ದೇಶದಲ್ಲಿ ಮೊದಲ ಸರ್ಕಾರಿ ಒಡೆತನದ ಆಭರಣ ಮಳಿಗೆ ಪ್ರಾರಂಭ: ನಿರಾಣಿ

ಬೆಂಗಳೂರು,ಮಾ.18- ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಇದೀಗ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ.

ರಾಷ್ಟ್ರದಲ್ಲೇ ಪ್ರಥಮ ಎನ್ನಲಾದ ಸರಕಾರಿ ಒಡೆತನದ ಆಭರಣಗಳ ಮಳಿಗೆ- ಜ್ಯುವೆಲ್ಲರಿ ಶಾಪ್ ರಾಜ್ಯದಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ.
ಈ ಮಳಿಗೆಗಳನ್ನು ಸರಕಾರವೇ ನಿರ್ವಾಹಣೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಭರಣಗಳನ್ನು ತಯಾರಿಸಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಳಿಗೆಗಳನ್ನು
ತೆರೆಯಲಾಗುವುದು.ಪ್ರಾರಂಭಿಕವಾಗಿ ಬೆಂಗಳೂರು, ಮೈಸೂರು ಸೇರಿದಂತೆರಾಜ್ಯದ ಪ್ರಮುಖ ನಗರಗಳಲ್ಲಿ
ಈ ಮಳಿಗೆಗಳು ಕಾರ್ಯಾರಂಭ ಮಾಡಲಿದೆ.
ರಾಜ್ಯದಲ್ಲಿ ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ಯವಾದರೆ, ಮುಂಬರುವ ದಿನಗಳಲ್ಲಿ ಹೊರರಾಜ್ಯಗಳಲ್ಲೂ ಈ ಆಭರಣ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ ಎಂದು ಹೇಳಿದರು.

ಮೈಸೂರು ಸಿಲ್ಕ್ , ಮೈಸೂ ಸ್ಯಾಂಡಲ್ ಸೋಪ್, ಕಾವೇರಿ ಕೈ ಮಗ್ಗ ( ಹ್ಯಾಂಡ್ ಲೂಮ್ಸ್ ) ಮಾದರಿಯಲ್ಲಿ ಸರ್ಕಾರಿ ಅಭರಣಗಳ ಮಳಿಗೆ ತೆರೆಯುವ ಮಹತ್ವದ ನಿರ್ಧಾರವನ್ನು ‌
ಇಲಾಖೆ ತೆಗೆದುಕೊಂಡಿದೆ ಎಂದರು

ಚಿನ್ನದ ನಾಣ್ಯ ಬಿಡುಗಡೆ:

ಮದುವೆ, ಸಮಾರಂಭ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಲ್ಲಿ ಗ್ರಾಹಕರಿಗೆ ಉಡುಗೊರೆಯಾಗಿ ನೀಡಲು ಅನುಕೂಲವಾಗುವಂತೆ ಇನ್ನು ಮುಂದೆ ಕರ್ನಾಟಕದ ಹೆಮ್ಮೆಯ ಲಾಂಛನವಾದ
” ಗಂಡುಬೇರುಂಡ” ಗುರುತಿನ ಚಿನ್ನದ ನಾಣ್ಯಗಳನ್ನು ಸಹಾ ಹೊರತರಲು ಇಲಾಖೆ ತೀರ್ಮಾನಿಸಿದೆ ಎಂದು ಅವರು ಹೇಳಿದರು.

ಚಿನ್ನದ ನಾಣ್ಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಇದನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಅಭರಣ ಮಾಲೀಕರ ಸಂಘ ಸಭೆಯಲ್ಲಿ ಮನವಿ ಮಾಡಿತು.ಇದಕ್ಕೂ ಅಸ್ತು ಎಂದ ಸಚಿವ ನಿರಾಣಿ ಅವರು,ಶೀಘ್ರದಲ್ಲೇ ಆಭರಣ ಮಳಿಗೆಗಳಲ್ಲಿ ಚಿನ್ನದ ನಾಣ್ಯಗಳನ್ನು ಹೊರತರುವುದಾಗಿ ತಿಳಿಸಿದ್ದಾರೆ.