ದೇಶಕ್ಕೆ ಒಳ್ಳೆ ದಿನ ಬರಲೇ ಇಲ್ವಲ್ಲರಿ ಮೋದಿ

ಜಮಖಂಡಿ:ಫೆ.28: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ಈ ದೇಶದಲ್ಲಿ ಅಚ್ಚೆದಿನ ಆಯೆಂಗೆ ಎಂದಿದ್ದರು ಆದರೆ 9 ವರ್ಷಗಳು ಕಳೆದರೂ ಮೋದಿ ಅವರೆ ಒಳ್ಳೆ ದಿನಗಳೆ ಬರಲೇ ಇಲ್ವರ್ರಿ ಬರೆ ಕೆಟ್ಟ ದಿನಗಳೆ ಬಂದ್ವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಚಾಯಿಸಿದರು.

ನಗರ ಸಮೀಪದ ಕಡಪಟ್ಟಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕಾಂಗ್ರೆಸ್‍ನ ಪ್ರಜಾಧ್ವನಿ ಸಮಾವೇಶ ಹಾಗೂ ಕೈ ಗೆ ಕೈಜೋಡಿಸಿ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಬಿಜೆಪಿಯವರನ್ನು ತಿವ್ರ ತರಾಟೆಗೆ ತೆಗೆದುಕೊಂಡರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಅಮಿತ ಶಾ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಸರ್ಕಾರದ ವಿರುದ್ದ ತಿವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಹಾಕುತ್ತೆನೆ ಎಂದಿದ್ದರು, 15 ಲಕ್ಷ ಅಲ್ಲ, 15 ಪೈಸೆನೂ ಹಾಕಲಿಲ್ವರ್ರಿ ಎಂದು ಪ್ರಶ್ನಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಎಂದಿದ್ದರಿ, 9 ವರ್ಷದಲ್ಲಿ 18ಕೋಟಿ ಉದ್ಯೋಗ ಕೊಟ್ಟಿದ್ದಿರಾ.?

2022ರ ವೆಳೆಗೆ ರೈತರ ಆದಾಯವನ್ನ ದ್ವಿಗುಣ ಮಾಡುತ್ತೆನೆ ಎಂದಿದ್ದರು ದ್ವಿಗುಣ ಆಯಿತಾ ರೈತರ ಸಾಲ ದುಪ್ಪುಟ್ಟು ಆಯಿತು ಅಷ್ಟೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮಾತೆತ್ತಿದ್ರೆ ಮೋದಿ ಅವರು ಚೌಕಿದಾರ್ ಅಂತಾರೆ, ಆಯ್ತಪ್ಪ ಭ್ರಷ್ಟಾಚಾರ ಆಗದಂತೆ ಚೌಕಿದಾರ ಆಗಬೇಕಲ್ಲ, ಈಶ್ವರಪ್ಪಗೆ 40 ಪಸೆರ್ಂಟ್ ಕೊಡಲಾಗದೇ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ್ರು, ಈಗ ಸರ್ಕಾರ ಅವನಿಗೆ ಕ್ಲೀನ್ ಚೀಟ್ ಕೊಟ್ಟಿದೆ, ಬಿಜೆಪಿ ಯ ಬೊಮ್ಮಾಯಿ ಸರ್ಕಾರ ಅಲಿಬಾಬಾ, ಚಾಲೀಸ್ ಚೋರ್ ಇದ್ದಂಗೆ, ಏನೂ ಕೆಲಸ ಮಾಡಲ್ಲ. ಬರೀ ಲೂಟಿ, ಹಿಂಗಾದ್ರೆ ಯಾರು ಗುತ್ತಿಗೆ ಮಾಡ್ತಾರೆ. ಜನರು ಹೆಂಗೆ ಬದುಕ್ತಾರೆ ಎಂದು ಟಿಕಿಸಿದರು.

