ದೇಶದಲ್ಲಿ ಮತ್ತೇ ಸೋಂಕು ಹೆಚ್ಚಳ

ನವದೆಹಲಿ, ನ.೨೬- ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಗುವಂತೆ ಮಾಡಿದೆ.
ನೆನ್ನೆ ದಾಖಲಾಗಿದ್ದ ಸೋಂಕು ಸಂಖ್ಯೆಗಿಂತ ಇದು ಶೇಕಡ ೧೫.೬ ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ದಾಖಲಾಗಿದೆ. ಕೆಲವು ದಿನಗಳು ಸೋಂಕು ಕಡಿಮೆಯಾಗಿ ಮತ್ತೆ ಕೆಲವು ದಿನಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಆತಂಕಕ್ಕೆ ಗುರಿಮಾಡಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೧೦,೫೪೯ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೪೮೮ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಜೊತೆಗೆ ೯,೮೬೮ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿತನಕ ಒಟ್ಟಾರೆಯಾಗಿ ಸೋಂಕಿನ ಸಂಖ್ಯೆ ೩,೪೫,೫೫,೪೩೧ ಕ್ಕೆ ಹೆಚ್ಚಳವಾಗಿದೆ. ಜೊತೆಗೆ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ಇಲ್ಲಿಯತನಕ ೩,೩೯,೭೭,೮೩೦ ಕ್ಕೆ ಹೆಚ್ಚಳವಾಗಿದೆ.
ಸೋಂಕಿನಿಂದ ಇಲ್ಲಿಯತನಕ ಮೃತಪಟ್ಟವರ ಒಟ್ಟು ಸಂಖ್ಯೆ ೪,೬೭,೪೬೮ ಕ್ಕೆ ಏರಿಕೆಯಾಗಿದ್ದು ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ದೇಶದಲ್ಲಿ ಕಳೆದ ಹಲವು ದಿನಗಳಿಂದ ಕಡಿಮೆಯಾಗುತ್ತಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ಏರುಮುಖದ ಸಾಗಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೧೦,೧೩೩ ಮಂದಿಯಲ್ಲಿ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದ ಒಟ್ಟು ಸೋಂಕು ಸಂಖ್ಯೆಯ ಬಗ್ಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡಾ ೦.೩೨ ರಷ್ಟು ಇದೆ. ೨೦೨೦ ರ ಮಾರ್ಚ್ ಬಳಿಕ ಅತಿ ಕಡಿಮೆ ಪ್ರಮಾಣದ ಸೋಂಕು ಇದಾಗಿದೆ.
ಕೊರೊನಾ ಸೋಕಿನ ದಿನದ ಪಾಸಿಟಿವಿಟಿ ಪ್ರಮಾಣ ಮತ್ತು ವಾರದ ಸರಾಸರಿ ಪಾಸಿಟಿವಿಟಿ ಪ್ರಮಾಣ ಎರಡು ಕೂಡ ಹಲವು ದಿನಗಳ ನಂತರ ಶೇ.೦.೮೯ ರಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಇರುವರೆಗೂ ೧೨೦.೨೭ ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಜೊತೆಗೆ ೬೩.೭೧ ಕೋಟಿ ಜನರಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಚೇತರಿಕೆ ಸ್ಥಿರ
ದೇಶದಲ್ಲಿ ಕೋರೊನಾ ಸೋಂಕು ಸಂಖ್ಯೆ ಕಳೆದ ಹಲವು ದಿನಗಳಿಂದ ಏರುಮುಖದಲ್ಲಿತ್ತು. ಇದೀಗ ಈ ಸಂಖ್ಯೆ ಸ್ಥಿರವಾಗಿದೆ.
ದೇಶದಲ್ಲಿ ಸದ್ಯ ಸೋಂಕಿನ ಕೊಟ್ಟು ಚೇತರಿಕೆ ಪ್ರಮಾಣ ಶೇಕಡ ೯೮.೩೩ ರಷ್ಟು ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.