ಕೋಲಾರ,ಜೂ,೯-ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಡಿಮಠದ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಯಾವುದೇ ಪಕ್ಷಗಳು ಒಟ್ಟಾಗಿ ಹೋಗುವುದಿಲ್ಲ. ಪಕ್ಷಾಂತರಗಳು ಹೆಚ್ಚಲಿವೆ. ಆದರೆ, ಒಂದೇ ಪಕ್ಷ ಅಧಿಕಾರವನ್ನು ಹಿಡಿಯಲಿದೆ, ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿದೆ. ಇದರ ಮಧ್ಯೆ ಇದೀಗ ಕೋಡಿ ಮಠದ ಸ್ವಾಮೀಜಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ತಾಲ್ಲೂಕಿನ ಸುಗಟೂರು ಶ್ರೀ ಕೈವಾರ ಯೋಗಿ ನಾರಾಯಣ ಮಠಕ್ಕೆ ಕೋಡಿಮಠ ಶ್ರೀ ಭೇಟಿ ನೀಡಿದ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ. ಈ ವರ್ಷ ಅಚನಕ್ಕಾಗಿ ಗುಡುಗು ಮಿಂಚು, ಬರಲಿದೆ. ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ಎಲ್ಲೋ ನಡೆದ ಬಾಂಬ್ ದಾಳಿಯಿಂದ ಸಾಕಷ್ಟು ನಮಗೆ ಅನಾಹುತ ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯ ನುಡಿದರು.
ಗಿಡ, ಮರ, ದೈವದ, ಆರಾಧ್ಯದ ಸಂಕೇತ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೇ ಸಿಕ್ಕಿದೆ. ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ಆದ್ಯಾತ್ಮಿಕವಾಗಿ ಅವರು ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ. ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಅಭಿಪ್ರಾಯ ತಿಳಿಸಿದರು.
ದೇಶದಲ್ಲಿ ಮುಂದೆ ವರ್ಷದ ಅಂತ್ಯಕ್ಕೆ ಅವಘಾಡಗಳು, ದುರಂತ ಗಳು ಸಂಭವಿಸಲಿದೆ. ಜಲಕ್ಷಾಮ ಉಂಟಾಗಲಿದೆ. ಸ್ವಾರ್ಥತೆ, ಜಾತಿಯತೆ ಗಳಿಂದ ಅಂತರ ಕಲಹಗಳು, ಆಚಾನಕ್ ಅಗಿ ಸಾವು ನೋವುಗಳು ಉಂಟಾಗಲಿದೆ.ಎಲ್ಲೂ ಬೀಳ ಬೇಕಾದ ಬಾಂಬ್‌ಗಳ ಭಾರತದ ಮೇಲೆ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ದೇಶದ ಬಹು ಸಂಸ್ಕೃತಿಗಳಾಗಿರುವ ಮಠಗಳು, ಮಸೀದಿಗಳು, ಮಂದಿರಗಳು, ಚರ್ಚ್‌ಗಳು, ಸ್ತೋಪಗಳು ಅಧ್ಯಾತ್ಮಿಕ ಕೇಂದ್ರಗಳಲ್ಲಿ ಉತ್ತಮ ಪರಿಸರಗಳಿದ್ದು, ಇಲ್ಲಿ ನಿತ್ಯ ಕೆಲ ಕಾಲ ಧ್ಯಾನ ಮಾಡಿದಲ್ಲಿ ಎಂತಹ ಕಾಯಲೆಗಳಿದ್ದರೂ ವಾಸಿಯಾಗಲಿದೆ ಉತ್ತಮವಾದ ಅರೋಗ್ಯವು ಸಿಗಲಿದೆ ಎಂದು ನುಡಿದರು.
ಭಾರತದ ಪರಂಪರೆಯಲ್ಲಿ ಸಾಮಾನ್ಯವಾಗಿ ಅಧ್ಯಾತ್ಮಿಕ ಕೇಂದ್ರಗಳ ಬಳಿ ಪಂಚವೃಕ್ಷಗಳಾದ ಬಿಲ್ವ, ಮಾವು, ಬೇವು, ಆಲದ ಅಶೋಕ ಮರಗಳನ್ನು ಕಾಣಬಹುದಾಗಿದೆ.ಗಿಡ ಮರ ಬಳ್ಳಿಗಳು ಆರಾಧ್ಯದ ಸಂಕೇತವಾಗಿದೆ. ಅಧ್ಯಯನ, ಅರಾಧನೆಯ ಭಕ್ತಿಗಳು ಶಕ್ತಿಗಳಾಗಲಿದೆ. ಈ ಶಕ್ತಿಯಿಂದ ನಿಮಗೆ ಸಕಲವು ಸಿದ್ದಿಯಾಗಲಿದೆ. ಸುಖ ನೆಮ್ಮದಿ ಸೌಭಾಗ್ಯಗಳು ಲಭಿಸಲಿದೆ ಎಂದರು.
