ದೇಶಕ್ಕೆ ಮೋದಿ ಗ್ಯಾರಂಟಿ

ಬೆಂಗಳೂರು,ಡಿ.೩:ಮಿನಿ ಮಹಾ ಸಮರದಲ್ಲಿ iಧ್ಯಪ್ರದೇಶ, ರಾಜಸ್ತಾ, ಛತ್ತೀಸ್‌ಘಡ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಗ್ಯಾರಂಟಿಗಳ ಹೊರತಾಗಿಯೂ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ದೇಶಕ್ಕೆ ನರೇಂದ್ರಮೋದಿಯೇ ಗ್ಯಾರಂಟಿ ಎಂದು ಪೋಸ್ಟರ್ ಹಂಚಿಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಯೋಜನೆಯಿಂದ ಭರ್ಜರಿ ಗೆಲುವು ಸಾಧಿಸಿತ್ತು. ಇದೇ ಮಾದರಿಯನ್ನು ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಳವಡಿಸಿಕೊಂಡು ಮತದಾರರನ್ನು ಗೆಲ್ಲುವ ಹುಮ್ಮಸ್ಸಿನಲ್ಲಿತ್ತು. ಈ ಬಗ್ಗೆ ಕಾಂಗ್ರೆಸ್ ನಾಯಕರು ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು.
ಆದರೆ, ಕಾಂಗ್ರೆಸ್‌ನ ಈ ತಂತ್ರಗಾರಿಕೆಗೆ ಪರ್ಯಾಯವಾಗಿ ಪ್ರಧಾನಿ ನರೇಂದ್ರಮೋದಿ ಅವರನ್ನೇ ಬಿಜೆಪಿ ಬಳಸಿಕೊಂಡಿತ್ತು. ಮೋದಿ ಅವರು ಚುನಾವಣಾ ಪ್ರಚಾರೆದ ಸಂದರ್ಭದಲ್ಲಿ ಗ್ಯಾರಂಟಿಗಳ ಮುಂದೆ ಕಾಂಗ್ರೆಸ್‌ನ ಹುಸಿ ಭರವಸೆಗಳು ಎಂದು ವಾಗ್ದಾಳಿ ನಡೆಸಿದ್ದರು. ತಮ್ಮ ಮೂರನೇ ಅವಧಿಯಲ್ಲಿ ವಿಶ್ವದ ಅತಿ ದೊಡ್ಡ ಮೂರು ಆರ್ಥಿಕತೆಯಲ್ಲಿ ಭಾರತದ ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ ಭಾಷಣ ಎಂದು ಹೇಳಿದ್ದರು.
ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವ ಸಾಧಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಗ್ಯಾರಂಟಿ ವೈರಲ್ ಆಗಿದೆ. ದೇಶಕ್ಕೆ ನಮೋ ಗ್ಯಾರಂಟಿ, ಮೋದಿ ಅವರು ಇದ್ದರೆ ಎಲ್ಲವೂ ಸಾಧ್ಯ ಕರ್ನಾಟಕ ರಾಜ್ಯ ಬಿಜೆಪಿ ಘಟಕ ಪೋಸ್ಟ್ ಮಾಡಿದೆ.