ದೇಶದಲ್ಲಿ ಇನ್ನೂ 5 ಲಸಿಕೆಗೆ ಶೀಘ್ರ ಅನುಮತಿ: ಕೇಂದ್ರದ ನಿರ್ಧಾರ

ನವದೆಹಲಿ, ಏ.13- ದೇಶದಲ್ಲಿ ನಿನ್ನೆಯಷ್ಟೇ ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್ ಲಸಿಕೆ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ವಿದೇಶದಲ್ಲಿ ಅಭಿವೃದ್ಧಿ ಪಡಿಸಿರುವ ಎಲ್ಲಾ ಲಸಿಕೆಯನ್ನು ದೇಶದಲ್ಲಿ ಬಳಕೆ ಮಾಡಲು ಶೀಘ್ರ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ದೇಶ ಮತ್ತು ವಿದೇಶಗಳಲ್ಲಿ ಅಭಿವೃದ್ಧಿ ಪಡಿಸಿರುವ ಲಸಿಕೆಗಳನ್ನು ದೇಶದಲ್ಲಿ ಬಳಕೆ ಮಾಡಲು ಅನುಮತಿ ನೀಡಲು ನಿರ್ಧರಿಲಾಗಿದ್ದಿ ವರ್ಷಾಂತ್ಯದ ವೇಳೆಗೆ ಲಭ್ಯವಾಗುವ ಸಾದ್ಯತೆಗಳಿವೆ.

ಜಾನ್ಸನ್ ಅಂಡ್ ಜಾನ್ಸನ್, ಜೈದೂಸ್ ಕ್ಯಾಡಿಲಾ, ಸೆರಂನ ನೊವಾವಾಕ್ಸ್, ಭಾರತ್ ಭಯೋಟೆಕ್ ನ ನಸಲ್‌‌ ಲಸಿಕೆ ಸೇರಿದಂತೆ ಐದು ಲಸಿಕೆಗಳು ಶೀಘ್ರದಲ್ಲೇ ಲಭ್ಯವಾಗುವ ಸಾದ್ಯತೆ ಗಳಿವೆ

ದೇಶದಲ್ಲಿ ಕೊರೋನಾ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಅರ್ಹ ಎಲ್ಲರಿಗೂ ಲಸಿಕೆ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂತಹದೊಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಸ್ಪುಟ್ನಿಕ್ – ವಿ ಲಸಿಕೆ ದೇಶದಲ್ಲಿ ತಿಂಗಳಾಂತ್ಯಕ್ಕೆ ಲಭ್ಯವಾಗಲಿದೆ. ವರ್ಷಕ್ಕೆ 850 ದಶ ಲಕ್ಷ ಸ್ನುಟ್ನಿಕ್ ಲಸಿಕೆ ಅಭಿವೃದ್ಧಿಪಡಿಸಲು ಐದು ಔಷಧ ತಯಾರಿಕಾ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

ಮಹಾರಾಷ್ಟ್ರ,, ಪಂಜಾಬ್ ,ತೆಲಂಗಾಣ, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿ್ನನ್ನೆಲೆಯಲ್ಲಿ ಲಸಿಕೆ ಕೊರತೆ ಎದುರಾಗಿದೆ.‌ಈ ಹಿನ್ನೆಲೆಯಲ್ಲಿ ಇಂತಹದೊಂದು ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

ಪ್ರಧಾನಿ ‌ನರೇಂದ್ರ ಮೋದಿ ಹಾಗು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಲಸಿಕೆ ಎಲ್ಲಾ ರಾಜ್ಯಗಳಿಗೆ ಅಗತ್ಯ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎನ್ನುವ ಭರವಸೆಯನ್ನು ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರಗಳಿಗೆ ಅಭಯ ನೀಡಿದ್ದರು.

ವಿದೇಶದ ಲಸಿಕೆಗೆ ಅನುಮತಿ

ವಿದೇಶದಲ್ಲಿ ಅಭಿವೃದ್ಧಿ ಪಡಿಸಿರುವ ಲಸಿಕೆಗೆ ದೇಶಗಳಲ್ಲಿ ಬಳಕೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ‌

ಅಮೇರಿಕಾದ ಜಾನ್ಸನ್ ಅಂಡ್ ಜಾನ್ಸನ್, ಜೈದೂಸ್ ಕ್ಯಾಡಿಲಾ, ದೇಶೀಯವಾಗಿ ಸೆರಂನ ಅಭಿವೃದ್ಧಿ ಪಡಿಸಿರುವ ನೊವಾವಾಕ್ಸ್, ಭಾರತ್ ಭಯೋಟೆಕ್ ನ ನಸಲ್‌‌ ಲಸಿಕೆ ಸೇರಿದಂತೆ ಐದು ಲಸಿಕೆಗಳು ಶೀಘ್ರದಲ್ಲೇ ಲಭ್ಯವಾಗುವ ಸಾದ್ಯತೆ ಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