ದೇಶದಲ್ಲಿ ರಸಗೊಬ್ಬರ ಕೊರತೆಯಿಲ್ಲ: ಕೇಂದ್ರಸಚಿವ ಖೂಬಾ

ಬೀದರ,ಆ 5: ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ರಾಸಾಯನಿಕ
ಹಾಗೂ ರಸಗೊಬ್ಬರಗಳ ಖಾತೆ ಸಚಿವ ಭಗವಂತಖೂಬಾ ಅವರು ರಸಗೊಬ್ಬರ ವಿಷಯದ ಕುರಿತು ತೆಲಂಗಾಣ ರಾಜ್ಯದಖಮ್ಮಾ ಲೋಕಸಭಾ ಕ್ಷೇತ್ರದ ಸಂಸದ ನಾಮಾನಾಗೇಶ್ವರರಾವ ಅವರಿಗೆ ಉತ್ತರಿಸಿ, ದೇಶದಲ್ಲಿ ರಸಗೊಬ್ಬರದ ಕೊರತೆಯಿಲ್ಲವೆಂದು ಸ್ಪಷ್ಟಪಡಿಸಿದರು.
ದೇಶದ ಆಯಾ ರಾಜ್ಯಗಳ ಬೇಡಿಕೆಗಳ ಅನುಗುಣವಾಗಿ 100ಪ್ರತಿಶತ ರಸಗೊಬ್ಬರ ತಲುಪಿಸಲಾಗಿದೆ, ಐ.ಎಫ್.ಎಸ್.ಎಮ್.ವ್ಯವಸ್ಥೆಯೊಂದಿಗೆ ರಾಜ್ಯ ಸರ್ಕಾರಕ್ಕೆ ಅವಶ್ಯಕತೆಗೆಬೇಕಾಗುವಷ್ಟು ನಾವು ಎಲ್ಲಾ ರಾಜ್ಯಗಳಿಗೆ ರಸಗೊಬ್ಬರತಲುಪಿಸುತ್ತಿದ್ದೇವೆ, ಇದರಲ್ಲಿ ಶೇ 90 ರಸಗೊಬ್ಬರ ರೈಲ್ವೆ ಮೂಲಕ ತಲುಪಿಸಲಾಗುತ್ತಿದೆ.ಪ್ರತಿ ವರ್ಷ ದೇಶಕ್ಕೆ 350 ಲಕ್ಷ ಮೇಟ್ರಿಕ್ ಟನ್ ರಸಗೊಬ್ಬರಬೇಕಾಗಿದ್ದು, ಅದರಲ್ಲಿ ತೆಲಂಗಾಣ ಸರ್ಕಾರಕ್ಕೆ ಇಲ್ಲಿಯವರೆಗೆ
7.24ಲಕ್ಷ ಮೆ.ಟನ್ ನೀಡಲಾಗಿದೆ, ಇವತ್ತಿನ ಕ್ಲೋಸಿಂಗ್ ಸ್ಟಾಕ್ 5.03ಲಕ್ಷ ಮೆಟ್ರಿಕ್ ಟನ್ ಇರುತ್ತದೆ ಎಂದು ತಿಳಿಸಿದರು.
ಇದರ ಜೊತೆಗೆ ರೈತರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆಪ್ರಧಾನಮಂತ್ರಿ ನರೇಂದ್ರ ಮೋದಿ ಅವರು,ಅಂತರಾಷ್ಟ್ರೀಯ ಮಟ್ಟದಲ್ಲಿ 4 ವರ್ಷಗಳಿಂದ ರಸಗೊಬ್ಬರಗಳ ದರ ನಿರಂತರವಾಗಿ ಹೆಚ್ಚಳವಾಗಿದ್ದರೂ ನಮ್ಮಲ್ಲಿ ಯಾವುದೇ
ದರ ಏರಿಕೆ ಮಾಡಿಲ್ಲಾ, 2018-19 ರಲ್ಲಿ 73,000 ಕೋಟಿನೀಡಲಾಗಿದ್ದ
ಸಬ್ಸಿಡಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಏರಿಕೆಯಾಗುತ್ತಿರುವದಿಂದ 2022-23ರಲ್ಲಿ 2,54,841 ಕೋಟಿ
ರೂಪಾಯಿಗಳ ಸಬ್ಸಿಡಿಯನ್ನು ದೇಶದ ರೈತರ ಗೊಬ್ಬರಗಳಿಗೆನೀಡಲಾಗಿದೆ ಎಂದು ತಿಳಿಸಿದರು.ಮೋದಿ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದ ಭಾರತದಲ್ಲಿ ಪ್ರತಿ 45 ಕೆ.ಜಿ ಯೂರಿಯಾ ಕೇವಲ 266 ರೂಪಾಯಿಯಲ್ಲಿ ಸಿಗುತ್ತದೆ, ನೆರೆ ದೇಶಗಳಾದ ಬಾಂಗ್ಲಾದೇಶದಲ್ಲಿ 720-, ಪಾಕಿಸ್ತಾನದಲ್ಲಿ 800-,ಚೈನಾದಲ್ಲಿ 2100- ಮತ್ತು ಯು.ಎಸ್.ಎನಲ್ಲಿ 3000- ಪ್ರತಿ 45 ಕೆ.ಜಿಯೂರಿಯಾಗೆ ದುಡ್ಡು ಕೊಡಬೇಕಾಗುತ್ತದೆ.ವಿಶ್ವದಲ್ಲೆ ಅತಿ ಕಡಿಮೆ ಬೆಲೆಗೆ ಯೂರಿಯಾ ಹಾಗೂ ಇತರೆರಸಗೊಬ್ಬರಗಳು ಸಿಗುವ ದೇಶ ಒಂದೆ ಒಂದು ಅದು ಭಾರತ ದೇಶ ಎಂದು ತಿಳಿಸಿದರು.