ದೇಶದಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಿ: ಪ್ರಧಾನಿಗೆ ಡಾ. ಸಿಂಗ್ ಪತ್ರ

ನವದೆಹಲಿ, ಏ.18- ದೇಶದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಪ್ರಮಾಣವನ್ನು ಹೆಚ್ಚಳ ಮಾಡಿ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ದೇಶದ ಎಲ್ಲ ಜನರಿಗೂ ಲಸಿಕೆ ಹಾಕುವ ಸಂಬಂಧ ಅಗತ್ಯ ನೀತಿಯನ್ನು ಶೀಘ್ರವೇ ಜಾರಿಗೆ ತನ್ನಿ ಎಂದು ಕೂಡ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು ಸದ್ಯ ದೇಶದಲ್ಲಿ ನೀಡುತ್ತಿರುವ ಲಸಿಕೆ ಪ್ರಮಾಣ ದೇಶದ ಜನಸಂಖ್ಯೆಗೆ ಸಾಕಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಲಸಿಕೆ ಹೆಚ್ಚಳ ಸೇರಿದಂತೆ ಐದು ಸಲಹೆಗಳನ್ನು ತುರ್ತಾಗಿ ಈಡೇಸಲು ಕಿವಿ ಮಾತು ಹೇಳಿದ್ದಾರೆ.

ಸದ್ಯ ನೀಡುತ್ತಿರುವ ಲಸಿಕೆ ಯಾವುದಕ್ಕೂ ಸಾಕಾಗುತ್ತಿಲ್ಲ‌ ಹೀಗಾಗಿ ಲಸಿಕೆ ಹೆಚ್ಚಳ‌ ಮಾಡಿ. ಲಸಿಕೆಯನ್ನು ಎಲ್ಲರಿಗೂ ಹಾಕಲು ಅಗತ್ಯ ಕ್ರಮಕೈಗೊಳ್ಳಿ, ಲಸಿಕೆ ಉತ್ಪಾದನಾ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡುವಂತೆಯೂ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಮುಂದಿನ 6 ತಿಂಗಳಿಗೆ ಆಗುವಷ್ಟು ಲಸಿಕೆಯನ್ನು ಈಗಲೇ ಆರ್ಡರ್ ಮಾಡಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಲಸಿಕೆಯನ್ನು ಅಗತ್ಯ ಪ್ರಮಾಣದಲ್ಲಿ ರವಾನೆ ಮಾಡಿ ಎಂದು ಸಲಹೆ ನೀಡಿದ್ದಾರೆ.

45 ವರ್ಷ ಒಳಗಿರುವವರಿಗು ಲಸಿಕೆ ಹಾಕಿ:

ದೇಶದಲ್ಲಿ 45 ವರ್ಷ ದಾಟಿದವರಿಗೆ ಲಸಿಕೆ ಹಾಕಲಾಗುತ್ತದೆ ಹೀಗಾಗಿ ಅದಕ್ಕೂ ಒಳಗಿರುವ ಮಂದಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಾಗಿರುವ ಲಸಿಕೆಯನ್ನು ಪೂರೈಕೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿರುವ ಅವರು, ದೇಶದ ಎಲ್ಲಾ ಔಷಧ ತಯಾರಿಕಾ ಸಂಸ್ಥೆಗಳಿಗೆ ಶೀಘ್ರಗತಿಯಲ್ಲಿ ಲಸಿಕೆ ಉತ್ಪಾದನೆ ಮಾಡುವಂತೆ ಸೂಚಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆಗೆ ಮನ್ನಾ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಗೆ ಪತ್ರ ಬರೆದು ಲಸಿಕೆ ವಿಷಯದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕು.ಈ ಮೂಲಕ ದೇಶದ ಜನರ ಪ್ರಾಣ ಉಳಿಸಲು ಮುಂದಾಗಿ ಎಂದು ಮನವಿ ಮಾಡಿದ್ದಾರೆ

ದೇಶದಲ್ಲಿ ಪ್ರತಿದಿನ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಾ‌ ಮನಮೋಹನ್ ಸಿಂಗ್ ಅವರು ಪ್ರಧಾನಿಗೆ ಪತ್ರ ಬರೆದು ಈ ಸಲಹೆ ನೀಡಿದ್ದಾರೆ