ನವದೆಹಲಿ,ಜೂ.೧೨-: ಇದೇ ಜೂನ್ ೨೭ ರಿಂದ ಭಾರತದಲ್ಲಿ ಕಿರು ವಿಡಿಯೋ ತಯಾರಿಕೆ ಅಪ್ಲಿಕೇಶನ್ ಟಿಕಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಬಳಕೆದಾರರು ಇನ್ನು ಮುಂದೆ ತಮ್ಮ ನೆಚ್ಚಿನ ಕಿರು
ವಿಡಿಯೋಗಳು ಅಥವಾ ಲೈವ್ ಸ್ಟ್ರೀಮ್ ಗಳನ್ನು
ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಲು ಅಥವಾ ರಚಿಸಲು
ಸಾಧ್ಯವಾಗುವುದಿಲ್ಲ.
ದೇಶದಲ್ಲಿ ಸುಮಾರು ೩೫ ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ (ಸೆನ್ಸರ್ ಟವರ್ ಡೇಟಾದ ಪ್ರಕಾರ) ಅಪ್ಲಿಕೇಶನ್ ಟಿಕಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತದೆ ಎಂದು ಘೋಷಿಸಲು ವಿಷಾದಿಸುತ್ತೇವೆ ಎಂದು ಸಂದೇಶದಲ್ಲಿ ತಿಳಿಸಿದೆ.
ಜೂನ್ ೨೭, ೨೦೨೩ ರಂದು ರಾತ್ರಿ ೧೧.೫೯ ಕ್ಕೆ ಟಿಕಿ ಎಲ್ಲಾ ಕಾರ್ಯಗಳು ಮತ್ತು ಸೇವೆಗಳು ಸ್ಥಗಿತಗೊಳ್ಳುತ್ತವೆ. ಟಿಕಿ ಅಪ್ಲಿಕೇಶನ್ ಇನ್ನು ಮುಂದೆ ಅಪ್ಲಿಕೇಶನ್ ಸ್ಟೋರ್ ಗಳಿಂದ ಡೌನ್ಲೋಡ್ ಮಾಡಲು ಲಭ್ಯವಿಲ್ಲ ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ತಿಳಿಸಿದೆ. ಭಾರತ ಮತ್ತು ಸಿಂಗಾಪುರದಲ್ಲಿನ ನಮ್ಮ ಸರ್ವರ್ ಗಳಿಂದ ಎಲ್ಲಾ ಬಳಕೆದಾರರ ಡೇಟಾವನ್ನು ಶಾಶ್ವತವಾಗಿ ಅಳಿಸಲಾಗುತ್ತದೆ ಎಂದು ಅದು ಹೇಳಿದೆ.
ಸ್ಥಗಿತಗೊಳಿಸುವ ಮೊದಲು ತಮಗೆ ಇಷ್ಟವಾದ ಯಾವುದೇ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಕಂಪನಿಯು ಬಳಕೆದಾರರಿಗೆ ತಿಳಿಸಿದೆ. ೨೭ನೇ ತಾರೀಖಿನ ಮೊದಲು ನೀವು ಹೊಂದಿರುವ ಯಾವುದೇ ಟಿ ನಾಣ್ಯಗಳನ್ನು ಹಿಂತಿರುಗಿ ಪಡೆಯಬಹುದು. ನೀವು ಅವುಗಳನ್ನು ಅಪ್ಲಿಕೇಶನ್‌ನಲ್ಲಿ ಹಿಂಪಡೆಯಬಹುದು. ಆದರೆ ಸ್ಥಗಿತಗೊಳಿಸುವ ದಿನಾಂಕದ ನಂತರ ಹಿಂಪಡೆಯಲು ಯಾವುದೇ ಅವಕಾಶ ನೀಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಟಿಕಿ ಹೇಳಿದೆ.
ಟೆಕ್ ಉದ್ಯಮ ಎದುರಿಸುತ್ತಿರುವ ಇತ್ತೀಚಿನ ಹಲವು ಸವಾಲುಗಳಿಂದಾಗಿ ಟಿಕಿ ಸೇರಿದಂತೆ ಹಲವು ಸ್ಟಾರ್ಟ ಆಫ್ ಕಂಪನಿಗಳು
ಮುಚ್ಚಲು ಕಾರಣವಾಗಿದೆ ಎಂದು ಅದು ಹೇಳಿದೆ. ಸಿಂಗಾಪುರ ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಸ್ಟಾರ್ಟ್‌ಅಪ್ ಆಗಿದ್ದರೂ, ಟಿಕಿ ಯಾವಾಗಲೂ ನಿಜವಾದ ಪ್ರತಿಭೆಗಳಿಗೆ ಸ್ಥಳ ಎಂದು ಪರಿಗಣಿಸಲ್ಪಟ್ಟಿದೆ.
ನಿಮ್ಮಂತಹ ರಚನೆಕಾರರು ಮತ್ತು ಬಳಕೆದಾರರನ್ನು ಒಳಗೊಂಡಿರುವ ಟಿಕಿ ಕುಟುಂಬದ ಬಗ್ಗೆ ನಾವು ಅಪಾರವಾಗಿ ಹೆಮ್ಮೆಪಡುತ್ತೇವೆ ಮತ್ತು ಕೃತಜ್ಞರಾಗಿರುತ್ತೇವೆ ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ಕಿರು ವಿಡಿಯೊ ಆಪ್ ಗಳ ಜನಪ್ರಿಯತೆ ಹೆಚ್ಚುತ್ತಿರುವುದು ಟಿಕಿ ನಿರ್ಗಮನಕ್ಕೆ ಕಾರಣವಾಗಿದೆ. ಟಿಕ್ ನಿಷೇಧದೊಂದಿಗೆ, ಅನೇಕ ಭಾರತೀಯ ಕಿರು-ರೂಪ ಅಪ್ಲಿಕೇಷನ್ ಗಳು ಪರ್ಯಾಯವಾಗಿ ಹೊರಹೊಮ್ಮಿವೆ. ಅವುಗಳನ್ನು ಲಕ್ಷಾಂತರ ಬಳಕೆದಾರರನ್ನು ಬಳಸುತ್ತಿದ್ದಾರೆ.
ಮಾರುಕಟ್ಟೆ ಸಲಹಾ ಸಂಸ್ಥೆ ರೆಡ್‌ಸೀರ್‌ನ ರ ಪ್ರಕಾರ, ಭಾರತೀಯ ಕಿರು-ರೂಪದ ವೀಡಿಯೊ ಮಾರುಕಟ್ಟೆಯಲ್ಲಿ ಹಣಗಳಿಕೆಯು ಗರಿಷ್ಠ ವಾಗಿದೆ ಮತ್ತು ಸ್ಮಾರ್ಟ್‌ಫೋನ್‌ಗಳ ಅಳವಡಿಕೆ ಮತ್ತು ಬಳಕೆಯ ಹೆಚ್ಚಳದಿಂದಾಗಿ ೨೦೩೦ ರ ವೇಳೆಗೆ ೮-೧೨ ಬಿಲಿಯನ್ ಡಾಲರ್ ಗಳಿಸುವ ಅವಕಾಶವಿರಲಿದೆ ಎಂದು ತಿಳಿಸಿದೆ.