ದೇಶದಲ್ಲಿ 98ಕ್ಕೇರಿದ ರೂಪಾಂತರ ಕೊರೊನಾ

ನವದೆಹಲಿ, ಜ.11- ದೇಶದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 96 ಕ್ಕೇರಿದೆ.
ಈ ಕುರಿತು ಆರೋಗ್ಯ ಸಚಿಚವಾಲಯ ಮಾಹಿತಿ ನೀಡಿದ್ದು ಶನಿವಾರ ರೂಪಾಂತರ ಕೊರೊನಾ ಪೀಡಿತರ ಸಂಖ್ಯೆ 90 ಜನರಲ್ಲಿ ಪತ್ತೆಯಾಗಿತ್ತು. ಈಗ ಈ ಪ್ರಕರಣಗಳು 96 ಕ್ಕೆ ಏರಿದೆ.
ಎಲ್ಲ ಸೋಂಕಿತರನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಗೊತ್ತುಪಡಿಸಿದ ಕೇಂದ್ರದಲ್ಲಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.
ಸೋಂಕಿತರ ನಿಕಟ ಸಂಪರ್ಕಕೆ ಬರುವವರನ್ನು‌ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರ ಜತೆಗೆ ಪ್ರಯಾಣಿಸಿದವರು ಮತ್ತು ಸಂಪರ್ಕಕ್ಕೆ ಬಂದ ಕುಟುಂಬ ಸದಸ್ಯರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿ ಯಲ್ಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.