ದೇಶದಲ್ಲಿ ಸೋಂಕು ಇಳಿಕೆ

ನವದೆಹಲಿ,ಆ.೨- ದೇಶದಲ್ಲಿ ಏರಿಕೆಯಾಗಿದ್ದ ಕೊರೊನಾ ಸೋಂಕು ಸಂಖ್ಯೆ ಇಳಿಮುಖವಾಗಿದ್ದು ಸೋಂಕುಗಿಂತ ಚೇತರಿಕೆ ಮತ್ತಷ್ಟು ಹೆಚ್ಚಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧೩,೭೩೪ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ೧೭,೮೯೭ ಮಂದಿ ಸೋಂಕಿತರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಹೀಗಾಗಿ ಚೇತರಿಕೆಯ ಒಟ್ಟು ಸಂಖ್ಯೆ ಶೇ.೯೮.೪೯ ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸೋಂಕು ಸಂಖ್ಯೆ ಏರಿಳಿತ ಹಿನ್ನೆಲೆಯಲ್ಲಿ ಒಟ್ಟು ಸೋಂಕಿನ ಸಂಖ್ಯೆ ೪.೩೮ ಕೋಟಿಗೆ ಏರಿಕೆಯಾಗಿದ್ದು ಇಲ್ಲಿಯ ತನಕ ೪,೩೩,೮೩,೭೮೭ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.
ದಿನದ ಪಾಸಿಟಿವಿಟಿ ಪ್ರಮಾಣ ಶೇ.೩.೪೩ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೪.೭೯ ರಷ್ಟು ಇದ್ದು ದಿನದ ಪಾಸಿವಿಟಿ ಪ್ರಮಾಣ ಶೇ.೦.೩೨ ರಷ್ಟು ಇದೆ ಎಂದು ಹೇಳಿದೆ.
ಹೊಸದಾಗಿ ೨೬,೭೭,೪೦೫ ಡೋಸ್ ಲಸಿಕೆ ಹಾಕಲಾಗಿದ್ದು ಇದುವರೆಗೆ ೨೦೪,೦೬ ಕೋಟಿಗೆ ಏರಿಕೆಯಾಗಿದ್ದು ಓ ಪೈಕಿ ೯೩,೩೩ ಕೋಟಿ ಡೋಸ್ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು ೯.೨೮ ಕೋಟಿ ಡೋಸ್ ಹೆಚ್ಚುವರಿ ಡೋಸ್ ನೀಡಲಾಗಿದೆ. ಇನ್ನುಳಿದ ಡೋಸ್ ಮೊದಲ ಡೋಸ್ ಲಸಿಕೆ ನೀಡಲಾಗಿದೆ.
ದೇಶದಲ್ಲಿ ಇದುವರೆಗೆ ೪,೧೧,೧೦೨ ಡೋಸ್ ಲಸಿಕೆ ನೀಡಲಾಗಿದ್ದು ಈವರೆಗೆ ೮೭.೫೮ ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.