ದೇಶದಲ್ಲಿ ಆಗಿರುವ ಸಾವು-ನೋವುಗಳಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ನೇರ ಕಾರಣಃ ಪ್ರಕಾಶ ರಾಠೋಡ

ವಿಜಯಪುರ, ಜೂ.6-ಲಸಿಕಾಕರಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಸ್ಪಷ್ಟವಾದ ನೀತಿ ರೂಪಿಸಿಲ್ಲ, ಹೀಗಾಗಿ ಇನ್ನಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಲಸಿಕಾಕರಣಕ್ಕೆ ಪ್ರತ್ಯೇಕ ಮಂತ್ರಿ ಹಾಗೂ ಮಂತ್ರಾಲಯವನ್ನು ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಗಿರುವ ಸಾವು-ನೋವುಗಳಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ನೇರ ಕಾರಣವಾಗಿದೆ, ಕೇಂದ್ರ ಸರ್ಕಾರ ಲಸಿಕಾಕರಣ ಕಾರ್ಯದಲ್ಲಿ ವಿಫಲವಾಗಿದೆ, ನೀತಿಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಮೂರು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ, ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ, ಹೀಗಾಗಿ ಕೂಡಲೇ ಲಸಿಕಾಕರಣವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು, ಅದಕ್ಕೆ ಪ್ರತ್ಯೇಕವಾದ ಮಂತ್ರಾಲಯ ಆರಂಭಿಸಿ ಕೂಡಲೇ ಅದನ್ನು ಪ್ರತ್ಯೇಕ ಸಚಿವರನ್ನು ನಿಯೋಜಿಸಬೇಕು ಎಂದು ರಾಠೋಡ ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ಸೋಂಕು ಇಳಿಕೆಯಾಗುತ್ತಿದೆ ಎಂದು ಸರ್ಕಾರಗಳು ಬಿಂಬಿಸುತ್ತಿವೆ, ಆದರೆ ವಾಸ್ತವಿಕವಾಗಿ ಕೋವಿಡ್ ಟೆಸ್ಟ್‍ಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಹೀಗಾಗಿ ಸಂಖ್ಯೆ ಕಡಿಮೆಯಾಗುತ್ತಿದೆ, ಗ್ರಾಮೀಣ ಭಾಗದಲ್ಲಿ ಸೋಂಕಿನ ಪ್ರಮಾಣ ಅತಿಯಾಗಿದ್ದು ವಾಸ್ತವಿಕವೇ ಆಗಿದ್ದರೂ ಸಹ ಅಂಕಿ-ಅಂಶಗಳು ಹೇಳುತ್ತಿರುವುದೇ ಬೇರೆ ಎಂದರು.
ಇನ್ನೊಂದೆಡೆ ಲಸಿಕೆ ಹಂಚಿಕೆಯಲ್ಲಿಯೂ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಭ್ರಷ್ಟಾಚಾರದ ವಾಸನೆ ಬಡಿಯುತ್ತಲೇ ಇದೆ, ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂ.ದುಡ್ಡನ್ನು ಕೊಟ್ಟು ಲಸಿಕೆ ಹಾಕಿಸಿಕೊಳ್ಳಬೇಕಾಗಿರುವುದು ನಾಗರಿಕರಿಗೆ ಹೊರೆಯಾಗಲಿದೆ, ಇನ್ನೊಂದೆಡೆ ಖಾಸಗಿ ಆಸ್ಪತ್ರೆಯಲ್ಲಿ ದುಡ್ಡು ಕೊಟ್ಟು ಹಾಕಿಸಿಕೊಳ್ಳುವ ಲಸಿಕೆ ಅವ್ಯಾಹತವಾಗಿ ಹೊರತು ಉಚಿತವಾಗಿ ನೀಡುವ ವ್ಯಾಕ್ಸೀನ್ ಸರ್ಕಾರಿ ಆಸ್ಪತ್ರೆಯಲ್ಲಿ ಅಲಭ್ಯ, ಇದು ಎಂತಹ ವ್ಯವಸ್ಥೆ, ಇದು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದರು.
ಲಾಕಡೌನ್ ಪರಿಣಾಮವಾಗಿ ಸಾವಿರಾರು ಕೋಟಿ ರೂ.ಹಾನಿಯಾಗಿದೆ, ಸರ್ಕಾರ ಘೋಷಿಸಿರುವ ಪ್ಯಾಕೇಜ್ ಯಾರಿಗೂ ಮುಟ್ಟುತ್ತಿಲ್ಲ, ನಾಮಕೆವಾಸ್ತೆ ಪರಿಹಾರ ಘೋಷಿಸಡುವ ಮೂಲಕ ಅದೂ ಸಹ ತಡವಾಗಿ ಘೋಷಣೆ ಮಾಡುವ ಮೂಲಕ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡಿದೆ ಹೊರತು ಜವಾಬ್ದಾರಿಯಿಂದ ನಡೆದುಕೊಂಡಿಲ್ಲ ಎಂದರು.