ಐದು ವರ್ಷದ ಹಿಂದೆ ನೆನಪು ಮಾಡಿಕೊಳ್ಳಿ, ಎಂ.ಬಿ.ಪಾಟೀಲ ನೀರಾವರಿ ಮಂತ್ರಿ ಇದ್ರು, ನಾನಾಗಲಿ, ಎಂ.ಬಿ.ಪಾಟೀಲ ಆಗಲಿ ಬಿಲ್ ಕೊಡಲು ಕಮಿಷನ್ ಪಡೆದಿಲ್ಲ, ಪಡೆದಿದ್ದೇವೆ ಅಂದರೆ ಈ ಕ್ಷಣ ರಾಜಕೀಯ ನಿವೃತ್ತಿ ಆಗ್ತೇವೆ, ನಾನು ಮಂತ್ರಿ, ಡಿಸಿಎಂ, ಸಿಎಂ ಆಗಿದ್ದೇನೆ. ಇಂತ ಕೆಟ್ಟ ಸರ್ಕಾರ ನೋಡಿಲ್ಲ, ನನಗೆ ವೈಯಕ್ತಿಕ ದ್ವೇಷ ಇಲ್ಲ, ಆದರೆ, ರೈತರು ಉಳಿಯಬೇಕಲ್ಲ, ಜನರು ಉಳಿಯಬೇಕಲ್ಲ ಎಂದರು.

ರಾಜ್ಯದಲ್ಲಿ ಬಡವರಿಗೆ ಒಂದೆ ಒಂದು ಮನೆಗಳನ್ನು ನೀಡಿಲ್ಲ, ಸರ್ಕಾರ ನಡೆಸಲು ಇವರು ಲಾಯಕ್ಕಲ್ಲಾ ನಾಲಾಯಕ ಎಂದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ 5 ಸಾವಿರ ಕೋಟಿ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 5 ಸಾವಿರ ಕೋಟಿ ನೀಡುವದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. 2013 ರಲ್ಲಿ ನಾನು ಸಿಎಂ ಆದಾಗ 400 ಕೋಟಿ ಇತ್ತು, 2018ರಲ್ಲಿ ಮಂಡಿಸಿದ ಬಜೆಟ್ ನಲ್ಲಿ 3150 ಕೋಟಿ ಇಟ್ಟಿದ್ದೆ, ಮತ್ತೆ ಅಧಿಕಾರಕ್ಕೆ ಬಂದ್ರೆ 5 ಸಾವಿರ ಕೋಟಿ ಇಡುವುದಾಗಿ ಘೋಷಿಸಿದರು. ಮಹಿಳಾ ಸ್ವ ಸಹಾಯ ಸಂಘಗಳ 2500 ಕೋಟಿ ರೂಗಳ ಸಾಲವನ್ನು ಮನ್ನಾ ಮಾಡುತ್ತೆವೆ ಎಂದು ಭರವಶೆ ನೀಡಿದರು.

ಕೊಟ್ಟ ಕುದುರೆ ಏರದವ ಧೀರನೂ ಅಲ್ಲ, ಶೂರನೂ ಅಲ್ಲ ಎಚ್‍ಡಿಕೆ ವಿರುದ್ದ ವ್ಯಂಗ್ಯ:

ಕೋಮುವಾದಿ ಬಿಜೆಪಿ ಅಧಿಕಾರದಲ್ಲಿ ಇರಬಾರದೆಂದು ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ವಿ ಆ ಪುಣ್ಯಾತ್ಮ ಮಾತ್ರ ವೆಸ್ಟೆಂಡ್ ಹೋಟೆಲ್‍ನಲ್ಲೇ ಕಾಲ ಕಳೆದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರು ವೆಸ್ಟೆಂಡ್ ಹೋಟೆಲ್‍ನಲ್ಲಿ ಕುಳಿತು ಕಾಲ ಕಳೆದರು. ಜನರನ್ನು ಭೇಟಿ ಮಾಡಲಿಲ್ಲ, ಹೀಗಾಗಿ ಸರ್ಕಾರ ಕಳ್ಕೊಂಡೆವು. ಕೊಟ್ಟ ಕುದುರೆ ಏರದವ ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಕಿಡಿಕಾರಿದರು.

