ದೇಶದಲ್ಲಿ ಸೋಂಕು ಮತ್ತಷ್ಟು ಇಳಿಕೆ

ನವದೆಹಲಿ,ಸೆ.೨೫- ದೇಶದಲ್ಲಿ ಕೊರೊನಾ ಸೋಂಕು .ನಿನ್ನೆ ದಾಖಲಾಗಿದ್ದ ಸಂಖ್ಯೆಗಿಂತ ಇಂದು ಶೇಕಡ ೫.೬ ರಷ್ಟು ಕಡಿಮೆ ಸೋಂಕು ದೃಢಪಟ್ಟಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೨೯,೬೧೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.೨೯೦ ಮಂದಿ ಮೃತಪಟ್ಟಿದ್ದು ೨೮,೦೪೬ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಏರಿಳಿತವಾಗುತ್ತಿದ್ದರೂ ಚೇತರಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಟ್ಟಾರೆ ಚೇತರಿಕೆ ಪ್ರಮಾಣ ಶೇಕಡಾ ೯೭.೭೮ ಹೆಚ್ಚಾಗಿದೆ.

ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಒಟ್ಟಾರೆಯಾಗಿ ಸೋಂಕಿನ ಸಂಖ್ಯೆ. ೩.೩೪ ಕೋಟಿಗೆ ಹೆಚ್ಚಳವಾಗಿದೆ.ಅಲ್ಲದೆ ಸೋಂಕಿನಿಂದ ಇದುವರೆಗೂ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ ೩,೨೮,೭೬,೩೧೯ ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ.

ಸೋಂಕಿನಿಂದ ಇದುವರೆಗೂ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ೪,೪೬,೬೫೮ ಹೆಚ್ಚಳವಾಗಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.

ಸಕ್ರಿಯ ಪ್ರಕರಣ ಏರಿಳಿತ:

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಏರಿಳಿತವಾಗುತ್ತಿರುವ ಹಿನ್ನಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಳಿತವಾಗುತ್ತದೆ. ಸದ್ಯ ದೇಶದಲ್ಲಿ ೩,೦೧,೪೪೨ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೮೪ ಕೋಟಿಗೆ ಲಸಿಕೆ

ದೇಶದಲ್ಲಿ ಇದುವರೆಗೂ ಬರೋಬ್ಬರಿ ೮೪ ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೭೧,೦೪,೦೫೧ ಮಂದಿಗೆ ಲಸಿಕೆ ನೀಡುವ ಜೊತೆಗೆ ಇಲ್ಲಿಯ ತನಕ ಒಟ್ಟಾರೆಯಾಗಿ ೮೪,೮೯,೨೯,೧೬೦ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತನ್ನ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.
ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಎಲ್ಲಾ ನಾಗರಿಕರಿಗೆ ಲಸಿಕೆ ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಈ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಲಸಿಕೆ ಹಾಕುವ ಪ್ರಮಾಣವನ್ನು ಹೆಚ್ಚು ಮಾಡಲಾಗುತ್ತದೆ.
ಜನವರಿ ೧೬ರಿಂದ ಲಸಿಕೆ ನೀಡಿಕೆ ಅಭಿಯಾನ ಆರಂಭವಾದಾಗಿನಿಂದ ಇಲ್ಲಿಯತನಕ ವಿಶ್ವದಲ್ಲಿ ಅತಿ ಹೆಚ್ಚಿನ ಮಂದಿಗೆ ಲಸಿಕೆ ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