ಕೇಂದ್ರ ಸರ್ಕಾರ ಬಡವರಿಗಾಗಲಿ, ಕಾಮಿ9ಕರಿಗಾಗಲಿ ಯಾವುದೇ ರೀತಿಯ ಪ್ಯಾಕೇಜ್ ನೀಡಿರುವುದಿಲ್ಲ. ಹಣವನ್ನು ಕೇವಲ ಉದ್ಯಮಿದಾರರಿಗೆ ಉಪಯೋಗಕ್ಕಾಗಿ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಶಾಸಕರು ಪ್ರಕಾಶ ರಾಠೋಡ ರವರು ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಮತ್ತು ಉಚಿತವಾಗಿ ಬೀಜ ಹಾಗೂ ಗೊಬ್ಬರವನ್ನು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಶಾಸಕರು ಕ್ಷೇತ್ರದ ಅಭಿವೃದ್ಧಾಗಾಗಿ ನೀಡುತ್ತಿರುವ ಅನುದಾನದಿಂದ 100 ,ಕೋಟಿ ಲಸಿಕೆಯನ್ನು ತೆಗೆದುಕೊಂಡು ನಾವು ಜನರಿಗೆ ನೀಡುತ್ತೇವೆ ಎಂದು ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯ ರವರು ಮತ್ತು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ ರವರು ಈ ಒಂದು ಬೇಡಿಕೆಯನ್ನು ಸಕಾ9ರದ ಮುಂದಿಟ್ಟಿರುವುದರ ಬಗ್ಗೆ ಸಹಾ ಪ್ರಸ್ತಾಪಿಸಿದರು. ಅದೇ ರೀತಿ ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿಡಿಯೋ ಕಾನ್ಪರೇನ್ಸ್ ಮೂಲಕ ಇವುಗಳ ಬಗ್ಗೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಒಂದು ಹೆಲ್ಪ್ ಲೈನ್ ಸೆಂಟರ ಮಾಡುವುದಾಗಿ ತಿಳಿಸಿದರು. ಕೋವಿಡ್ ಸೊಂಕಿತರಿಗೆ ಔಷಧಿ ಕೊರತೆ, ಆಕ್ಸಿಜನ್ ಕೊರತೆ ಮತ್ತು ಅಂಬುಲೇನ್ಸ್ ಕೊರತೆ ಆಗಿರಬಹುದು ಬಗ್ಗೆ ಸೌಲಭ್ಯ ಒದಗಿಸಿಕೊಡುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರ ಪಿ.ಯು.ಸಿ ಪರೀಕ್ಷೆ ರದ್ದು ಪಡಿಸಿದೆ. ಆದರೆ ರಾಜ್ಯ ಸರ್ಕಾರ ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಡುವುದಾಗಿ ಶಿಕ್ಷಣ ಸಚಿವರು ಅವೈಜ್ಞಾನಿಕ ನಿರ್ಣಯ ತೆಗೆದುಕೊಂಡಿರುವುದಾಗಿ ತಿಳಿಸಿದರು. ಇದರ ಬಗ್ಗೆ ಎ.ಐ.ಸಿ.ಸಿ ನಾಯಕಿಯಾದ ಶ್ರೀಮತಿ ಪ್ರಿಯಾಂಕಗಾಂಧಿ ರವರು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಎಸ್.ಎಸ್.ಎಲ್.ಸಿ ಪರೀಕ್ಷೆ ಮತ್ತು ಪಿ.ಯು.ಸಿ ಪರೀಕ್ಷೆ ಮುಂದೂಡಿ ಎನ್ನುವುದರ ಬಗ್ಗೆನೂ ಪ್ರಸ್ತಾಪಿಸಿದರು. ಇದಕ್ಕೆ ಒಂದು ಪಯಾ9ಯ ಮಾಗ9 ಮಾಡಬೇಕು ಎಂದು ಮನವಿ ಮಾಡಿಕೊಂಡರು.
