ದೇಶದಲ್ಲಿ ಮುಕ್ತ ಮಾರುಕಟ್ಟೆಗೆ ಗೋದಿ, ಅಕ್ಕಿ ಕೇಂದ್ರದಿಂದ ಬಿಡುಗಡೆ

ನವದೆಹಲಿ,ಆ.13- ದೇಶದಲ್ಲಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಇ-ಹರಾಜಿನಲ್ಲಿ 50 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರತಿ ಕ್ವಿಂಟಲ್‌ಗೆ 200 ರೂಪಾಯಿ ಕಡಿತ ಮಾಡಲಾಗಿದೆ. ಹೀಗಾಗಿ ಪ್ರತಿ ಕ್ವಿಂಟಲ್ ಬೆಲೆ 2 ಸಾವಿರದ 900 ರೂಪಾಯಿನಲ್ಲಿ ಮಾರಾಟ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಮಾರುಕಟ್ಟೆಗೆ ಬಿಡುವುದರಿಂದ ಹಣದುಬ್ಬರ ನಿಯಂತ್ರಣ, ಅಗತ್ಯ ಪ್ರಮಾಣದಲ್ಲಿ ಆಹಾರದ ಲಭ್ಯತೆಗೆ ಸಹಕಾರಿಯಾಗಲಿದೆ. ಭಾರತೀಯ ಆಹಾರ ನಿಗಮ ಅಕ್ಕಿ ಮತ್ತು ಗೋಧಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.

ಬೆಲೆ ಏರಿಕೆ,ಹಣದುಬ್ಬರ ಸೇರಿದಂತೆ ವಿವಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾದ್ಯವಾಗಲಿದೆ. ಜೊತೆಗೆ ಅಕ್ಕಿ ಮತ್ತು ಗೋದಿ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ‌ ದಾಸ್ತಾನ ಅಭಾವವೂ ಕಡಿಮೆಯಾಗಲಿದೆ ಎಂದು ಕೇಂದ್ರ ಆಹಾತ ಮತ್ತು ನಾಗರಿಕ ಸರಬರಾಜು ಸಚಿವಾಲಯ ತನ್ನ ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.

ಭಾರತೀಯ ಆಹಾರ ನಿಗಮದ ಮೂಲಕ 50 ಲಕ್ಷ ಮೆಟ್ರಿಕ್ ಟನ್ ಹಾಗು 25 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.