ದೇಶದಲ್ಲಿ ಹೆಚ್ಚಿದ ಅಂಗಾಂಗ ದಾನ

ಮೋದಿ ಮನದ ಮಾತು
ನವದೆಹಲಿ,ಮಾ.೨೬- ದೇಶದಲ್ಲಿ ಅಂಗಾಂಗ ದಾನ ಪ್ರಕರಣಗಳು ಕಳೆದ ೧೦ ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
೨೦೧೩ ರಲ್ಲಿ ದೇಶದಲ್ಲಿ ೫,೦೦೦ ಕ್ಕಿಂತ ಕಡಿಮೆ ಅಂಗಾಂಗ ದಾನ ಪ್ರಕರಣಗಳು ಇದ್ದವು, ೨೦೨೨ ರಲ್ಲಿ ಅದು ೧೫,೦೦೦ ಕ್ಕೂ ಹೆಚ್ಚು ಪ್ರಕರಣಗಳಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.ಆಕಾಶವಾಣಿಯ ಮನದ ಮಾತು ಕಾರ್ಯಕ್ರಮದ ೯೯ನೇ ಸಂಚಿಕೆಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅಂಗಾಂಗ ದಾನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ದೇಶದಲ್ಲಿ ಮತ್ತೊಬ್ಬರಿಗೆ ಜೀವದಾನ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.ಅಂಗಾಂಗ ದಾನಕ್ಕಾಗಿ ಕಾಯುವವರು, ಕಾಯುವ ಪ್ರತಿ ಕ್ಷಣವನ್ನು ಹಾದುಹೋಗುವುದು ಕಷ್ಟ ಎಂದು ಅವರಿಗೆ ತಿಳಿದಿದೆ. ಈ ಎಲ್ಲಾ ಬೆಳವಣಿಗೆಯಲ್ಲಿ ಅಂಗಾಂದ ದಾನ ಪ್ರಕರಣ ಹೆಚ್ಚಾಗಿರುವುದು ಒಳ್ಳೆಯ ಬೆಳವಣೀಗೆ ಎಂದಿದ್ದಾರೆ.
ಮಹಿಳಾ ಸಬಲೀಕರಣ ಶ್ಲಾಘನೆ:
ಮಹಿಳಾ ಸಬಲೀಕರಣವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಪ್ಟನ್ ಶಿವ ಚೌಹಾಣ್ ಅವರನ್ನು ಉಲ್ಲೇಖಿಸಿ ಸಿಯಾಚಿನ್‌ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಧೈರ್ಯ ಸ್ಥೈರ್ಯ ಶ್ಲಾಘನೀಯ ಎಂದಿದ್ದಾರೆ.
ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರ ಬಗ್ಗೆಯೂ ಪ್ರಸ್ತಾಪಿಸಇದ ಅವರು. ಇತ್ತೀಚೆಗೆ ವಂದೇ ಭಾರತ್ ರೈಲನ್ನು ಓಡಿಸಿದ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದು ದೇಶದಲ್ಲಿ ಮಹಿಳಾ ಸಬಲೀಕರಣ ತೋರಿಸತ್ತಿದೆ ಎಂದಿದ್ಧಾರೆ.
ಉದಯೋನ್ಮುಖ ಭಾರತೀಯ ಶಕ್ತಿಯಲ್ಲಿ ಮಹಿಳಾ ಶಕ್ತಿ ಮಹತ್ವದ ಪಾತ್ರ ವಹಿಸುತ್ತಿದೆ. ನಾಗಾಲ್ಯಾಂಡ್‌ನಲ್ಲಿ, ೭೫ ವರ್ಷಗಳಲ್ಲಿ ಮೊದಲ ಬಾರಿಗೆ, ಇಬ್ಬರು ಮಹಿಳಾ ಶಾಸಕರು ತಮ್ಮ ಗೆಲುವಿನ ಮೂಲಕ ವಿಧಾನ ಸಭೆಯನ್ನು ತಲುಪಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಭಾರತ ಅಮೇರಿಕಾ ಮಿಷನ್ ಅಡಿಯಲ್ಲಿ ಶಾಂತಿಪಾಲನೆಯಲ್ಲಿ ಮಹಿಳಾ-ಮಾತ್ರ ತುಕಡಿಯನ್ನು ನಿಯೋಜಿಸಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಇಂದು, ಭಾರತದ ಸಾಮಥ್ರ್ಯವು ಹೊಸ ದೃಷ್ಟಿಕೋನದಿಂದ ಹೊರಹೊಮ್ಮುತ್ತಿದೆ ಮತ್ತು ನಮ್ಮ ಮಹಿಳಾ ಶಕ್ತಿಯು ಅದರಲ್ಲಿ ಬಹಳ ದೊಡ್ಡ ಪಾತ್ರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.