ದೇಶದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಳ


ನವದೆಹಲಿ. ನ. ೪. ದೇಶಾದ್ಯಂತ ಮತ್ತೆ ಕೋ ರೋ ನಾ ಮಹಾಮಾರಿಯ ಅಬ್ಬರ ಹೆಚ್ಚಾದಂತೆ ಕಾಣುತ್ತಿದೆ.ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೬ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ ೮೩ ಲಕ್ಷ ದಾಟಿದೆ.
ನಿನ್ನೆ ಬೆಳಗಿನವರೆಗೆ ಕೇವಲ ೩೮ ಸಾವಿರದ ೩೧೦ ಸೋಂಕು ಪ್ರಕರಣಗಳು ದಾಖಲಾಗುವ ಮೂಲಕ ಸಾಂಕ್ರಾಮಿಕ ರೋಗದ ಉಪಟಳ ಕಡಿಮೆಯಾಗುತ್ತಿದೆ ಎಂಬ ಭಾವನೆ ಮೂಡಿತ್ತು. ಆದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಹೊಸದಾಗಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೬ ಸಾವಿರದ ೨೫೩ ಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಮತ್ತಷ್ಟು ಆತಂಕವನ್ನು ಹೆಚ್ಚು ಮಾಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿದರೆ ಒಂದೇ ದಿನದ ಅವಧಿಯಲ್ಲಿ ಶೇಕಡ ೨೦ರಷ್ಟು ಸೋಂಕು ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂಬುದು ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.
ಕಳೆದ ೨೪ ಗಂಟೆಗಳಲ್ಲಿ ನ ಸೋಂಕು ಪ್ರಕರಣಗಳ ಏರಿಕೆಯಿಂದಾಗಿ ಒಟ್ಟಾರೆ ದೇಶದಲ್ಲಿ ೮೩ ಲಕ್ಷದ ೧೩ ಸಾವಿರದ ೮೭೭ ಸೋಂಕು ಪ್ರಕರಣಗಳು ದಾಖಲಾದಂತೆ ಆಗಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ವಿಚಾರದಲ್ಲಿ ಏರಿಕೆ ಕಂಡು ಬಂದಿಲ್ಲ.
ದೇಶದಲ್ಲಿ ಪ್ರಸ್ತುತ ೫ ಲಕ್ಷದ ೩೩ ಸಾವಿರದ ೭೮೭ ಸಕ್ರಿಯ ಪ್ರಕರಣಗಳು ದಾಖಲಾಗಿವೆ.ಈ ಪ್ರಕರಣಗಳ ಸಂಬಂಧಿತ ರೋಗಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೩ ಸಾವಿರದ ೩೫೭ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈ ನಡುವೆ ನಿನ್ನೆವರೆಗೂ ೧೧ ಕೋಟಿ ೨೯ ಲಕ್ಷದ ೯೮ ಸಾವಿರದ ೯೫೯ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷೆಗಳ ವಿಚಾರದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತನ್ನ ಸಾಮರ್ಥ್ಯವನ್ನು ದಿನೇದಿನೇ ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ನಿನ್ನ ಒಂದು ದಿನ ೧೨ ಲಕ್ಷಕ್ಕೂ ಅಧಿಕ ಮಾದರಿ ಪರೀಕ್ಷೆಗಳನ್ನು ಮಂಡಳಿ ನಡೆಸಿದೆ.ಕಳೆದ ಎರಡು ವಾರಗಳಿಂದ ಪ್ರತಿನಿತ್ಯ ದಾಖಲಾಗುತ್ತಿರುವ ಸರಾಸರಿ ಸೋಂಕು ಪ್ರಕರಣಗಳಲ್ಲಿ ನಿರಂತರವಾಗಿ ಇಳಿಮುಖ ಕಂಡುಬರುತ್ತಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೧೪ ಮಂದಿ ದುರ್ದೈವಿಗಳು ಸಾವನ್ನಪ್ಪಿದ್ದು ಇದರೊಂದಿಗೆ ಇದುವರೆಗೂ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ೧ ಲಕ್ಷದ ೨೩ ಸಾವಿರದ ಆರುನೂರು ಹನ್ನೊಂದಕ್ಕೆ ಏರಿಕೆಯಾಗಿದೆ.ದೇಶದಲ್ಲಿ ನಿನ್ನೆ ಒಂದೇ ದಿನ ೫೩ ಸಾವಿರದ ೩೫೭ ಸೋಂಕಿತರು ಗುಣಮುಖರಾಗುವುದೇ ರೊಂದಿಗೆ ಇದುವರೆಗೂ ಚೇತರಿಸಿಕೊಂಡವರ ಸಂಖ್ಯೆ ೭೬ ಲಕ್ಷದ ೫೬ ಸಾವಿರದ ೪೭೮ ಕ್ಕ್ ಏರಿಕೆಯಾಗಿದೆ.
ಮಹಾಮಾರಿ ಸಾಂಕ್ರಾಮಿಕ ರೋಗದ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಭಾರತ ಗಣನೀಯ ಯಶಸ್ವಿಯನ್ನು ಕಂಡುಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಐದು ಲಕ್ಷಕ್ಕಿಂತ ಕಡಿಮೆ ಯಾಗಿರುವುದು ಇದಕ್ಕೆ ಪುಷ್ಟಿ ನೀಡುವಂತಾಗಿದೆ.
ಪ್ರತಿನಿತ್ಯ ಚೇತರಿಸಿಕೊಳ್ಳುತ್ತಿರುವ ರೋಡ್ ಹೇಳ ಸಂಖ್ಯೆ ಹೆಚ್ಚಾಗುತ್ತಿದ್ದು ಸಾವಿನ ಪ್ರಮಾಣ ಇಳಿಮುಖದ ಹಾದಿಯಲ್ಲಿ ಸಾಗಿದೆ. ದೆಹಲಿ ಕೇರಳ ಪಶ್ಚಿಮಬಂಗಾಳ ಮತ್ತು ಮಣಿಪುರ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಆಂಧ್ರಪ್ರದೇಶ ತಮಿಳುನಾಡು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕಳೆದ ಒಂದು ತಿಂಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖದ ತ್ತ ಸಾಗಿದೆ.
ಕಳೆದ ಎರಡು ವಾರಗಳಿಂದ ಈಚೆಗೆ ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಸೋಂಕಿನ ಜಾಡು ಪತ್ತೆ ಮಾಡುವುದು ಸೋಂಕಿತರನ್ನು ಗುರುತಿಸುವುದು ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂಬ ಕೇಂದ್ರ ಸರ್ಕಾರದ ಕ್ರಿಯಾ ಯೋಜನೆಯಿದ ಇಷ್ಟೆಲ್ಲಾ ಬೆಳವಣಿಗೆಗಳು ಆಗಿವೆ ಎಂದು ಹೇಳಲಾಗಿದೆ.