ದೇಶದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಒತ್ತಾಯ


ರಾಯಚೂರು.ಜೂ.೦೧-ದೇಶದಲ್ಲಿ ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಮುಕ್ತ ದೇಶವಾಗುವ ವರೆಗೆ ಎಲ್ಲಾ ರೀತಿಯ ಉಚಿತ ಚಿಕಿತ್ಸೆ ನೀಡಿ ಐಎಸ್, ಕೆಎಎಸ್ ಸೇರಿ ರಾಜಕಾರಣಿಗಳ ವೇತನವನ್ನು ಸರ್ಕಾರದ ಬೋಕ್ಕಾಸಕ್ಕೆ ಹಾಕಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಂತರಾ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕೋವಿಡ್ -೧೯ ಮಹಾಮಾರಿ ಇಂದ ದಿನ ನಿತ್ಯ ಸಾವಿರಾರು – ಲಕ್ಷಾಂತರ ಜನರು ಸಾಯುತ್ತಿದ್ದು ದೇಶದ ಬಹುತೇಕ ಆಸ್ಪತ್ರೆಗಳು ಹಣ ಕೀಳುವ ಪ್ರವೃತ್ತಿ ಬೆಳೆಸಿಕೊಂಡಿರುವುದು ಹಲವಾರು ದೃಶ್ಯ ಮಾಧ್ಯಮವರು ತಮ್ಮ ತಮ್ಮ ವಾಹಿನಿಗಳಲ್ಲಿ ಸುದ್ದಿ ಬಿತ್ತರಿಸುತ್ತಿದ್ದು ಇಡೀ ದೇಶದ ಜನರು ನೋಡುತ್ತಿದ್ದಾರೆ.
ದೇಶದಲ್ಲಿ ಕೆಲ ಬೆರಳೆಣಿಕೆಯಷ್ಟು ಉದ್ಯಮಿಗಳ ಸಾಲ ಸಾವಿರಾರು- ಲಕ್ಷ ಕೋಟಿಗಳಷ್ಟು ಸಾಲ ಮನ್ನಾ ಮಾಡಿದ ಸರ್ಕಾರಕ್ಕೆ ಜನರ ಪ್ರಾಣ ರಕ್ಷಣೆಗೆ ಹಣ ಖರ್ಚು ಮಾಡವುದು ದೊಡ್ಡ ಕೆಲಸವೇ ಅಲ್ಲ. ಎಲ್ಲದಕ್ಕೂ ಹಣವೇ ಮದ್ದು ಆಗಿದ್ದು ದಯವಿಟ್ಟು ತಾವುಗಳು ಮೇಲಿನ ವಿಷಯದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಇನ್ನೂ ಹೆಚ್ಚಿನ ಚೂಕ್ತ ಮಾರ್ಗಸೂಚಿಗಳನ್ನು ತಜ್ಞರ ಮೂಲಕ,ಜನಪ್ರತಿನಿಧಿಗಳ ಮೂಲಕ & ಜನಾಭಿಪ್ರಾಯ ಮೂಲಕ ಪಡೆದು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ, ಮುರಳಿ ಕೃಷ್ಣ ಕಟ್ಟಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.