ದೇಶದಲ್ಲಿ ಸಕ್ರಿಯ ಸೋಂಕು ಹೆಚ್ಚಳ ಆಮ್ಲಜನಕಕ್ಕೆ ಆಸ್ಪತ್ರೆಗಳ ಪರದಾಟ

People wait to refill medical oxygen cylinders at a charging station on the outskirts of Prayagraj, India, Friday, April 23, 2021. India put oxygen tankers on special express trains as major hospitals in New Delhi on Friday begged on social media for more supplies to save COVID-19 patients who are struggling to breathe. India's underfunded health system is tattering as the world's worst coronavirus surge wears out the nation, which set another global record in daily infections for a second straight day with 332,730. (AP Photo/Rajesh Kumar Singh)

ನವದೆಹಲಿ,ಏ.೨೫- ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಬಿಗಡಾಯಿಸುವ ಹಂತ ತಲುಪಿದ್ದು, ಒಂದು ವಾರದ ಅವಧಿಯಲ್ಲಿ ದೇಶದಲ್ಲಿ ೨೫ಲಕ್ಷಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕಾಗಿ ಹೋರಾಟ ನಡೆಸುತ್ತಿರುವ ದಯನೀಯ ಪರಿಸ್ಥಿತಿ ಬಂದೊದಗಿದೆ.
ದೇಶದಲ್ಲಿ ೨ನೇ ಎಲೆ ಅಬ್ಬರಿಸುತ್ತಿದ್ದು, ನಿಯಂತ್ರಣಕ್ಕೆ ಬಾರದಿರುವುದು ಕೇಂದ್ರ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ. ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಆದರೆ, ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ೨೪ ತಾಸುಗಳ ಅವಧಿಯಲ್ಲಿ ೨,೬೨೪ ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಪರಿಸ್ಥಿತಿ ಘೋರವಾಗಿದ್ದು, ೬೭ ಸಾವಿರ ಹೊಸ ಪ್ರಕರಣಗಳು ದಾಖಲಾಗಿದ್ದು, ೬೭೬ ಜನರು ಸಾವನ್ನಪ್ಪಿದ್ದಾರೆ. ೩೮ ಸಾವಿರ ಹೊಸ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದು, ೨೨೩ ಮಂದಿ ಬಲಿಯಾಗಿದ್ದಾರೆ.
ಕೇರಳದಲ್ಲಿ ೨೬ ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿದ್ದರೆ, ರಾಜಧಾನಿ ದೆಹಲಿಯಲ್ಲಿ ೨೪ ಸಾವಿರ ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿದ್ದು, ೩೫೭ ಮಂದಿ ಸಾವನ್ನಪ್ಪಿದ್ದಾರೆ.
ಛತ್ತೀಸ್‌ಘಡದಲ್ಲೂ ಸೋಂಕಿನ ಪ್ರಮಾಣ ಹೆಚ್ಚಳವಾಗಿದ್ದು, ೧೪ ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ-ಅಂಶ ನೀಡಿದೆ.
ಗುಜರಾತ್, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ೧೪ ಸಾವಿರ ಹೊಸ ಪ್ರಕರಣಗಳು ಪತ್ತೆಯಾದರೆ, ಮಧ್ಯಪ್ರದೇಶ, ಬಿಹಾರದಲ್ಲಿ ೧೨ ಸಾವಿರ, ಆಂಧ್ರ ಪ್ರದೇಶದಲ್ಲಿ ಹೊಸದಾಗಿ ೧೧ ಸಾವಿರ ಪ್ರಕರಣಗಳು ದಾಖಲಾಗುತ್ತಿವೆ.
ದೇಶದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಮ್ಲಜನಕದ ಕೊರತೆ ಕಾಣಿಸಿಕೊಂಡಿದೆ.
ರೋಗಿಗಳಿಗೆ ತಕ್ಷಣಕ್ಕೆ ಆಮ್ಲಜನಕದ ಅವಶ್ಯಕತೆ ಇದ್ದು, ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದು ಆಸ್ಪತ್ರೆಗಳನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.