ದೇಶಗಳಲ್ಲಿ ಪ್ರಾಯೋಗಿಕ ಹಂತದಲ್ಲಿ 6 ಲಸಿಕೆ : ಜಾವಡೇಕರ್

ನವದೆಹಲಿ, ಜ.2- ದೇಶದಲ್ಲಿ ಕೋರೋನೋ‌ ಸೋಂಕಿಗೆ ಅಭಿವೃದ್ಧಿಪಡಿಸುತ್ತಿರುವ ಆರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳು ಯಾವುದೇ ಕ್ಷಣದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆಯುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾ ಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದೆ .ಅದೇ ರೀತಿ ಕೋವಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ತಿಳಿಸಿದರು.

ಈ ಎರಡು ಔಷದ ತಯಾರಿಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆ ಅಲ್ಲದೆ ಜೀ ಕೋವ್ -ಡಿ, ಎನ್ ವಿ ಎಕ್ಸ್ ಕೋ ವಿ 2373 ಲಸಿಕೆಯು ಸೇರಿವೆ ಎಂದು ಅವರು ತಿಳಿಸಿದರು

ಅನುಮತಿಗೆ 3 ಸಂಸ್ಥೆ ಮನವಿ:

ಕೊರೋನೋ ಸೋಂಕಿಗೆ ಅಭಿವೃದ್ಧಿಪಡಿಸಿರುವ ಲಸಿಕೆಗೆ ತುರ್ತು ಅನುಮತಿ ನೀಡುವಂತೆ ದೇಶದ 3 ಔಷಧ ತಯಾರಿಕಾ ಸಂಸ್ಥೆಗಳು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಗೆ ಅರ್ಜಿ ಸಲ್ಲಿಸಿದೆ .
ಈ ಸಂಸ್ಥೆಗಳಿಗೆ ಮತ್ತೊಂದು ಸಂಸ್ಥೆ ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಲಸಿಕೆ ತಯಾರಿಕಾ ಸಂಸ್ಥೆ ಲಸಿಕೆ ಅನುಮತಿಗೆ ಮನವಿ ಮಾಡಿದರೆ .ವಿಶ್ವದಲ್ಲಿ ನಾಲ್ಕು ಲಸಿಕೆ ಅನುಮತಿಗೆ ಅರ್ಜಿ ಸಲ್ಲಿಸಿದ ದೇಶ ಭಾರತ ವಾಗಲಿದೆ ಎಂದು ಅವರು ತಿಳಿಸಿದರು.

ವಿಶ್ವದಲ್ಲಿ ನಾಲ್ಕು ವರ್ಷದ ತಯಾರಿಕಾ ಸಂಸ್ಥೆಗಳು ತನ್ನ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ ದೇಶ ಭಾರತ ವಾಗಲಿದೆ ಎಂದು ಅವರು ಹೇಳಿದರು.

ಭಾರತೀಯ ಸೆರಂ ಸಂಸ್ಥೆ, ಆಕ್ಸ್‌ಫರ್ಡ್ ಮತ್ತು ಆಸ್ಟ್ರಾ ಜೆನೆಕಾ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಕೇಂದ್ರ ಸರ್ಕಾರದ ತಜ್ಞರ ಸಮಿತಿ ನಿನ್ನೆ ತುರ್ತು ಅನುಮೋದನೆ ನೀಡಿದೆ. ಇನ್ನು ಭಾರತೀಯ ಔಷಧ ನಿಯಂತ್ರಣಾ ಸಂಸ್ಥೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