ದೇಶದಲ್ಲಿ ಒಂದು ದಶಲಕ್ಷ ಜನಸಂಖ್ಯೆಗೆ ಕೇವಲ ೧೧೦ ಮಂದಿಗೆ ಸೋಂಕು

ನವದೆಹಲಿ, ಡಿ. ೩೦- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡುಬಂದಿದ್ದು, ಕಳೆದ ದಿನಗಳಲ್ಲಿ ಒಂದು ದಶಲಕ್ಷ ಜನಸಂಖ್ಯೆಗೆ ಕೇವಲ ೧೧೦ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾಂಕ್ರಾಮಿಕ ರೋಗದಿಂದ ಅತಿಹೆಚ್ಚು ಬಾಧಿತವಾಗಿರುವ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರತಿ ಒಂದು ದಶಲಕ್ಷ ಜನಸಂಖ್ಯೆಗೆ ಸೋಂಕು ಹರಡಿರುವುದು ತೀರಾ ಕಡಿಮೆ ಎಂಬುದು ತಿಳಿದುಬಂದಿರುವುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.
ಅಮೆರಿಕಾ, ಬ್ರೆಜಿಲ್ ರಾಷ್ಟ್ರಗಳು ಸಾಂಕ್ರಾಮಿಕ ರೋಗದಿಂದ ಅತಿಹೆಚ್ಚು ಬಾಧಿತವಾಗಿರುವ ೧ ಮತ್ತು ಮೂರನೇ ಸ್ಥಾನದಲ್ಲಿವೆ, ಭಾರತ ಎರಡನೇ ಸ್ಥಾನದಲ್ಲಿದೆ. ಕಳೆದ ಎರಡು ದಿನಗಳಿಂದ ಭಾರತದಲ್ಲಿ ಪ್ರತಿಯೊಂದು ದಶಲಕ್ಷ ಜನಸಂಖ್ಯೆಗೆ ಕೇವಲ ೧೧೦ ಪ್ರಕರಣಗಳು ಪತ್ತೆಯಾಗಿವೆ.
ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಕ್ರಮವಾಗಿ ಲಕ್ಷ ಜನಸಂಖ್ಯೆಗೆ ೩ ಸಾವಿರದ ೯೬೪ ಹಾಗೂ ೩ ಸಾವಿರ ೬೫೬ ಪ್ರಕರಣಗಳು ದಾಖಲಾಗಿವೆ. ಇಟಲಿಯಲ್ಲಿ ೧ ಸಾವಿರದ ೫೬೩ ಹಾಗೂ ರಷ್ಯಾದಲ್ಲಿ ೧೩೭೩ ಫ್ರಾನ್ಸ್ ನಲ್ಲಿ ೧೩೦೪ ಹಾಗೂ ಬ್ರೆಜಿಲ್‌ನಲ್ಲಿ ೧೧೮೯ ಪ್ರಕರಣಗಳು ದಾಖಲಾಗಿವೆ.
ಅಮೆರಿಕದಲ್ಲಿ ಇದುವರೆಗೂ ೧೯. ಐದು ದಶಲಕ್ಷ ಕ್ಕೂ ಹೆಚ್ಚು ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ ಎಂದು ಜಾನ್ಸ್ s ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ. ಬ್ರೆಜಿಲ್ನಲ್ಲಿ೭ .೫ ದಶಲಕ್ಷ, ರಷ್ಯಾದಲ್ಲಿ ೩ ದಶಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ.
ನಂತರದ ಸ್ಥಾನದಲ್ಲಿ ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಿವೆ. ಕೊನೆ ಸ್ಥಾನದಲ್ಲಿ ಇಟಲಿ ಇದೆ ಎಂದು ಹೇಳಲಾಗಿದೆ. ಫ್ರಾನ್ಸ್‌ನಲ್ಲಿ ಎರಡುವರೆ ದಶಲಕ್ಷ ಬ್ರಿಟನ್‌ನಲ್ಲಿ ಹೆಚ್ಚು ಕಡಿಮೆ ಇದೇ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿವೆ. ಇಟಲಿಯಲ್ಲಿ ಕೇವಲ ಎರಡು ದಶಲಕ್ಷ ಮಂದಿಗೆ ಸೋಂಕಿರುವುದು ಖಚಿತವಾಗಿದೆ.