ದೇಶದಲ್ಲಿ ಹೊಸದಾಗಿ ೧೬,೩೧೧ ಸೋಂಕು ದೃಢ

ನವದೆಹಲಿ, ಜ. ೧೧- ದೇಶದಲ್ಲಿ ಹೊಸದಾಗಿ ೧೬,೩೧೧ ಕರೋನಾ ಸೋಂಕಿನ ಪ್ರಕರಣ ದೃಢಪಟ್ಟಿವೆ.ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ ೧ ಕೋಟಿ ೪ ಲಕ್ಷ ೬೬ ಸಾವಿರದ ೫೯೫ಕ್ಕೆ ಏರಿಕೆಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ೧೬,೯೫೯ ಸೋಂಕಿತರು ಗುಣಮುಖರಾಗಿದ್ದು ಇದುವರೆಗೂ ಚೇತರಿಸಿಕೊಂಡ ಅವರ ಸಂಖ್ಯೆ ೧ ಕೋಟಿ ೯೨,೯೦೯ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಹೊಸದಾಗಿ ೨೦೧ ಮಂದಿ ಮೃತಪಟ್ಟಿದ್ದು ಇದುವರೆಗೂ ಮೃತಪಟ್ಟವರ ಸಂಖ್ಯೆ ೧,೫೧,೧೬೦ಕ್ಕೆ ಏರಿಕೆಯಾಗಿದೆ.

ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸಚಿವಾಲಯ ತಿಳಿಸಿದೆ.

ಶೇ.೯೬.೪೨ ಚೇತರಿಕೆ:
ದೇಶಗಳಲ್ಲಿ ದೃಢಪಟ್ಟಿರುವ ಒಟ್ಟಾರೆ ಸೋಂಕಿತರ ಪೈಕಿ ಇದುವರೆಗೂ ಚೇತರಿಸಿಕೊಂಡವರ ಪ್ರಮಾಣ ಶೇ.೯೬.೪೨ಕ್ಕೇ ಏರಿಕೆಯಾಗಿದೆ.

ದೇಶದಲ್ಲಿ ಕಳೆದ ಎರಡು ವಾರಗಳಿಂದ ಸೋಂಕಿನಿಂದ ಸಾವನ್ನಪ್ಪುವರ ಸಂಖ್ಯೆ ೩೦೦ಕ್ಕೂ ಕಡಿಮೆ ಇದೆ.

ಜಗತ್ತಿನಲ್ಲಿ ಪ್ರತಿ ೧೦ ಲಕ್ಷಕ್ಕೆ ದಾಖಲಾಗುತ್ತಿರುವ ಸೋಂಕು ಮತ್ತು ಸಾವಿನ ಸಂಖ್ಯೆ ಭಾರತದಲ್ಲಿ ಅತಿ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ.

ರಷ್ಯಾ ,ಜರ್ಮನಿ ,ಬ್ರೆಜಿಲ್, ಫ್ರಾನ್ಸ್, ಅಮೆರಿಕಾ ಇಂಗ್ಲೆಂಡ್ ಇಟಲಿ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರತಿ ೧೦ ಲಕ್ಷಕ್ಕೆ ದಾಖಲಾಗುತ್ತಿರುವ ಸೋಂಕು ಮತ್ತು ಸಾವಿನ ಪ್ರಮಾಣ ಗಣನೀಯ ಏರಿಕೆಯಾಗಿದೆ.ಆದರೆ ಭಾರತದಲ್ಲಿ ಹೋಲಿಸಿದರೆ ಅತೀ ಕಡಿಮೆ ಎಂದು ಹೇಳಿದೆ.