
ನವದೆಹಲಿ.ಆ.೧೬- ದೇಶದಲ್ಲಿ ಕಳೆದ ೧೫ ದಿನಗಳಲ್ಲಿ, ನೈಋತ್ಯ ಮುಂಗಾರು “ಸಾಮಾನ್ಯಕ್ಕಿಂತ” ಕಡಿಮೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಜುಲೈ ಅಂತ್ಯದಲ್ಲಿ ದೀರ್ಘಾವಧಿಯ ಸರಾಸರಿ ಗಿಂತ ಶೇ.೫ ರಷ್ಟು ಹೆಚ್ಚು ಮಳೆಯಾಗಿತ್ತು.ಆಗಸ್ಟ್ ತಿಂಗಳಲ್ಲಿ “ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದಲ್ಲಿ ಸುಮಾರು ಶೇ. ೩೬ ರಷ್ಟು ಜಿಲ್ಲೆಗಳು ಅಂದರೆ ೨೬೩ ಜಿಲ್ಲೆಗಳಲ್ಲಿ ಸರಾಸರಿಗಿಂತ ಶೇ. ೨೦ ಅಥವಾ ಅದಕ್ಕಿಂತ ಹೆಚ್ಚಿನ ಮಳೆ ಕೊರತೆ ಕಾಣಿಸಿ ಕೊಂಡಿದೆ ಎಂದಿದ್ದಾರೆ.
ಆಗಸ್ಟ್‌ನ ಮೊದಲಾರ್ಧದಲ್ಲಿ ದೇಶಾದ್ಯಂತ ಮಳೆ ಸರಾಸರಿಗಿಂತ ಶೇ. ೩೫ ರಷ್ಟು ಕಡಿಮೆಯಾಗಿದೆ. ಜುಲೈನಲ್ಲಿ ಸಾಮಾನ್ಯ ಮಳೆಗಿಂತ ಶೇ. ೧೩ ರಷ್ಟು ಹೆಚ್ಚಿನದನ್ನು ಕಂಡ ದೀರ್ಘ ಸಕ್ರಿಯ ಮಳೆಯ ನಂತರ ಮುಂಗಾರು ಈ ಅವಧಿಯಲ್ಲಿ ದುರ್ಬಲವಾಗಿ ಉಳಿದಿದೆ.
ಪೂರ್ವ ಭಾರತದ ಹಲವಾರು ರಾಜ್ಯಗಳಲ್ಲಿ ದೊಡ್ಡ ಮಳೆ ಕೊರತೆ ಮತ್ತು ದಕ್ಷಿಣದಲ್ಲಿ ಬೆಳೆಯುತ್ತಿರುವ ಕೊರತೆಯೊಂದಿಗೆ, ಭಾರತದ ಹವಾಮಾನ ಇಲಾಖೆಯು ಆಗಸ್ಟ್ ೧೮ ರ ಸುಮಾರಿಗೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಆಗಸ್ಟ್‌ನ ದ್ವಿತೀಯಾರ್ಧದಲ್ಲಿ ಉತ್ತಮ ಮಳೆಯಾಗಬೇಕು. ಆಗಸ್ಟ್ ೧೮ ರಿಂದ ಮುಂಗಾರು ಪುನರುಜ್ಜೀವನವನ್ನು ನಿರೀಕ್ಷಿಸುತ್ತೇವೆ. ಇದು ಹೆಚ್ಚು ಬಲವಾಗಿರದಿರಬಹುದು ಆದರೆ ಪಶ್ಚಿಮ ಕರಾವಳಿ ಮತ್ತು ಪರ್ಯಾಯ ಭಾರತದ ಪ್ರದೇಶಗಳಲ್ಲಿ ಮಳೆಯ ಜೊತೆಗೆ ಆರ್ದ್ರ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಪೂರ್ವ ಮತ್ತು ಈಶಾನ್ಯ ಮತ್ತು ಮಧ್ಯ ಭಾರತದ ಹಲವಾರು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹಿರಿಯ ವಿಜ್ಞಾನಿ ಡಿ. ಶಿವಾನಂದ ಪೈ ಹೇಳಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಅದರಲ್ಲಿಯೂ ರಾಜ್ಯಗಳಲ್ಲಿ ಬಿಹಾರ, ೩೮ ಜಿಲ್ಲೆಗಳಲ್ಲಿ ೩೧ ಕೊರತೆಯಿದೆ, ಕೇರಳ ಎಲ್ಲಾ ೧೪ ಜಿಲ್ಲೆಗಳು ಕೊರತೆಯಿದೆ, ಜಾರ್ಖಂಡ್ ೨೪ ರಲ್ಲಿ ೨೧ ಮತ್ತು ಉತ್ತರ ಪ್ರದೇಶದಲ್ಲಿ ೭೫ ರಲ್ಲಿ ೪೬ ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ ಎಂದು ಹೇಳಲಾಗಿದೆ.