ಶಾಸಕರು ಬೇಸರ ಆಗಿದ್ದರು. ಯಡಿಯೂರಪ್ಪ ದುಡ್ಡು ಹಿಡ್ಕೊಂಡು ಕಾಯುತ್ತಾ ಕುಳಿತ್ತಿದ್ದರು. 17 ಜನ ಶಾಸಕರನ್ನ ವ್ಯಾಪಾರ ಮಾಡಿ ಖರೀದಿ ಮಾಡಿದರು. ಅನ್ನ ಹಳಸಿತ್ತು, ನಾಯಿ ಕಾದಿತ್ತು ಅನ್ನೋ ಗಾದೆಯಂತಾಗಿದೆ. ಅದನ್ನೆ ಆಪರೇಶನ್ ಕಮಲ ಅಂತ ಕರೆದಿದ್ದಾರೆ ಎಂದು ತಿವ್ರ ವಾಗ್ದಾಳಿ ನಡೆಸಿದರು.

ಶಾಸಕ ಆನಂದ ನ್ಯಾಮಗೌಡರನ್ನ ಗೆಲ್ಲಿಸಿ:

ಶಾಸಕ ಆನಂದ ನ್ಯಾಮಗೌಡ ಸದನೊಳಗೂ ಹೊರಗು ಒಳ್ಳೆ ಕಾರ್ಯ ಮಾಡುತಿದ್ದಾನೆ, ಸಜ್ಜನ ರಾಜಕಾರಣಿಯಾಗಿದ್ದಾನೆ, ಇಂತವರು ಬೆಳೆಸಿ ಕ್ಷೇತ್ರದ ಹೆಸರು ತರುತ್ತಾನೆ, ಈ ಭಾರಿ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರು ಕಾರ್ಯ ಮಾಡಿ ಆಶಿವರ್ದಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಈ ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿ, ಸಂಘ ಪರಿವಾರ ಹಾಗೂ ಅವರ ಇತರೆ ಸಂಘಗಳು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ, ದೇಶದಲ್ಲಿ ಎರಡು ಸಾವಿರ ಡ್ಯಾಂ ಗಳು ಇವೆ, 1950 ಕ್ಕೂ ಡ್ಯಾಂ ಕಟ್ಟಿದ್ದು ಕಾಂಗ್ರೆಸ್, ನರೇಂದ್ರ ಮೋದಿ ಅವರು ಯಾವುದೇ ಡ್ಯಾಂ ಕಟ್ಟಿಲ್ಲ, ಪ್ರಾಥಮಿಕ ಶಾಲೆಯಿಂದ ಐಐಟಿ ವರೆಗೂ ಕಾಲೇಜಗಳು ಆಗಿವೆ, ವಿದ್ಯುತ್ ಸ್ಥಾವರಗಳು, ಕಾರ್ಖಾನೆ, ರಸ್ತೆ, ಬ್ರಿಡ್ಜ್ ಎಲ್ಲವೂ ಆಗಿದ್ದ ಕಾಂಗ್ರೆಸ್ ಆಡಳಿತದಲ್ಲಿ. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮಾಡಿದ್ದ ನಮ್ಮ ಪಕ್ಷ, ನರೇಂದ್ರ ಮೋದಿ ಅವರು ಬಂದ ಮೇಲೆ ಇವೆಲ್ಲಾ ಆಗಿವೆಯಾ?

