ನವದೆಹಲಿ,/ ಪುಣೆ,ಸೆ.೩೦- ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ೨೮ ರವರೆಗೆ ದೇಶದಲ್ಲಿ ೧೪೬ ಹುಲಿ ಸಾವನ್ನಪ್ಪಿವೆ.
೨೦೧೨ ರಿಂದ ಅತಿ ಹೆಚ್ಚು ಹುಲಿ ಸಂಖ್ಯೆ ಹೊಂದಿರುವ ಭಾರತದಲ್ಲಿ ಹುಲಿಗಳ ಸಾವು ಆಘಾತವನ್ನುಂಟು ಮಾಡಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.
ಹುಲಿ ಜನಸಂಖ್ಯೆಯನ್ನು ರಕ್ಷಿಸುವ ಭಾರತದ ಪ್ರಯತ್ನಗಳಲ್ಲಿ ಆತಂಕಕಾರಿ ಪ್ರವೃತ್ತಿಯಾಗಿದೆ, ಈ ವರ್ಷ ಇಲ್ಲಿಯವರೆಗೆ ೧೪ ಬೇಟೆ ಪ್ರಕರಣಗಳನ್ನು ದಾಖಲಿಸುವುದರೊಂದಿಗೆ ಹುಲಿ ದೇಹದ ಭಾಗಗಳನ್ನು ವಶಪಡಿಸಿಕೊಳ್ಳುವ ಕಾರ್ಯ ಮಾಡಲಾಗಿದೆ ಎಂದಿದ್ದಾರೆ.
ಮಧ್ಯಪ್ರದೇಶದ ‘ವೀರಾಂಗಣ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶ’ವನ್ನು ತನ್ನ ೭ನೇ ಹುಲಿ ಅಭಯಾರಣ್ಯ ಎಂದು ಸೂಚಿಸಿದೆ. ಆದರೂ ಹುಲಿಗಾಲ ರಕ್ಷಣೆ ಮಾಡುವಲ್ಲಿ ವೈಫಲ್ಯ ಪ್ರದರ್ಶಿದಿ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಣೆ ಕುರಿತು ರಾಜ್ಯ ಸರ್ಕಾರವನ್ನು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದೆ.
ಶೇಕಡ ೨೫ ರಷ್ಟು ರಾಜ್ಯವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಮೀಸಲಿಡಲು ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ. ಈ ವರ್ಷ ಅತಿ ಹೆಚ್ಚು ಹುಲಿ ಸಾವುಗಳು ಮಧ್ಯಪ್ರದೇಶದಿಂದ ದಾಖಲಾಗಿದೆ. ಮಧ್ಯ ಪ್ರದೇಶದಲ್ಲಿ ೩೪ ಹುಲಿಗಳು, ಮಹಾರಾಷ್ಟ್ರದಲ್ಲಿ ೩೨, ಹುಲಿಗಳ ಮೃತಪಟ್ಟಿವೆ
ಒಟ್ಟಾರೆ ೧೪೬ ಹುಲಿಗಳು ಸಾವನ್ನಪ್ಪಿದ್ದು ಇದರಲ್ಲಿ ೨೪ ಮರಿಗಳು ಸೇರಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.
ದೇಶದಲ್ಲಿ ಹುಲಿ ಸಂಖ್ಯೆ ಹೆಚ್ಚಳ ಎನ್ನುವ ಹಿರಿಮೆ ಪಾತ್ರರಾಗಿರುವ ದೇಶದಲ್ಲಿ ಹುಲಿಗಳ ಸಾವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.