ದೇಶಕ್ಕೆ ಅಂಬೇಡ್ಕರ್, ರಾಜ್ಯಕ್ಕೆ ಅರಸು ಬಡವರ ಪಾಲಿನ ಎರಡು ಕಣ್ಣುಗಳು – ಟಿ ಜಗದೀಶ.

ಸಂಜೆವಾಣಿ ವಾರ್ತೆಕೂಡ್ಲಿಗಿ.ಆ 21 :-  ಮನುಷ್ಯನ ಪಾಲಿಗೆ ಕಣ್ಣುಗಳು ಎಷ್ಟು ಮುಖ್ಯವೋ ದೀನ ದಲಿತರ, ಹಿಂದುಳಿದ ವರ್ಗದ ಜನರ ಪಾಲಿಗೆ ಹಾಗೂ ಇತರೆ  ಸಮುದಾಯದ ಜನತೆಯ ಏಳ್ಗೆ ಹಾಗೂ ಶ್ರೇಯೋಭಿವೃದ್ಧಿಗೆ ಇಡೀ ದೇಶಕ್ಕೆ ಅಂಬೇಡ್ಕರ್ ಮುಖ್ಯವಾದರೆ ಅದರಂತೆ ಕರ್ನಾಟಕ ರಾಜ್ಯಕ್ಕೆ ದೇವರಾಜ ಅರಸು ಈ ಇಬ್ಬರು  ಬಡವರ ಪಾಲಿಗೆ ಎರಡು ಕಣ್ಣುಗಳಾಗಿದ್ದಾರೆ ಎಂದು ಕೂಡ್ಲಿಗಿ ತಹಸೀಲ್ದಾರ್  ಟಿ ಜಗದೀಶ ತಮ್ಮ ಬಾಲ್ಯದ ಶಿಕ್ಷಣ ಕಲಿತ ಹಾಸ್ಟೆಲ್ ದಿನಗಳನ್ನು ನೆನಪಿಸಿಕೊಂಡರುಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ದಿ.ದೇವರಾಜ ಅರಸು ಅವರ 108ನೇ ಜಯಂತ್ಯುತ್ಸವವು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದಲ್ಲಿ ಅದ್ದೂರಿಯಾಗಿ ಆಯೋಜಿಸಿದ ಕಾರ್ಯಕ್ರಮದ ಉದ್ಘಾಟನೆಯನ್ನು ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತ ದಲಿತರು, ಹಿಂದುಳಿದವರು ಸೇರಿ ಎಲ್ಲಾ ವರ್ಗದ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅನೇಕ ಯೋಜನೆಗಳನ್ನು ತರುವುದರ ಮೂಲಕ ಹಿಂದುಳಿದ ವರ್ಗಗಳ ಬಾಳಿಗೆ ಬೆಳಕಾಗಿದ್ದರು.ಗುಡೇಕೋಟೆಯ ಬಿಸಿಎಂ  ವಸತಿ ನಿಲಯ ಮೇಲ್ವಿಚಾರಕ ಹುಲುಗಪ್ಪ ಅವರು ವಿಶೇಷ ಉಪನ್ಯಾಸ ನೀಡಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ರಾಜ್ಯದ ಹಿಂದುಳಿದ ಹಾಗೂ ಎಲ್ಲಾ ವರ್ಗದ ಕಣ್ಮಣಿಯಾಗಿದ್ದವರು. ಡಿ.ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಉಳುವವನೇ ಭೂಮಿ ಒಡೆಯ, ಭಾಗ್ಯಜ್ಯೋತಿ, ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳು ಸೇರಿ ನಾನಾ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನತೆಯನ್ನು ಸುಭಿಕ್ಷವಾಗಿರುವಂತೆ ಆಡಳಿತ ನಡೆಸಿದ ಧೀಮಂತರು ಎಂದು ಸ್ಮರಿಸಿದರು. ಹಾವನೂರು ವರದಿ ಮೂಲಕ ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸಿ ಅವರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಧೀಮಂತ ರಾಜಕಾರಣಿ ಹಾಗೂ ಕರ್ನಾಟಕದ ಆಸ್ತಿ ಎಂದರೆ ತಪ್ಪಾಗದು ಇಂತವರ ಜಯಂತಿಯನ್ನು ಆಚರಿಸುವ ಮೊದಲು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿ ಬಡವರ ಪಾಲಿಗೆ ಅವರ ಏಳ್ಗೆಗೆ ಶ್ರಮಿಸುವ ಬಗ್ಗೆ ಎಲ್ಲರೂ ಶಪಥಗೈಯೋಣ ಎಂದು ಹುಲುಗಪ್ಪ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ, ಬಿಸಿಎಂ ಇಲಖೆ ತಾಲೂಕು ಕಲ್ಯಾಣಾಧಿಕಾರಿ ಪಂಪಾಪತಿ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್ ಮಾತನಾಡಿದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್,  ನಿಲಯಪಾಲಕ ಬಸವರಾಜ, ಪಂಚಾಯತ್ ರಾಜ್ ಇಲಾಖೆ ಎಇಇ ಮಲ್ಲಿಕಾರ್ಜುನ, ವಸತಿ ನಿಲಯ ನಿವೃತ್ತ ಮೇಲ್ವಿಚಾರಕ ಸಿ.ಅಂಜಿನಪ್ಪ, ಕಸಾಪ ತಾಲೂಕು ಅಧ್ಯಕ್ಷ ವೀರೇಶ್, ವಸತಿ ನಿಲಯ ಮೇಲ್ವಿಚಾರಕರಾದ ಮಲ್ಲಪ್ಪ ಬೆಳ್ಳಂಡಗಿ, ಕುಮಾರಸ್ವಾಮಿ, ಎಸ್.ವಿ.ರಾಚಪ್ಪ, ಶಿವಲೀಲಾ ಬಣಕಾರ್, ಕೆ.ಎನ್.ಸುಮಾ, ಬಸಪ್ಪ, ಗೋವಿಂದಪ್ಪ, ಸಿ.ಆರ್. ಸಹನಾ, ಸೂಲದಹಳ್ಳಿ ಪ್ರಕಾಶ್, ಆರ್.ಬಿ.ಕೊಟ್ರಮ್ಮ ಇತರರಿದ್ದರು.ಜಯಂತಿ ಹಿನ್ನೆಲೆ ಆಯೋಜಿಸಿದ್ದ ಕಬಡ್ಡಿ, ಖೋ ಖೋ, ವಾಲೀಬಾಲ್ ಸೇರಿ ನಾನಾ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ‌ ಮುನ್ನ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಸೇರಿ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕಾನಹೊಸಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಮೇಲ್ವಿಚಾರಕ ರಾಚಪ್ಪ ಸ್ವಾಗತಿಸಿದರು,ಕೆ.ಎಂ.ವೀರೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ದಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು ಈ ಮೆರವಣಿಗೆಯಲ್ಲಿ ಸಂಘ ಸಂಸ್ಥೆಯ ಪ್ರಮುಖರು ಹಾಗೂ ವಸತಿ ನಿಲಯದ ಮಕ್ಕಳು ಭಾಗವಹಿಸಿದ್ದರು.
One attachment • Scanned by Gmail