ದೇಶದಲ್ಲಿ ಆರ್ಥಿಕ ಚೇತರಿಕೆ

ನವದೆಹಲಿ, ಮಾ. ೩೦: ಕೋವಿಡ್ ನಂತರದಲ್ಲಿ ದೇಶದ ಆರ್ಥಿಕ ಚೇತರಿಕೆ ಸ್ಥಿರವಾಗಿದೆ. ಕಳೆದ ಫೆಬ್ರವರಿಯಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಬೇಡಿಕೆ ಮತ್ತು ವ್ಯಾಪಾರ- ವಹಿವಾಟು ಸ್ಥಿರಗೊಂಡಿದೆ. ಕೊರೊನಾ ಪ್ರಕರಣಗಳ ಏರಿಳಿತಗಳ ನಡುವೆಯೂ ದೇಶದ ಆರ್ಥಿಕತೆಯಲ್ಲಿ ಚೇತರಿಕೆ ಕಾಣಬರುತ್ತಿದೆ.

ಕಳೆದ ತಿಂಗಳು ಎಲ್ಲಾ ಎಂಟು ಅಧಿಕ ಆವರ್ತನ ಸೂಚಕಗಳು ನೆಲಕಚ್ಚಿದ್ದವು. ಆದರೆ, ಮೂರು ತಿಂಗಳ ಅವಧಿಯಲ್ಲಿ ಸರಾಸರಿ ಇದ್ದು, ಈ ನಡುವೆ ಒಂದೇ ತಿಂಗಳಲ್ಲೇ ಅಂಕಗಳಲ್ಲಿ ಭಾರೀ ಏರಿಳಿತ ಕಂಡಿತು. ಈಗ ಆವರ್ತನ ಸೂಚಕ ಸರಾಗಗೊಂಡಿದೆ.

ಫೆಬ್ರವರಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ದಾಖಲಾಗಿದ್ದು, ಈ ಅವಧಿಯಲ್ಲಿ ಆರ್ಥಿಕತೆ ಚೇತರಿಕೆ ಕಾಣಬಂತು.

ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಏರಿಳಿತ ಮಧ್ಯೆ ಆರ್ಥಿಕ ಸ್ಥಿತಿ ವ್ಯತಿರಿಕ್ತವಾಗಿದೆ, ಇದು ಗ್ರಾಹಕರ ಚಲನಶೀಲತೆ ಮತ್ತು ಬೇಡಿಕೆಗೆ ಭಾರೀ ಹೊಡೆತ ಬೀಳಲಿದೆ. ಒಟ್ಟು ದೇಶೀಯ ಉತ್ಪನ್ನದ ಸುಮಾರು ಶೇ. ೬೦ರಷ್ಟು ಬಳಕೆ ಕುಸಿಯಲಿದೆ ಎಂದು ಹೇಳಲಾಗಿದೆ.

ಸದ್ಯಕ್ಕೆ ತೊಂದರೆಯಿಲ್ಲ..!!

ದೇಶದ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಚಟುವಟಿಕೆ ಮೇಲೆ ಯಾವುದೇ ರೀತಿಯ ಅಪಾಯ ಕಾಣಬರುತ್ತಿಲ್ಲ. ದೇಶದ ಒಟ್ಟಾರೆ ಜಿಡಿಪಿಗೆ ಶೇಕಡ ೧೪.೫ರಷ್ಟು ಕೊಡುಗೆ ನೀಡುತ್ತಿರುವ ಮಹಾರಾಷ್ಟ್ರ ಅತ್ಯಂತ ಕೆಟ್ಟ ಪರಿಣಾಮವನ್ನು ಹೊಂದಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಫೆಬ್ರವರಿ ಮಧ್ಯಭಾಗದಿಂದ ಹೆಚ್ಚುತ್ತಿರುವ ಪ್ರಕರಣಗಳನ್ನು ನಿಯಂತ್ರಿಸಲು ಮುಂಬೈ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ವ್ಯಾಪಾರ ಚಟುವಟಿಕೆ ದೇಶದ ಪ್ರಮುಖ ಸೇವಾ ವಲಯದ ಚಟುವಟಿಕೆಯು ಫೆಬ್ರವರಿ ತಿಂಗಳಲ್ಲಿ ತನ್ನ ಅತ್ಯಂತ ಕ್ಷಿಪ್ರ ಗತಿಯಲ್ಲಿ ವಿಸ್ತರಿಸಲ್ಪಟ್ಟಿತ್ತು. ಮತ್ತೆ ಹೊಸ ಆದೇಶ ಮತ್ತು ಲಸಿಕೆಗಳ ಆವಿಷ್ಕಾರದಿಂದ ಜನರಲ್ಲಿ ಆರ್ಥಿಕ ಚೇತರಿಕೆ ಕಾಣಬಂದಿತ್ತು ಎಂದು ಹೇಳಿದ್ದಾರೆ.