ದೇಶದಲ್ಲಿ ಕಾರ್ಮಿಕರ ರಾಜ್ಯ ಸ್ಥಾಪನೆಗೆ ಹೆಚ್.ವಿ. ದಿವಾಕರ್ ಕರೆ

ಕಲಬುರಗಿ,ಏ.24: ಶಿವದಾಸ್ ಘೋಷ್ ಅವರ ವಿಚಾರಧಾರೆಯ ಆಧಾರದ ಮೇಲೆ ನಮ್ಮ ದೇಶದಲ್ಲಿ ಕಾರ್ಮಿಕರ ರಾಜ್ಯ ಸ್ಥಾಪಿಸಬೇಕೆಂದು ಎಸ್‍ಯುಸಿಐ(ಸಿ) ಪಕ್ಷದ ಜಿಲ್ಲಾ ಕಾರ್ಯದಶಿ ಹೆಚ್.ವಿ. ದಿವಾಕರ್ ಅವರು ಕರೆ ನೀಡಿದರು.
ಎಸ್‍ಯುಸಿಐ (ಸಿ) ಕಮ್ಯೂನಿಸ್ಟ್ ಪಕ್ಷದ 76ನೇ ಸಂಸ್ಥಾಪನ ದಿನದ ಅಂಗವಾಗಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ಧ್ವಜಾರೋಹಣ ಹಾಗೂ ಶಿವದಾಸ್ ಘೋಷ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮುಖ್ಯ ಭಾಷಣ ಮಾಡಿದ ಅವರು, ಭಾರತದ ನೆಲದಲ್ಲಿ ಒಂದು ನೈಜ್ಯ ಕಮ್ಯೂನಿಸ್ಷ್ ಪಕ್ಷವನ್ನು ಕಟ್ಟಬೇಕು ಎಂಬ ಸಂಕಲ್ಪದೊಂದಿಗೆದಿ ಶಿವದಾಸ್ ಘೋಷ್ ಅವರು 1948ರಲ್ಲಿ ಪಕ್ಷವನ್ನು ಕಟ್ಟಿದರು. ಬಹಳ ಪ್ರಯಾಸದಾಯಕವಾಗಿ ಅವಿರತ, ಸಂಧಾನತೀತ ಹೋರಾಟವನ್ನು ಮಾಡುವ ಮೂಲಕ ಪಕ್ಷವನ್ನು ಕಟ್ಟಿದರು ಎಂದರು.
ನಮ್ಮ ದೇಶದಲ್ಲಿ ಸಿಪಿಐ. ಕಮ್ಯೂನಿಸ್ಟ್ ಪಕ್ಷ ಇದ್ದರೂ ಸಹ ಹೊಸ ಪಕ್ಷ ಏಕೆ ಎಂಬ ಹಲವರ ಟೀಕೆಯನ್ನು ಎದುರಿಸಬೇಕಾಯಿತು. ರಾಜಕೀಯವಾಗಿ, ಸಾಂಸ್ಕøತಿಕವಾಗಿ ಹಾಗೂ ಸೈದ್ದಾಂತಿಕವಾಗಿ ಸಿ.ಪಿ.ಐ ಕಮ್ಯೂನಿಸ್ಟ್ ಪಕ್ಷ ಅಲ್ಲ ಎಂಬ ವಿಷಯವನ್ನು ಜನರಿಗೆ ತಿಳಿಸಿ ಹೇಳುತ್ತಿದ್ದರು. ಅದರ ಒಂದು ವಾಸ್ತವಿಕತೆಯನ್ನು ನಾವು ಇಂದು ನೋಡುತ್ತಿದ್ದೇವೆ. ಭಾರತ ದೇಶದ ದುಡಿಯುವ ಜನರ ವಿಮುಕ್ತಿ ಹಾಗೂ ಅವರ ಸವಾರ್ಂಗಿಣ ಅಭಿವೃದ್ದಿ ಈ ವ್ಯವಸ್ಥೆಯನ್ನು ಬದಲಾಯಿಸುವದರ ಮೂಲಕ ಸಾಧ್ಯ ಎಂಬ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡಿದರು. ಹಾಗೂ ಆ ದಿಸೆಯಲ್ಲಿ ಎಸ್‍ಯುಸಿಐ(ಸಿ) ಪಕ್ಷವನ್ನು ಕಟ್ಟಿದರು. ಇಂದು ಪಕ್ಷವು ದೇಶದ ಎಲ್ಲ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಕ್ಷದ ಕಾರ್ಯಕರ್ತರು, ಸದಸ್ಯರು, ಬೆಂಬಲಿಗರು, ಹಿತೈಷಿಗಳು, ಸಾವಿರಾರು ಸಂಖ್ಯೆಯಲ್ಲಿ ಪಕ್ಷವನ್ನು ಬೆಳೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೊನೆಗೆ ಎಸ್.ಎಂ ಶರ್ಮಾ ಅವರು ಮಾತನಾಡಿ, ನಾವೆಲ್ಲರೂ ಇಂದು ಸಂಕಲ್ಪ ಮಾಡುವ ದಿನ. ಶಿವದಾಸ್ ಘೋಷ್ ಅವರ ವಿಚಾರವನ್ನು ನಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕಾಗಿದೆ. ಅವರ ಕನಸನ್ನು ನನಸು ಮಾಡಬೇಕಾಗಿದೆ. ಶೋಷಣಾಮುಕ್ತ ಸಮಾಜವನ್ನು ಕಟ್ಟಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿ. ನಾಗಮಾಳ್, ವಿ.ಜಿ. ದೇಸಾಯಿ, ಎಸ್.ಎಂ. ಶರ್ಮಾ, ಮಹೇಶ್ ಎಸ್.ಬಿ, ಗಣಪತರಾವ್ ಕೆ. ಮಾನೆ ಅಶ್ವಿನಿ ಮುಂತಾದವರು ಉಪಸ್ಥಿತರಿದ್ದರು.