ದೇಶದಾದ್ಯಂತ ಜಿಮೇಲ್ ಸೇವೆ ಡೌನ್

ನವದೆಹಲಿ.ಮಾ೨೩: ಮಂಗಳವಾರ ಭಾರತ ಸೇರಿದಂತೆ ಜಾಗತಿಕವಾಗಿ ಕೆಲವು ಆಂಡ್ರಾಯ್ಡ್ ಬಳಕೆದಾರರು ತಮ್ಮ ಆಂಡ್ರಾಯ್ಡ್ ಸಾಧನಗಳಲ್ಲಿ
ಅಕಸ್ಮಕ ಅಪ್ಪಳಿಸುವಿಕೆ(ಕ್ರ್ಯಾಷ್) ಆಗುತ್ತಿರುವ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗೂಗಲ್ ಈ ಸಮಸ್ಯೆಯನ್ನು ಸರಿಪಡಿಸುವ ಕೆಲಸ ಆರಂಭಿಸಲಾಗಿದೆ ಎಂದು ಗೂಗಲ್ ತಿಳಸಿದೆ.
ಗೂಗಲ್ ವರ್ಕ್‌ಸ್ಪೇಸ್ ಸ್ಟೇಟಸ್ ಪೇಜ್ ನಲ್ಲಿ ಆಂಡ್ರಾಯ್ಡ್ ನಲ್ಲಿ ಜಿಮೇಲ್‌ನ ಸಮಸ್ಯೆಗಳು ಕಂಡು ಬಂದಿರುವುದನ್ನು ಗೂಗಲ್ ಒಪ್ಪಿಕೊಂಡಿದೆ, ಸಮಸ್ಯೆಗಳು ಬಗೆಹರಿಯುವವರೆಗೂ ಡೆಸ್ಕ್ ಟಾಪ್ ಆವೃತ್ತಿಯನ್ನು ಬಳಸುವಂತೆ ಶಿಫಾರಸು ಮಾಡಿದೆ. ಸಮಸ್ಯೆಯನ್ನು ನೀವು ಎದುರಿಸುತ್ತಿದ್ದೀರಾ ಎಂದು ನಾವು ತಿಳಿದಿದ್ದೇವೆ. ಬಾಧಿತ ಬಳಕೆದಾರರು ಜಿಮೇಲ್ ಅನ್ನು ಪ್ರವೇಶಿಸಲು ಅಸಮರ್ಥರಾಗಿದ್ದಾರೆ. ನಾವು ಸಮಸ್ಯೆಯನ್ನು ಯಾವಾಗ ಪರಿಹರಿಸುತ್ತೇವೆ ಎನ್ನುವ ಬಗ್ಗೆ ನಾವು ಒಂದು ಅಪ್ ಡೇಟ್ ಅನ್ನು ಒದಗಿಸುತ್ತೇವೆ, ಎಂದು ಗೂಗಲ್ ಹೇಳಿದೆ.
ಬಾಧಿತ ಬಳಕೆದಾರರು ಜಿಮೇಲ್ ಆಂಡ್ರಾಯ್ಡ್ ಆಪ್ ಬದಲಿಗೆ ಡೆಸ್ಕ್ ಟಾಪ್ ಜಿಮೇಲ್ ವೆಬ್ ಇಂಟರ್ ಫೇಸ್ ಬಳಸಬಹುದು’ ಎಂದು ಕಂಪೆನಿ ಸಲಹೆ ಮಾಡಿದೆ. ಈ ಸಮಸ್ಯೆಯನ್ನು ಸ್ಯಾಮ್ ಸಂಗ್ ಸಹ ಒಪ್ಪಿಕೊಂಡು ಪರಿಹಾರ ಸೂಚಿಸಿದೆ. ಆಂಡ್ರಾಯ್ಡ್ ನಲ್ಲಿ ಜಿಮೇಲ್ ಆಪ್ ಕ್ರ್ಯಾಶ್ ಆಗಿದೆ ಬಳಕೆದಾರರು ವರದಿ ಮಾಡಿದ್ದಾರೆ