ದೇಶದಲ್ಲಿನ ಸಾಮರಸ್ಯಕ್ಕೆ ಶರಣ ಸಂಸ್ಕೃತಿ ಅಗತ್ಯ-ಪ್ರೋ ಚಂದ್ರಶೇಖರ್ ವಸ್ತ್ರದ್


ಸಂಜೆವಾಣಿ ವಾರ್ತೆ
ಸಂಡೂರು:ಅ: 3 ಶ್ರಾವಣ ಮಾಸದಲ್ಲಿ ವಚನ ಶ್ರಾವಣ ಮನೆಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಜ್ಞಾನ ದಾಸೋಹ ನಡೆಯುತ್ತಿರುವುದು 12ನೇ ಶತಮಾನದ ನಿಜವಾದ ಶರಣತತ್ವ ಇದಾಗಿದೆ ಎಂದು ಪ್ರೋ ಚಂದ್ರಶೇಖರ್ ವಸ್ತ್ರದ್ ತಿಳಿಸಿದರು.
ಅವರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರಭುದೇವರ ಜನಕಲ್ಯಾಣ ಸಂಸ್ಥೆ ಹಾಗೂ ವಕೀಲರಾದ ಗುಡೇಕೋಟೆ ನಾಗರಾಜ ಅವರ ಪ್ರಾಯೋಜಕತ್ವದಲ್ಲಿ ಶ್ರಾವಣ ಮಾಸದ ವಿಶೇಷ ವಚನಾನುಭಾವ ಕಾರ್ಯಕ್ರಮದಲ್ಲಿ ವಚನ ಶ್ರಾವಣ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಇಂದು ದೇಶದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆಗಳು ನಡೆಯುತ್ತಿವೆ, ಅದರೆ 12ನೇ ಶತಮಾನದಲ್ಲಿ ದಯವೇ ಧರ್ಮದ ಮೂಲ ಎಂದು ಹೇಳುವ ಮೂಲಕ ಹಿಂಸೆಯನ್ನು ತಿರಸ್ಕರಿಸಿದ್ದರು ಎಂದರು.
ಸಾನಿಧ್ಯವಹಿಸಿದ್ದ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಮಾತನಾಡಿ, ಶ್ರಾವಣ ಸಂಭ್ರಮವನ್ನು ನಾವು ವಚನ ಸಂಭ್ರಮವನ್ನಾಗಿ ಆಚರಿಸುತ್ತಿರುವುದು ಬಹು ಮುಖ್ಯವಾದುದು, ಕಾರಣ ಶ್ರಾವಣ ಮಾಸದಲ್ಲಿ ನಾವು ನಾಗಪ್ಪನ ಹಬ್ಬವನ್ನು ಹಾಲೆರೆಯುವ ಮೂಲಕ ಆಚರಿಸುವ ನಾವು ಅದರ ಬದಲು ವಚನಗಳ ತಿರುಳನ್ನು ತಿಳಿದು ಮೂಢನಂಬಿಕೆಗಳನ್ನು ದೂರಮಾಡುವ ಕಾರ್ಯದ ಜೊತಗೆ ಶರಣ ಸಂಸ್ಕೃತಿಯ ದಾಸೋಹ, ಕಾಯಕದ ಮಹತ್ವ ತಿಳಿಸುವ ಮಹತ್ತರ ಕಾರ್ಯಇದಾಗಿದೆ, ವಕೀಲರಾದ ಗುಡೇಕೋಟೆ ನಾಗರಾಜ ಅವರು ತಮ್ಮ ಮನೆಯಲ್ಲಿ ಇಂತಹ ಕಾರ್ಯವನ್ನು ಹಮ್ಮಕೊಳ್ಳುವ ಮೂಲಕ ಶ್ರಾವಣ ಎಲ್ಲರಿಗೂ ಶರಣ ಸಂಸ್ಕೃತಿಯನ್ನು ಉಣಬಡಿಸಲಿ ಎಂದರು.
ಸಂಡೂರು ವಿಧಾನಸಭಾ ಕ್ಷೇತ್ರದ ಮುಖಂಡ ಕೆ.ಎಸ್. ದಿವಾಕರ್ ಅವರು ತಮ್ಮ ಉದ್ಘಾಟನಾ ನುಡಿಗಳನ್ನಾಡಿ, ವಿರಕ್ತಮಠ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿಯನ್ನು ಉಂಟುಮಾಡುತ್ತಿರುವುದು ಬಹು ಮುಖ್ಯವಾದುದು ಅಲ್ಲದೆ ಸಂಡೂರು ವಿಧಾನಸಭಾ ಕ್ಷೇತ್ರ ಜನತೆಗಾಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಉಡಿತುಂಬುವ ಕಾರ್ಯಕ್ರಮ, ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಮೂಲಕ ಜನತೆಯನ್ನು ಪಾಲ್ಗೊಳ್ಳುವ ಮೂಲಕ ಯಶಸ್ಸನ್ನು ಕೊಡಬೇಕೆಂದು ಮನವಿ ಮಾಡಿದರು.
ಸಮಾರಂಭದ ವೇದಿಕೆಯಲ್ಲಿ ವೀರಶೈವ ಸಮಾಜದ ಮುಖಂಡರಾದ ಹಗರಿಬಸವರಾಜಪ್ಪ, ಬಿ.ಎಂ. ಉಜ್ಜಿನಯ್ಯ, ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರ್, ತಾ.ಪಂ. ಸದಸ್ಯರಾದ ವಿಶಾಲಾಕ್ಷಿಕುಮಾರಸ್ವಾಮಿ, ಮೇಲು ಸೀಮೆ ಶಂಕ್ರಪ್ಪ, ಪುರಸಭೆಯ ಮಾಜಿ ಅಧ್ಯಕ್ಷ ಅಲಿ ಸದಸ್ಯ ಎಲ್.ಹೆಚ್.ಶಿವಕುಮಾರ್, ವಿಶ್ವನಾಥಗೌಡ್ರು, ಕರಾವೇ ಅಧ್ಯಕ್ಷ ರಾಜು.ಪಿ, ವಕೀಲರ ಸಂಘದ ಕಾರ್ಯದರ್ಶಿ ಎನ್.ಎಂ. ನಟರಾಜ ಶರ್ಮ ಹಾಗೂ ಸಮಾಜದ ಹಲವಾರು ಗಣ್ಯರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಮಂಡಿಸಿದರು.
ಶಿಕ್ಷಕ ಪ್ರದೀಪ್‍ಕುಮಾರ್ ನಿರೂಪಿಸಿದರು, ಪ್ರಾಯೋಜಕರಾದ ಗುಡೇಕೋಟೆ ನಾಗರಾಜ ಸ್ವಾಗತಿಸಿದರು, ಹೆಚ್.ಕುಮಾರಸ್ವಾಮಿ, ಟಿ.ವೆಂಕಟೇಶ್, ಚಂದ್ರಶೇಖರ್ ಗುಂಡಮುಣುಗು, ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.