ದೇಶದ ಮಹಾನ ಸುಳ್ಳುಗಾರ ಎಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಎಂದು ವಿಧಾನ ಪರಿಷತ್ತಿನ ಶಾಸಕರು ಪ್ರಕಾಶ ರಾಠೋಡ ರವರು ವಾಗ್ದಾಳಿ ನಡೆಸಿದರು. ವಿಜಯಪುರದಲ್ಲಿ ಆಕ್ಸಿಜನ್ ಮತ್ತು ಔಷಧಿ ಸಿಗದೇ ಸೊಂಕಿತರು ಸಾವು ನೋವುಗಳ ಮಧ್ಯಹೊರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿಯವರು ಲೆಕ್ಕಪತ್ರಗಳಿಗೆ ಮಾತ್ರ ಸಿಮಿತ ಎಂದರು. ಕೋವಿಡ್ 2ನೇ ಅಲೇ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದಾಗಿರುವುದು ತಿಳಿಸಿದರು. 3ನೇ ಅಲೇ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ತಿಳಿಸಿ ಲಾಕ್ ಡೌನ್ ಕೂಡ ಉಲ್ಲಂಘನೆ ಮಾಡಬಾರದು ಎಂದು ಜನರಲ್ಲಿ ಮನವಿ ಮಾಡಿದರು. ವಿಜಯಪುರದಲ್ಲಿ ಡಾಕ್ಟರ್ ಮತ್ತು ನರ್ಸಗಳ ಸಿಬ್ಬಂದಿ ಕೊರತೆ ಇರುವುದಾಗಿ ತಿಳಿಸಿದರು.
ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳ ಆಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ದರ ಕಡಿಮೆ ಮಾಡಬೇಕೆಂದು ಈ ಸಂದಭ9ದಲ್ಲಿ ಮನವಿ ಮಾಡಿಕೊಂಡರು.
ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪೆÇ್ರ.ರಾಜು ಆಲಗೂರ ಮಾತನಾಡಿ, ಕೊರೊನಾ ಎರಡನೇ ಅಲೆ ಜಿಲ್ಲೆಯಲ್ಲಿ ಜೀವಹಾನಿ ಮಾಡಿದೆ. ಮೂರನೇ ಅಲೆ ವ್ಯಾಪಿಸುವ ಮುನ್ನವೇ ವ್ಯಾಪಕವಾಗಿ ಹರಡುವ ಮುನ್ನ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳಬೇಕು, ಜಿಲ್ಲೆಯ ಎಲ್ಲ ಹೆಲ್ತ್ ಸೆಂಟರ್ ಗಳನ್ನು ಕೋವಿಡ್ ಸೆಂಟರ್ ಗಳನ್ನಾಗಿ ಪರಿವರ್ತನೆ ಮಾಡಿ ಅಲ್ಲಿ ಬೇಕಾಗಿರುವ ಅಗತ್ಯ ಬೆಡ್, ಸುಸಜ್ಜಿತ ಅಂಬ್ಯುಲೆನ್ಸ, ಕೊರೊನಾ ಹಾಗೂ ಬ್ಲ್ಯಾಕ್ ಫಂಗಸ್ ಸಂಬಂಧಿಸಿದಂತೆ ಔಷಧ ಸಂಗ್ರಹ ಸೇರಿದಂತೆ ಸಕಲ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಎಂ.ಬಿ. ಪಾಟೀಲರು, ಶಿವಾನಂದ ಪಾಟೀಲರು, ಯಶವಂತರಾಯಗೌಡರು ಅರ್ಥಪೂರ್ಣವಾಗಿ ಕಾರ್ಯ ಮಾಡುತ್ತಿದ್ದಾರೆ, ಫುಡ್ ಕಿಟ್ ವಿತರಣೆ, ಬೆಡ್ ಹಂಚಿಕೆಯ ವಿಷಯದಲ್ಲಿ ಮಾದರಿಯಾಗಿ ನಡೆದುಕೊಂಡಿದ್ದಾರೆ. ಬಿಎಲ್‍ಡಿಇ ಸಂಸ್ಥೆಯ ಅಧ್ಯಕ್ಷರಾಗಿರುವ ಎಂ.ಬಿ. ಪಾಟೀಲರು ಬಿಎಲ್‍ಡಿಇ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಕೊರೊನಾ ಚಿಕಿತ್ಸೆ ನೀಡುವ ಮೂಲಕ ಬಡವರ ಬಂಧುವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್‍ಹಮೀದ್ ಮುಶ್ರೀಫ್, ಮೊಹ್ಮದ್‍ರಫೀಕ್ ಟಪಾಲ್, ಐ.ಎಂ. ಇಂಡೀಕರ, ಸುರೇಶ ಘೋಣಸಗಿ, ಈರಪ್ಪ ಜಕ್ಕಣವರ, ಚನ್ನಬಸಪ್ಪ ನಂದರಗಿ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.