ದೇಶದಲ್ಲೇ ಮೊಟ್ಟ ಮೊದಲ ತೇಲುವ ಹಾರುವ ವಿಮಾನ…!

ಅಹಮದಾಬಾದ್ , ಅ ೨೯ – ದೇಶದಲ್ಲಿ ಇದೆ ಮೊದಲ ಬಾರಿಗೆ ತೇಲುವ-ಹಾರುವ ಸಮುದ್ರ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದ್ದು, ೩೧ ರಂದು ಸರ್ದಾರ್ ವಲಭಭಾಯಿ ಪಟೇಲ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಈ ಸೇವೆಯನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ.
ಗುಜರಾತ್ ಅಹಮದಾಬಾದ್ ಮತ್ತು ಏಕತಾ ಪ್ರತಿಮೆ ನಡುವೆ ಸಮುದ್ರ ವಿಮಾನ ಸಂಚಾರಕ್ಕೆ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ತಯಾರಿ ಮಾಡಿಕೊಂಡಿದೆ.
ಇದೇ ಸಮುದ್ರ ವಿಮಾನ ಸೇವೆಯನ್ನು ಇದೇ ಮೊದಲ ಬಾರಿಗೆ ದೇಶದಲ್ಲಿ ಆರಂಭಿಸಲಾಗುತ್ತಿದೆ. ಅಹಮದಾಬಾದ್‌ನ ನರ್ಮದಾ ಜಿಲ್ಲೆಯ ಏಕತಾ ಪ್ರತಿಮೆ ಬಳಿಯ ಸಬರಮತಿ ನದಿಯ ಮುಂಭಾಗದಿಂದ ವಿಮಾನ ಹಾರಾಟ ನಡೆಸಲಿದೆ. ಈ ವಿಮಾನದಲ್ಲಿ ೧೨ ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ.
ಮೊದಲಿಗೆ ನೀರಿನ ಮೇಲೆ ತೇಲುವ ವಿಮಾನ ನಂತರ ಗಾಳಿಯಲ್ಲಿ ಹಾರಾಡಲಿದೆ.
ಅಧಿಕಾರಿಗಳು ಹೇಳಿರುವ ಪ್ರಕಾರ ಈ ವಿಮಾನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು ೧೫೦೦ ಶುಲ್ಕ ನಿಗದಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ದಿನಕ್ಕೆ ಈ ಸಮುದ್ರವಿಮಾನ ನಾಲ್ಕು ಬಾರಿ ಪ್ರಯಾಣ ನಡೆಸಲಿದೆ.