ದೇಶದಲ್ಲಿ ೩ನೇ ಕೊರೊನಾ ಅಲೆ ಅಪ್ಪಳಿಸಬಹುದು- ಡಾ. ಗುಲೇರಿಯಾ


ನವದೆಹಲಿ, ಮೇ ೫- ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡದಿದ್ದರೆಮ ಕೊರೊನಾ ೩ನೇ ಅಲೆ ಅಪ್ಪಳಿಸತ್ತೆ ಅಂತ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ.
ಕೆಲರಾಜ್ಯಗಳಲ್ಲಿ ಕೊರೊನಾ ತಡೆಗಟ್ಟಲು ವೀಕೆಂಡ್ ಲಾಕ್ ಡೌನ್ ಹಾಗೂ ಕ್ಲೋಸ್ ಡೌನ್ ಘೋಷಿಸಿದ್ದಾರೆ. ಆದರೆ ಇದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ದೇಶಾದ್ಯಂತ ಲಾಕ್ ಡೌನ್ ಮಾಡಿ ಜನ ಒಬ್ಬರಿಗೊಬ್ಬರು ಅಂತರ ಪಾಲಿಸಿದರೆ ಮಾತ್ರ ನಾವು ಕೊರೊನಾದಿಂದ ಬಚಾವ್ ಆಗಲು ಸಾಧ್ಯ ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.
ಇಲ್ಲಿ ಪ್ರಮುಖ ಮೂರು ವಿಷಯಗಳನ್ನು ಗಮನಿಸಬೇಕೆಂದು ಹೇಳಿದ್ದಾರೆ. ಮೊದಲನೆಯದು ಆಸ್ಪತ್ರೆಯ ಮೂಲಸೌಕರ್ಯವನ್ನು ಸುಧಾರಿಸುವುದು. ಎರಡನೆಯದು ಅಗ್ರೆಸಿವ್ ರೀತಿಯಲ್ಲಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಮೂರನೆಯದು ಲಸಿಕೆಗಳನ್ನು ನೀಡಬೇಕೆಂದು ಹೇಳಿದ್ದಾರೆ.
ಮುಖ್ಯವಾಗಿ ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಬೇಕಾಗಿದೆ. ಜನರ ನಡುವಿನ ನಿಕಟ ಸಂಪರ್ಕವನ್ನು ಕಡಿಮೆ ಮಾಡಿದರೆ, ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ. ವೈರಸ್ ಮತ್ತಷ್ಟು ವಿಕಸನಗೊಳ್ಳುತ್ತಿದ್ದರೆ ಮತ್ತು ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ವಿಧಾನವನ್ನು ಅದು ಹೊಂದಿದರೆ, ಭಾರತ ಕೊರೊನಾ ಸಾಂಕ್ರಾಮಿಕದ ಮೂರನೇ ಅಲೆಯನ್ನು ನೋಡಬಹುದು. ಆದರೆ ಹೆಚ್ಚಿನ ಸಂಖ್ಯೆಯ ಜನರು ಲಸಿಕೆ ಪಡೆಯುವುದರಿಂದ, ಈ ಅಲೆ ಪ್ರಸ್ತುತ ಕೊರೊನಾ ವೈರಸ್ ಅಲೆಯಷ್ಟು ದೊಡ್ಡದಾಗಿದ್ದಿರಬಹುದು ಎಂದು ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.