ದೇಶಕ್ಕೆ ಯೋಧರ ಕೊಡುಗೆ ಅಪಾರ: ರೇವುನಾಯಕ

ಕಲಬುರಗಿ:ಜು.27: ಭಾರತ ತಾನು ಸ್ನೆ?ಹಕ್ಕೆ ಬದ್ಧ, ಸಮರಕ್ಕೂ ಸಿದ್ಧ ಎಂದು ಜಾಗತಿಕ ಮಟ್ಟದಲ್ಲಿ ಸಾಬೀತು ಪಡಿಸಿದ ದಿನವೇ ಕಾರ್ಗಿಲ್ ವಿಜಯ ದಿವಸ್. ಪಾಕಿಸ್ತಾನಿ ನುಸುಳುಕೋರರ ಹುಟ್ಟಡಗಿಸಿ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದ ದಿನವಿದು ಎಂದು ಮಾಜಿ ಸಚಿವ ರೆವುನಾಯಕ ಬೆಳಮಗಿ ಬಣ್ಣಿಸಿದರು.

‘ಕಾರ್ಗಿಲ್ ವಿಜಯ ದಿವಸ್’ ಭಾರತೀಯ ಯೋಧರ ತ್ಯಾಗ, ದೇಶ ಪ್ರೆ?ಮ, ಸಾಹಸ, ಪರಾಕ್ರಮ, ಸಮರ್ಪಣೆ ಭಾವವನ್ನು ನೆನಪಿಸುತ್ತದೆ. ಕಾರ್ಗಿಲ್ ಯುದ್ಧ ಮುಕ್ತಾಯವಾಗಿ 23 ವರ್ಷಗಳೇ ಕಳೆದರೂ ದೇಶದ ಪ್ರತಿಯೊಬ್ಬ ನಾಗರಿಕನು ಹೆಮ್ಮೆ ಪಡುವಂತಹ ಅವಿಸ್ಮರಣೀಯ ದಿನ ಎಂದರು.
ನಗರದ ಕಲಾ ಮಂಡಳದಲ್ಲಿ ಕಲ್ಯಾಣ ಕರ್ನಾಟಕ ಸಮರ ಸೇನೆ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮ ಉದ್ಘಾಟಿಸಿ, ಮಾಜಿ ಯೋಧರನ್ನು ಗೌರವ ಸತ್ಕಾರ ಮಾಡಿ ಮಾತನಾಡಿದ ಅವರು, ಕಾಶ್ಮಿ?ರದಲ್ಲಿರುವ ಕಾರ್ಗಿಲ್ ಪ್ರದೇಶದಲ್ಲಿ ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ 48 ಡಿಗ್ರಿವರೆಗೂ ಕುಸಿಯುತ್ತದೆ. ಈ ಮೈಕೊರೆವ ಚಳಿಯಲ್ಲಿ ಗಡಿ ಕಾಯುವುದು ಭಾರೀ ಸವಾಲಿನ ಕೆಲಸವೇ ಸರಿ ಎಂದರು.

ನಿವೃತ್ತ ಯೋಧ ಮಹೇಶ್ವರರಾವ್ ಮಾತನಾಡಿ, ಶ್ರಿ?ನಗರದಿಂದ ಸುಮಾರು 205 ಕಿ.ಮೀ. ದೂರದಲ್ಲಿರುವ ಸುಮಾರು 16,000 ಅಡಿ ಎತ್ತರದ ಹಿಮಚ್ಛಾದಿತ ಪರ್ವತ ಶ್ರೆ?ಣಿಯಲ್ಲಿ, ಕಡಿದಾದ ಕಣಿವೆ ಪ್ರದೇಶದಲ್ಲಿ ಕಾರ್ಗಿಲ್ ಯುದ್ಧ ನಡೆದಿತ್ತು. ಇದು ಜಗತ್ತಿನ ಅತ್ಯಂತ ದುರ್ಗಮ ಸ್ಥಳಗಳಲ್ಲಿ ಒಂದಾಗಿದೆ.
ಪರ್ವತ ಶ್ರೆ?ಣಿಯ ಮೇಲಿದ್ದ ಪಾಕ್ ಪಡೆಗಳು ಸುಲಭವಾಗಿ ಭಾರತೀಯ ಸೈನಿಕರ ಚಲನವಲನ ಗುರುತಿಸಿ ಅವರ ಮೇಲೆ ಬಾಂಬ್, ಶೆಲ್ ದಾಳಿ ನಡೆಸುತ್ತಿದ್ದರು. ಪಾಕ್ ಯೋಧರ ಕಣ್ಣಿಗೆ ಬೀಳದಂತೆ ಭೀಕರ ಚಳಿಯಲ್ಲಿ, ಶಸ್ತ್ರಾಸ್ತ್ರಗಳೊಂದಿಗೆ ದುರ್ಗಮ ಪರ್ವತಗಳನ್ನು ಏರುವುದು ಭಾರೀ ಸವಾಲಿನ ಕೆಲಸವಾಗಿತ್ತು. ಆದರೆ ಈ ಎಲ್ಲ ಅಡೆ ತಡೆಗಳನ್ನು ಮೀರಿದ ಭಾರತೀಯ ಯೋಧರು ವಿ?ರಾವೇಶದಿಂದ ಹೋರಾಡಿ ಗೆಲುವು ಸಾಧಿಸಲಾಯಿತು ಎಂದು ನೆನಪು ಮರುಕಳಿಸಿದರು.
ಪ್ರಾಸ್ತಾವಿಕವಾಗಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ಸ್ವಾಗತಿಸಿದರು. ವೇದಿಕೆಯ ಮೇಲೆ ಪ.ಪೂ. ದಾವಲ್ ಮಲೀಕ್ ಕೊಡೆಕಲ್ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸೈನಿಕ ಶಿವಲಿಂಗಪ್ಪ ಗೌಳಿ, ಮಾಜಿ ಮಹಾಪೌರ ಶರಣು ಮೋದಿ, ಎಚ್ಕೆಸಿಸಿಐ ಕಾರ್ಯದರ್ಶಿ ಶರಣು ಪಪ್ಪಾ, ಆಹಾರ ಸುರಕ್ಷತಾ ಅಧಿಕಾರಿ ಡಾ.ಅರ್ಚನಾ ಕಮಲಾಪೂರ, ಜಗನ್ನಾಥ ಸೂರ್ಯವಂಶಿ ಇದ್ದರು.

ಪದಾಧಿಕಾರಿಗಳಾದ ಸಾದಿಕ್ ಅಲಿ ದೇಶಮುಖ, ಪ್ರಹ್ಲಾದ್ ಹಡಗಿಲಕರ್, ಚರಣರಾಜ ರಾಠೋಡ, ಅಮರದೀಪ ಕೊಳ್ಳೂರ್, ನಾಗರಾಜ ಮಡಿವಾಳ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.