ಮಾಜಿ ಸಚಿವ ಜಮೀರ ಅಹ್ಮದ ಮಾತನಾಡಿ, ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿ ಓಟು ಹಾಕಬೇಕು, ನೀವು ಓಟು ಹಾಕದೇ ಮನೆಯಲ್ಲಿ ಕುಳಿತರೆ ಅದು ಬಿಜೆಪಿಗೆ ಲಾಭ ಆಗುತ್ತದೆ. ಬಿಜೆಪಿ ಸಾಧನೆ ಮೇಲೆ ಮತ ಕೇಳಲ್ಲ, ಹಿಂದೂ ಮುಸ್ಲಿಂ ಜಗಳ ಹಚ್ಚಿ ಮತ ಕೇಳುತ್ತಾರೆ, ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯದ ಮಹತ್ವ ಕರೊನಾ ವೇಳೆ ಎಲ್ಲರಿಗೂ ಗೊತ್ತಾಯಿತು, ನನ್ನ ಕ್ಷೇತ್ರದ ಸ್ಲಮ್ ಗಳ ಜನರು ದೇವರ ಮನೆಯಲ್ಲಿ ಸಿದ್ದರಾಮಯ್ಯ ಫೆÇೀಟೋ ಇಟ್ಟುಕೊಂಡಿದ್ರು, ಬಿಜೆಪಿ ಆಡಳಿತದಲ್ಲಿ ಅಡುಗೆ ಸಿಲಿಂಡರ್ ಬೆಲೆ ಏರಿಕೆ, ನಮ್ಮ ಸರ್ಕಾರ ಬಂದ್ರೆ ಮನೆಯ ಒಡತಿಗೆ ವರ್ಷಕ್ಕೆ 24 ಸಾವಿರ ರೂ. ಕೊಡ್ತೇವೆ, ಕಾಂಗ್ರೆಸ್ ಸರ್ಕಾರ ಯಾವಾಗ ಬಂದಿದೆ. ಆಗ ಜನರಿಗೆ ಒಳ್ಳೆಯದಾಗಿದೆ, ಬಡವರ ಬಗ್ಗೆ ಕಾಳಜಿ ಮನಸ್ಸಿನಲ್ಲಿ ಇರಬೇಕು, ಬಿಜೆಪಿ ಬರೀ ಲೂಟಿ ಹೊಡೆಯುತ್ತಿದೆ ಎಂದರು.

ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಾನು ಪ್ರಾಮಾಣಿಕವಾಗಿ ಕಾರ್ಯ ಮಾಡಿದ್ದೆನೆ, ಪ್ರವಾಹ, ಕರೋನಾ ಸೇರಿದಂತೆ ಕಷ್ಟದ ದಿನಗಳಲ್ಲಿ ಕ್ಷೇತ್ರದ ಮನೆ ಮಗನಾಗಿ ಸಮಸ್ಯೆಗಳನ್ನು ಆಲಿಸಿದ್ದೆನೆ, ನಾನು ಸರ್ಕಾರದಿಂದ 1630 ಕೋಟಿ ಅನುದಾನ ತರುವ ಕಾರ್ಯ ಮಾಡಿದ್ದೆನೆ, ಮುಂದಿನ ದಿನಗಳಲ್ಲಿ ಬಹಳಷ್ಟು ಅಭಿವರದ್ದಿ ಕಾರ್ಯಗಳನ್ನು ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದೆನೆ, ಕ್ಷೇತ್ರದ ತುಂಬ ಪಾದಯಾತ್ರೆ ಮಾಡಿ ಇನ್ನೂ ಮಾಡಬೇಕಾದ ಹಲವಾರು ಕೆಲಸಗಳನ್ನು ಕಂಡುಕೊಂಡಿದ್ದೆನೆ, ನಿಮ್ಮ ಆಶಿರ್ವಾದ ನನ್ನ ಮೇಲೆ ಸದಾಕಾಲ ಇರಲಿ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಮಾತನಾಡಿದರು.

ವೇದಿಕೆಯಲ್ಲಿ ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ.ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ವಿಣಾ ಕಾಶಪ್ಪನವರ, ನಜೀರ ಕಂಗನೊಳ್ಳಿ, ಶ್ರೀಶೈಲ ದಳವಾಯಿ, ಪದ್ಮಜೀತ ನಾಡಗೌಡ, ದಾನೇಶ ಘಾಟಗೆ, ಅರುಣಕುಮಾರ ಶಹಾ, ಎನ್.ಎಸ್.ದೇವರವರ, ರಪಿಕ ಬಾರಿಗಡ್ಡಿ, ಮುತ್ತಣ್ಣ ಹಿಪ್ಪರಗಿ, ರಕ್ಷಿತಾ ಈಟಿ, ಅರ್ಜುನ ದಳವಾಯಿ, ರವಿ ಯಡಹಳ್ಳಿ, ವರ್ದಮಾನ ನ್ಯಾಮಗೌಡ, ಬಸವರಾಜ ನ್ಯಾಮಗೌಡ ಇತರರು ಇದ್ದರು.