ದೇಶದಲ್ಲಿ ಸೋಂಕು ಹೆಚ್ಚಳ

ನವದೆಹಲಿ,ಆ.೩- ದೇಶದಲ್ಲಿ ನಿನ್ನೆ ಕಡಿಮೆಯಾಗಿದ್ದ ಕೊರೊನಾ ಸೋಂಕು ಇಂದು ಮತ್ತೆ ಹೆಚ್ಚಾಗಿದೆ. ಈ ಮೂಲಕ ಸೋಂಕಿನ ಏರಿಳಿತದಲ್ಲಿ ಆತಂಕ ಹೆಚ್ಚಿಸಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧೭,೧೩೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ೧೯,೮೨೩ ಮಂದಿ ಸೋಂಕಿತರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೊಸದಾಗಿ ೨೩,೪೯,೬೫೧ ಡೋಸ್ ಲಸಿಕೆ ನೀಡಲಾಗಿದ್ದು ಇಲ್ಲಿಯ ತನಕ ೨೦೪,೮೪ ಕೋಟಿ ಡೋಸ್ ಲಸಿಕೆ ನೀಡಲಾಗಿದೆ.ಇದರಲ್ಲಿ ೯೩.೩೬ ಕೋಟಿ ಡೋಸ್ ಎರಡನೇ ಡೋಸ್, ೯.೪೭ ಡೋಸ್ ಹೆಚ್ಚುವರಿ ಡೋಸ್ ಲಸಿಕೆ ನೀಡಿದ್ದು ಇನ್ನುಳಿದ ಡೋಸ್ ಮೊದಲ ಡೋಸ್ ಲಸಿಕೆಯಾಗಿದೆ ಎಂದು ಸಚಿವಾಲಯ ಹೇಳಿದೆ.

ಸೋಂಕು ಸಂಖ್ಯೆ ಏರಿಳಿತದ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೩೭,೦೫೭ಕ್ಕೆ ಕುಸಿದಿದೆ. ದಿನದ ಪಾಸಿಟಿವಿಟಿ ಪ್ರಮಾಣ ಶೇ.೩.೬೯ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ. ೪.೬೭ ರಷ್ಟು ಇದೆ. ಅಲ್ಲದೆ. ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೧ ರಷ್ಟು ಇದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸೋಂಕು ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಇದುವರೆಗೆ ಕೊರೊನಾ ಸಂಖ್ಯೆ ೪.೩೮ಕೋಟಿಗೆ ಏರಿಕೆಯಾಗಿದೆ. ಜೊತೆಗೆ ಇಲ್ಲಿಯ ತನಕ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ೪,೩೪,೦೩,೬೧೦ಕ್ಕೆ ಏರಿಕೆಯಾಗಿದೆ.

ಹೊಸದಾಗಿ ೪,೬೪,೯೧೯ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ಒಟ್ಟಾರೆ ೮೭.೬೩ ಕೋಟಿ ಮಂದಿಗೆ ಪರೀಕ್ಷೆ ಮಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.