ದೇಶಕ್ಕೆ ಮೋದಿ, ವಿಜಯಪುರಕ್ಕೆ ಜಿಗಜಿಣಗಿ: ಸಿ.ಟಿ. ರವಿ

ವಿಜಯಪುರ,ಏ.16:ವಿಜಯಪುರಕ್ಕೆ ಜಿಗಜಿಣಗಿ ದೇಶಕ್ಕೆ ಮೋದಿ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದಾರೆ.
ನಮ್ಮ ಪ್ರಣಾಳಿಕೆಯಲ್ಲಿ ಮೋದಿ ಗ್ಯಾರಂಟಿ ಇದೆ.
ಸುರಕ್ಷಿತ, ಸುಶಿಕ್ಷಿತ, ಸಮೃದ್ದ ಭಾರತ, ಆತ್ಮ ನಿರ್ಭರ ಭಾರತ ಮೋದಿ ಗ್ಯಾರಂಟಿ ನೀಡುತ್ತದೆ ಎಂದರು.
ವಿಶ್ವ ಗುರು ಭಾರತ ಆಗಬೇಕು ಎಂಬುದು ನಮ್ಮ ಗುರಿ. 2014 ಕ್ಕೆ ಮುಂಚೆ ಹಾಗೂ 2024 ರ ಭಾರತದ ಅಭಿವೃದ್ಧಿ ಕುರಿತು ಸಂಕಲ್ಪದಲ್ಲಿ ಇಟ್ಟಿದ್ದೇವೆ. 2014 ರ ಮುಂಚೆ ಪ್ರತಿನಿತ್ಯ ಹಗರಣ ಸುದ್ದಿ ಮಾಡುತ್ತಿತ್ತು. ಈಗ ಹಗರಣಗಳ ಸುದ್ದಿ ಇಲ್ಲ. ಈಗ ಯೋಜನೆಗಳ ಸದ್ದು ಮಾಡುತ್ತಿದೆ. ಇದು ಸಕಾರಾತ್ಮಕವಾಗಿ ಆಗಿರುವ ಬದಲಾವಣೆಯಾಗಿದೆ. ಇದು ವಿಶ್ವದಲ್ಲೇ ಐದನೇ ಜಾಗತಿಕ ಶಕ್ತಿಯಾಗಿದೆ ಎಂದರು.
ನೀತಿ, ನೇತಾ, ನಿಯತ್ತು ಇದು ಬದಲಾವಣೆಗೆ ಕಾರಣವಾಗಿದೆ.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ನೀತಿಯೂ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಜಗತ್ತಿನ 11 ರಾಷ್ಟ್ರಗಳು ನಮ್ಮ ಪ್ರಧಾನಿಗೆ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿವೆ ಎಂದರು.
ಯಾವ ದೇಶ ಸುಳ್ಳು ಸುದ್ದಿಗೆ ತಲೆ ಬಾಗಿ ವಿಕಾಸಸವನ್ನೇ ನಿರಾಕರಿಸಿತ್ತೋ, ಅದೇ ದೇಶದವರು ಯು ಆರ್ ಮೋಸ್ಟ್ ಪಾಪ್ಯೂಲರ್ ಇನ್ ದ ವರ್ಡ ಎಂದು ಹೇಳಿದ್ದರು ಎಂದು ತಿಳಿಸಿದರು.
ನಮ್ಮ ಲೀಡರ್ ಅವರ ಮಾತಿಗೆ ಜಗತ್ತು ಮನ್ನಣೆ ಕೊಡುತ್ತದೆ.
ಬಿಜೆಪಿಯ ಗ್ಯಾರಂಟಿ ಜನರ ಬದುಕನ್ನು ಬದಲಾಯಿಸಿದೆ.
ಬಿಜೆಪಿ ಗ್ಯಾರಂಟಿಯಿಂದ ಜನರು ಬಡತನ ಮುಕ್ತರಾಗಿದ್ದಾರೆ ಎಂದರು.
ಕಾಂಗ್ರೆಸ್ ‌ಗ್ಯಾರಂಟಿ‌ ವೋಟ್ ಬ್ಯಾಂಕ್ ಸೃಷ್ಟಿ ಮಾಡಿ ಹರಕೆಯ ಕುರಿಯನ್ನು ಮಾಡುವುದು.
ಕಾಂಗ್ರೆಸ್ ನ ಗ್ಯಾರಂಟಿ ಗಾಳಕ್ಕೆ ಸಿಲುಕಿಸಿದ ಎರೆಹುಳುವಿನ ತರಹ ಇದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಲೂಟಿ ಹೊಡೆಯಲಿಕ್ಕೆ ಕೊಟ್ಟಿರುವ ಯೋಜನೆಯಾಗಿದೆ. ಬಿಜೆಪಿಯ ಗ್ಯಾರಂಟಿ ದೇಶವನ್ನು‌ ಸುರಕ್ಷಿತವಾಗಿಡುವದಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮತ್ತಿತರರು ಇದ್ದರು.