ದೇಶದಲ್ಲಿ ಸೋಂಕು ಸ್ಥಿರ

ನವದೆಹಲಿ,ನ.೨೧- ದೇಶದಲ್ಲಿ ಕೊರೊನಾ ಸೋಂಕು ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ. ಆದರೆ ಯೂರೋಪ್ ನಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಯುರೋಪ್ ಭಾಗದ ಹಲವು ರಾಷ್ಟ್ರಗಳು ಮತ್ತೊಮ್ಮೆ ಸೋಂಕಿನ ಭೀತಿ ಎದುರಿಸುತ್ತಿದ್ದು ಆಸ್ಟ್ರಿಯಾದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ನೆದರ್ ಲ್ಯಾಂಡ್ ನಲ್ಲಿ ಭಾಗಶಃ ಲಾಕ್‌ಡೌನ್ ಜಾರಿ ಮಾಡಿ ಲಸಿಕೆ ಪಡೆಯದವರ ಮೇಲೆ ನಿರ್ಬಂಧ ವಿಧಿಸಲು ಮುಂದಾಗಿದೆ.
ಇದರ ಜೊತೆಗೆ ಜರ್ಮನಿಯಲ್ಲಿ ಮಾರ್ಗಸೂಚಿಯನ್ನು ಪಾಲಿಸಲು ವಿಫಲವಾದರೆ ಲಾಕ್‌ಡೌನ್ ಜಾರಿಮಾಡುವ ಎಚ್ಚರಿಕೆ ನೀಡಲಾಗಿದೆ.
ಭಾರತದಲ್ಲಿ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ರಾಜ್ಯಗಳಲ್ಲಿ ಸೋಂಕು ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಜೊತೆಗೆ ನಿಯಂತ್ರಣದಲ್ಲಿ ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಸೋಂಕು ಸಂಖ್ಯೆ ಏರಿಕೆ ಯಾಗುತ್ತಿರುವುದು ಭಾರತದಲ್ಲಿ ಭಯ ಆತಂಕದ ವಾತಾವರಣ ನಿರ್ಮಾಣ ಸೃಷ್ಠಿಸಿದೆ.
ಯುರೋಪಿನ ಹಲವು ರಾಷ್ಟ್ರಗಳಲ್ಲಿ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ ಇದು ಜಾಗತಿಕವಾಗಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಆಸ್ಟ್ರಿಯಾದಲ್ಲಿ ದೇಶವ್ಯಾಪಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮತ್ತೊಂದೆಡೆ ನೆದರ್ ಲಾಂಡ್ ನಲ್ಲಿ ಭಾಗಶಃ ಲಾಕ್ ಡೌನ್ ಜಾರಿ ಮಾಡಿದ್ದು, ಇದುವರೆಗೂ ಲಸಿಕೆ ಪಡೆಯದ ವ್ಯಕ್ತಿಗಳ ಮೇಲೆ ಹಲವು ನಿರ್ಬಂಧ ವಿಧಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.
ಪ್ರತಿಭಟನಾ ನಿರತರ ಮೇಲೆ ಗುಂಡು
ನೆದರ್ ಲ್ಯಾಂಡ್ ಸರ್ಕಾರದ ಈ ಕ್ರಮ ಅಲ್ಲಿನ ನಾಗರಿಕರನ್ನು ಕೆರಳಿಸುವಂತೆ ಮಾಡಿದ್ದು ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು ವಿಕೋಪಕ್ಕೆ ಹೋಗುವ ಪ್ರತಿಭಟನೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಗುಂಪು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ನಡೆಸಿದ ಗುಂಡು ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಆರ್ಥಿಕ ದೇಶಗಳಲ್ಲಿ ಒಂದಾಗಿರುವ ಆಸ್ಟ್ರಿಯಾದಲ್ಲಿ ಜಾರಿ ಮಾಡಲಾಗಿದೆ. ಇದೇ ರೀತಿ ಜರ್ಮನಿಯಲ್ಲಿ ಲಾಕ್ಡೌನ್ ಜಾರಿ ಮಾಡಬೇಕಾಗುತ್ತದೆ ಎಂದು ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ತಿಳಿಸಿದ್ದಾರೆ.
ಸೋಂಕು ಎಚ್ಚರವಾದರೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ದಿನ ಎದುರಾಗಬಹುದು ಹೀಗಾಗಿ ಜನರು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ಪರಿಸ್ಥಿತಿ ನಿಯಂತ್ರಣಯದಲ್ಲಿ

ಜಾಗತಿಕವಾಗಿ ಸೋಂಕುಗಳ ಅಪಾಯಕಾರಿ

ಯುರೋಪ್ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ವಸ್ತು ಜಾಗತಿಕವಾಗಿ ಆತಂಕ

ಆಸ್ಟ್ರಿಯಾದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ

ನೆದರ್ಲ್ಯಾಂಡ್ ನಲ್ಲಿ ಭಾಗಶಹ ಲಾಕ್ಡೌನ್ ಜಾರಿ

ಲಸಿಕೆ ಇದುವರೆಗೂ ಪಡೆಯದ ಮಂದಿಯ ವಿರುದ್ಧ ಕಠಿಣ ನಿಯಮ ಜಾರಿ ಮಾಡಲು ನಿರ್ಧಾರ

ನೆದರ್ಲ್ಯಾಂಡ್ ನಲ್ಲಿ ಮುಂದುವರೆದ ನಾಗರಿಕರ ಪ್ರತಿಭಟನೆ ಗುಂಪು ಚದುರಿಸಲು ಪೊಲೀಸರಿಂದ ಗುಂಡಿನ ದಾಳಿ

ಹಲವು ಮಂದಿಗೆ ಗಾಯ ಆಸ್ಪತ್ರೆಗೆ ದಾಖಲು

ಮಾರ್ಗಸೂಚಿ ಪಾಲಿಸದಿದ್ದರೆ ಲಾಕ್ಡೌನ್ ಜಾರಿ ಮಾಡುವ ಎಚ್ಚರಿಕೆ ನೀಡಿದ ಜರ್ಮನಿ ಸರ್ಕಾರ