ದೇಶದಲ್ಲಿ ಸೋಂಕು ಹೆಚ್ಚಳ

ನವದೆಹಲಿ,ಜು.೩೦- ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತೆ ಏರುಮುಖದಲ್ಲಿದೆ. ಇಂದೂ ಕೂಡ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨೦,೪೦೮ ಮಂದಿ ಸೋಂಕು ಕಾಣಿಸಿಕೊಂಡಿದ್ದು ೫೪ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಜೊತೆಗೆ ೨೦,೯೫೮ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದಿನದ ಪಾಸಿಟಿವಿಟಿ ಪ್ರಮಾಣ ಶೇ.೫.೦೫ರಷ್ಟು ಇದೆ. ಒಟ್ಟು ಸೋಂಕಿನ ಪಾಸಿಟಿವಿಟಿ ಸಂಖ್ಯೆ ೧,೪೩,೩೮೪ ಮಂದಿಯಲ್ಲಿ ಸೋಂಕು ಇದೆ. ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ೪.೩೮ ಕೋಟಿಗೆ ಏರಿಕೆಯಾಗಿದೆ. ಜೊತೆಗೆ ಇಲ್ಲಿಯ ತನಕ ೪,೩೩,೩೦,೪೪೨ ಮಂದಿ ಸೋಂಕಿತರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಸೋಂಕಿನಿಂದ ಇಲ್ಲಿಯ ತನಕ ಮೃತಪಟ್ಟವರ ಸಂಖ್ಯೆ ೫,೨೬,೩೧೨ ಕ್ಕೆ ಏರಿಕೆಯಾಗಿದೆ.ಹೊಸದಾಗಿ ೩೩,೮೭,೧೭೩ ಡೋಸ್ ಲಸಿಕೆ ನೀಡಲಾಗಿದ್ದು ಇದುವರೆಗೂ ಒಟ್ಟು ೨೦೩,೯೪,೩೩,೪೮೦ ಡೋಸ್ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ದಿನದ ಪಾಸಿಟಿವಿ ಪ್ರಮಾಣ ಶೇ.೫.೦೫ ರಷ್ಟು ಇದ್ದು ವಾರದ ಪಾಸಿಟಿವಿಟಿ ಪ್ರಮಾಣ ಶೇ.೪.೯೨ ರಷ್ಟು ಇದೆ. ಜೊತೆಗೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೩ ರಷ್ಟು ಇದೆ.
ಸೋಂಕು ಸಂಖ್ಯೆ ಏರಿಳಿತ ಹಿನ್ನೆಲೆಯಲ್ಲಿ ಚೇತರಿಕೆ ಪ್ರಮಾಣ ಶೇ.೯೮.೪೮ ರಷ್ಟು ಇದೆ. ನಿನ್ನೆ ೪,೦೪,೩೯೯ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೮೭,೪೮ ಕೋಟಿ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.