ದೇಶದಲ್ಲಿ ಸ್ಪುಟ್ನಿಕ್ 3ನೇ ಹಂತದ ಲಸಿಕೆ ಪ್ರಯೋಗಕ್ಕೆ ಹಸಿರು ನಿಶಾನೆ

ನವದೆಹಲಿ, ಅ 17-ರಷ್ಯಾದ ಸ್ಪುಟ್ನಿಕ್ ಇದು ಲಸಿಕೆಯ ಎರಡು ಮತ್ತು ಮೂರನೇ ಹಂತದ ಲಸಿಕೆ ಪ್ರಯೋಗ ಮಾನವರ ಮೇಲೆ ಪ್ತಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಡಾ.ರೆಡ್ಡಿ ಅವರಿಗೆ ಅನುಮತಿ ನೀಡಿದೆ.
ಕೊರೊನಾ ಲಸಿಕೆಯನ್ನು ಮೊದಲ ಬಾರಿಗೆ ರಷ್ಯಾ ಅಭಿವೃದ್ಧಿಪಡಿಸುತ್ತು.
ಈ ಲಸಿಕೆ ಯ ಪ್ರಯೋಗ ಬಹು ಕೇಂದ್ರ ಮತ್ತು ರಾಡಂ ನಿಯಂತ್ರಣ ಅಧ್ಯಯನದ ಮೂಲಕ ಪ್ರಯೋಗ ಮಾಡಲಿದ್ದು, ಸುರಕ್ಷತೆ ಹಾಗೂ ರೋಗ ನಿರೋಧಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಲು ರೆಡ್ಡಿ ಅವರಿಗೆ ಅನುಮತಿ ನೀಡಲಾಗಿದೆ ಎಂದು ರಷ್ಯಾ ನೇರ ಬಂಡವಾಳ ಹೂಡಿಕೆ ತಿಳಿಸಿದೆ.
ಲಸಿಕೆ ನೋಂದಣಿ ಮಾಡುವ ಮೊದಲು ರಷ್ಯಾ ಸಣ್ಣ ಪ್ರಮಾಣದಲ್ಲಿ ಜನರ ಮೇಲೆ ಪರೀಕ್ಷೆ ನಡೆಸಲಾಗಿತ್ತು. ಆದರೆ ಭಾರತದಲ್ಲಿ ದೊಡ್ಡ ಪ್ರಮಾಣದ ಜನರ ಮೇಲೆ ಪ್ರಯೋಗ ನಡೆಸುವ ವಿಷಯವನ್ನು ಡಾ.ರೆಡ್ಡಿ ಪ್ರಸ್ತಾಪಿಸಿದ್ದಾರೆ.
ಆರ್ ಡಿಐಎಫ್ ಮತ್ತು ಡಾ.ರೆಡ್ಡಿ ಸ್ಪುಟ್ನಿಕ್ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ ಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿತ್ರು. ಈ ಒಪ್ಪಂದದ ಪ್ರಕಾರ ಭಾರತಕ್ಕೆ 100 ದಶಲಕ್ಷ ಡೋಸ್ ಲಭ್ಯವಾಗಲಿದೆ.
ಈ ಮಧ್ಯೆ ಕೋವಿಡ್19- ಕುರಿತ ಮೂರನೇ ಲಸಿಕೆಯನ್ನು ಅಭಿವೃದ್ದಿಪಡಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ.