ದೇಶದಲ್ಲಿ ಸೋಂಕು ಏರಿಕೆ

ನವದೆಹಲಿ, ಮೇ ೫- ದೇಶದಲ್ಲಿ ಕೊರೊನಾ ೪ನೇ ಅಲೆ ಆತಂಕದ ನಡುವೆ ಇಂದು ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಕಳೆದ ೨೪ ಗಂಟೆಯಲ್ಲಿ ನಿನ್ನೆಗಿಂತ ಹೆಚ್ಚು ಅಂದರೆ ೩ ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿ, ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೩,೨೦೫ ಹೊಸ ಪ್ರಕರಣಗಳು ವರದಿಯಾಗಿದೆ, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ೪,೩೦,೮೮,೧೧೮ ಕ್ಕೆ ತಲುಪಿದೆ. ಈ ಅವಧಿಯಲ್ಲಿ ದೇಶದಲ್ಲಿ ೩೧ ಸಾವುಗಳು ಸಹ ದಾಖಲಾಗಿವೆ, ಇದರೊಟ್ಟಿಗೆ ಒಟ್ಟು ಸತ್ತವರ ಸಂಖ್ಯೆ ೫೨೩,೯೨೦ ಕ್ಕೆ ತಲುಪಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ದೈನಂದಿನ ಸಕಾರಾತ್ಮಕತೆಯ ದರವು ಶೇಕಡಾ ೧.೦೭ ರಷ್ಟಿದ್ದರೆ, ವಾರದ ಧನಾತ್ಮಕತೆಯ ದರವು ಶೇಕಡಾ ೦.೭೦ ರಷ್ಟಿದೆ ಅಂತ ತಿಳಿಸಿದೆ.
ಇನ್ನು ದೇಶದಲ್ಲಿ ೧೯,೫೦೯ ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ೨೪ ಗಂಟೆಯಲ್ಲಿ ೨,೮೦೨ ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ ೪,೨೫,೪೪,೬೮೯ ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಇನ್ನು ಭಾರತದಲ್ಲಿ ಒಂದೇ ೪,೧೯,೫೫೨ ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈ ವರೆಗೂ ೮೩,೮೬,೨೮,೨೫೦ ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ನಿನ್ನೆ ೩,೨೭,೩೨೭ ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ ೧,೮೯,೪೮,೦೧,೨೦೩ ಡೋಸ್ ಲಸಿಕೆ ಹಾಕಲಾಗಿದೆ.