ಮರಗಿಡಗಳು ಮಾನವನ ಆರೋಗ್ಯಕ್ಕೆ ಪೂರಕವಾದ ಶುದ್ದಗಾಳಿ ನೀಡುತ್ತದೆ, ಇಂಗಾಲವನ್ನು ಪಡೆಯುತ್ತದೆ, ಇದರಿಂದ ಉತ್ತಮವಾದ ಪರಿಸರ ಸೃಷ್ಟಿಯಾಗಲಿದೆ. ಈ ಜಾಗದಲ್ಲಿ ದೇವರ ಧ್ಯಾನವನ್ನು ಮಾಡಿದಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ. ಇದರಿಂದ ಅನೇಕ ಕಾಯಿಲೆಗಳು ವಾಸಿಯಾಗಲಿದೆ ಎಂದು ತಿಳಿಸಿದರು.
ದಿನದ ೨೪ ಗಂಟೆಗಳು ಗಿಡ ಮರಗಳು ಮಾನವನಿಗೆ ಶುದ್ದವಾದ ಗಾಳಿ ನೀಡುವಂತ ಸೇವೆ ಸಲ್ಲಿಸುವುದರಿಂದ ಹೆಚ್ಚು, ಹೆಚ್ಚಾಗಿ ಅವುಗಳನ್ನು ಉಳಿಸಿ ಬೆಳೆಸಿದಾಗ ಮಾತ್ರ ಸಮಾಜದಲ್ಲಿ ಮಾನವನ ಆರೋಗ್ಯ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಾಯು ಕೆಟ್ಟರೆ ಪರವಾಗಿಲ್ಲ ಅದರೆ ಅಂತರಾತ್ಮವೇ ಕೆಟ್ಟು ಹೋದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಇದಕ್ಕೆ ಪರಿಹಾರವೆಂದರೆ ಧ್ಯಾನವೇ ಮದ್ದು, ಧ್ಯಾನದಿಂದ ನಿಮ್ಮಲ್ಲಿ ಶಾಂತಿ, ನೆಮ್ಮದಿ ದೊರೆತು ಸಕಾರತ್ಮ ಶಕ್ತಿಗಳಿಗೆ ಬಲವು ಸಧೃಡಗೊಳ್ಳಲಿದೆ ಇದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಸ್ಥೆರ್ಯವು ಬರಲಿದೆ ಎಂದರು.
ಭಾರತೀಯ ಪರಂಪರೆಯಲ್ಲಿ ವೃಕ್ಷಗಳು ಅಧ್ಯಾಯನ ಕೇಂದ್ರಗಳು ದೇವಾಲಯಗಳಾಗಿದೆ. ಇಲ್ಲಿ ಧ್ಯಾನ ಮಾಡಿದಲ್ಲಿ ಶಾಂತಿ ಆರೋಗ್ಯವು ಸಮೃದ್ದಿಯಾಗ ಸಿಗಲಿದೆ ಹಾಗಾಗಿ ಎಲ್ಲರೂ ಭಕ್ತಿವಂತರಾಗಬೇಕು, ಧ್ಯಾನವಂತರಾಗ ಬೇಕೆಂದು ಕರೆ ನೀಡಿದರು. ಕೆಲವೊಂದು ರಾಜಕಾರಣದ ವಿಷಯಗಳು ನೀವು ಕೇಳಬೇಡಿ ನಾವು ಹೇಳಲು ಬಾರದು ಮಳೆ, ಬೆಳೆ, ಸುಖ ಶಾಂತಿಗಳು ಲೋಕ ಕಲ್ಯಾಣಕ್ಕೆ ಸಂಬಂಧಿಸಿದಂತೆ ತಿಳಿಸುತ್ತೇವೆ ಎಂದು ಹೇಳಿದರು.