಜನ್, ಹಾಸಿಗೆಗಾಗಿ ಹಾಹಾಕಾರ


ನವದೆಹಲಿ, ಏ.೨೧ : ಕೊರೊನಾ ಎರಡನೇ ಅಲೆ ದೇಶದೆಲ್ಲೆಡೆ ಅರ್ಭಟಿಸುತ್ತಿದ್ದು, ಸೋಂಕಿತರು ವಿಲ ವಿಲವೆಂದು ಒದ್ದಾಡುವಂತಾಗಿದೆ. ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಗೂ ಹಾಸಿಗೆಗಳಿಗಾಗಿ ಹಾಹಾಕಾರ ಎದುರಾಗಿದೆ.
ನಮ್ಮ ಆಮ್ಲಜನಕದ ದಾಸ್ತಾನು ಕೇವಲ ೭ರಿಂದ ೧೨ ಗಂಟೆಗಳ ಒಳಗೆ ಮುಗಿಯಲಿದೆ. ಒಂದು ವೇಳೆ ಆಮ್ಲಜನಕ ಸಿಗದೇ ಇದ್ದರೆ ಜನರು ಸಾವನ್ನಪ್ಪಲಿದ್ದಾರೆ’ ಎಂದು ದಿಲ್ಲಿಯ ಹಲವು ಆಸ್ಪತ್ರೆಗಳು ಹೇಳಿವೆ.
ದೆಹಲಿಯಲ್ಲಿ ಆಮ್ಲಜನಕದ ಗಂಭೀರ ಸಮಸ್ಯೆ ಇದೆ. ಇಲ್ಲಿಯ ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳ ವೈದ್ಯಕೀಯ ಆಮ್ಲಜನಕ ಉಳಿದಿದೆ. ಹೀಗಾಗಿ ಕೂಡಲೇ ಆಮ್ಲಜನಕ ಪೂರೈಸಬೇಕೆಂದು ಕೇಜ್ರಿವಾಲ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕೇವಲ ೬ ಸಾವಿರ ಕ್ಯೂಬಿಕ್ ಮೀಟರ್ ಆಕ್ಸಿಜನ್ ಉಳಿದಿದ್ದು, ಇದು ನಾಳೆ ಬೆಳಿಗ್ಗೆ ೧ ಗಂಟೆ ವರೆಗೆ ಮಾತ್ರ ಬಳಕೆಯಾಗಲಿದೆ. ಕೂಡಲೇ ರಾಷ್ಟ್ರರಾಜಧಾನಿಗೆ ಆಕ್ಸಿಜನ್ ಅಗತ್ಯವಿದೆ. ಪೂರೈಸಬೇಕು ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ನಮ್ಮಲ್ಲಿ ಆಮ್ಲಜನಕದ ಗಂಭೀರ ಸಮಸ್ಯೆ ಇದೆ. ತುರ್ತಾಗಿ ಆಮ್ಲಜನಕ ಒದಗಿಸುವಂತೆ ಮತ್ತೆ ಕೇಂದ್ರಕ್ಕೆ ಒತ್ತಾಯಿಸುತ್ತಿದ್ದೇನೆ. ಕೆಲವು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳವರೆಗೆ ಮಾತ್ರ ಆಮ್ಲಜನಕ ಪೂರೈಕೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು. ದೆಹಲಿಯಲ್ಲಿ ನಿತ್ಯ ೨೫ ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಅಲ್ಲದೇ, ಖಾಸಗಿ ಕಚೇರಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.