
ನವದೆಹಲಿ,ಸೆ.೧೯- ಭಾರತ ಆತ್ಮ ನಿರ್ಭರವಾಗುವ ಕಡೆಗೆ ನಮ್ಮೆಲ್ಲರ ಆದ್ಯತೆಯಾಗಬೇಕು. ಇದಕ್ಕೆ ಪ್ರತಿಯೊಬ್ಬರ ಕರ್ತವ್ಯ ಮುಖ್ಯ. ಇಲ್ಲಿ ಪಕ್ಷಗಳು ಮುಖ್ಯವಾಗುವುದಿಲ್ಲ, ಬದಲಾಗಿ ದೇಶಕ್ಕಾಗಿ ಮಿಡಿಯುವ ಹೃದಯ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.ದೇಶದ ಅಮೃತ ಕಾಲದ ೨೫ ವರ್ಷಗಳಲ್ಲಿ, ಭಾರತ ದೊಡ್ಡ ಕ್ಯಾನ್ವಾಸ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಸಣ್ಣ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುವ ಸಮಯ ಮುಗಿದಿದೆ. ದೊಡ್ಡದಾಗಿ ಯೋಚನೆ ಮಾಡುವ ಮೂಲಕ ಆತ್ಮನಿರ್ಭರ ಭಾರತ ನಮ್ಮೆಲ್ಲರ ಕನಸು ಮತ್ತು ಗುರಿ ಎಂದು ತಿಳಿಸಿದ್ದಾರೆ.ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನಗಳ ಸದನದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು ಸಂಸತ್ತಿನಲ್ಲಿ ಮಾಡಿದ ಪ್ರತಿಯೊಂದು ಕಾನೂನು, ಸಂಸತ್ತಿನಲ್ಲಿ ನಡೆಯುವ ಪ್ರತಿಯೊಂದು ಚರ್ಚೆ ಮತ್ತು ಸಂಸತ್ತು ನೀಡುವ ಪ್ರತಿಯೊಂದು ಸಂಕೇತ ಭಾರತೀಯ ಆಶಯ ಉತ್ತೇಜಿಸಬೇಕು ಎಂದು ಹೇಳಿದ್ದಾರೆ.ನಮ್ಮ ಜವಾಬ್ದಾರಿ ಮತ್ತು ಪ್ರತಿಯೊಬ್ಬ ಭಾರತೀಯನ ನಿರೀಕ್ಷೆಯಾಗಿದೆ. ಸುಧಾರಣೆಗಳು ಏನೇ ಇರಲಿ. ಇಲ್ಲಿ ಮಾಡಿದ್ದು, ಭಾರತೀಯ ಆಕಾಂಕ್ಷೆ ನಮ್ಮ ಆದ್ಯತೆಯಾಗಬೇಕು, ಚಿಕ್ಕ ಕ್ಯಾನ್ವಾಸ್‌ನಲ್ಲಿ ದೊಡ್ಡ ಚಿತ್ರ ಬಿಡಿಸಲು ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ, ನಮ್ಮ ಚಿಂತನೆಯ ಕ್ಯಾನ್ವಾಸ್ ದೊಡ್ಡದಾಗಿಸಲು ಸಾಧ್ಯವಾಗದಿದ್ದರೆ, ಭವ್ಯ ಭಾರತದ ಚಿತ್ರ ಚಿತ್ರಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.ಭಾರತ ಉತ್ಪಾದನಾ ವಲಯದಲ್ಲಿ ವಿಶ್ವದಲ್ಲೇ ಅತ್ಯುತ್ತಮವಾಗಬೇಕು. ಕೆಂಪು ಕೋಟೆಯಿಂದ ಹೇಳಿದ್ದೇನೆ. ಶೂನ್ಯ ದೋಷ, ಶೂನ್ಯ ಪರಿಣಾಮ, ನಮ್ಮ ಉತ್ಪನ್ನಗಳಲ್ಲಿ ಯಾವುದೇ ದೋಷ ಇರಬಾರದು ಮತ್ತು ಪ್ರಕ್ರಿಯೆ ಇರಬೇಕು. ಪರಿಸರದ ಮೇಲೆ ಪರಿಣಾಮ ಬೀರುವುದಿಲ್ಲ. ಈ ‘ಶೂನ್ಯ ದೋಷ, ಶೂನ್ಯ ಪರಿಣಾಮ’ದೊಂದಿಗೆ ಪ್ರಪಂಚದ ಮುಂದೆ ಬರಬೇಕಾಗಿದೆ ಎಂದಿದ್ದಾರೆ.
ಹೊಸ ಸಂಸತ್ ಭವನ ಪ್ರವೇಶ
ಹೊಸ ಸಂಸತ್ತಿನ ಕಟ್ಟಡದಲ್ಲಿ ಹೊಸ ಭವಿಷ್ಯವನ್ನು ಪ್ರಾರಂಭಿಸಲಿದ್ದೇವೆ ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸುವ ಸಂಕಲ್ಪದೊಂದಿಗೆ ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಳೆಯ ಸಂಸತ್ ಭವನದಲ್ಲಿ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಹಳೆಯ ಕಟ್ಟಡಕ್ಕೆ ವಿದಾಯದ ಭಾಷಣ ಮಾಡಿದ ಪ್ರಧಾನಿ ದೇಶದ ಅಭಿವೃದ್ದಿ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದಿದ್ದಾರೆ.ಭಾರತವು ಹೊಸ ಪ್ರಜ್ಞೆಯೊಂದಿಗೆ ಪುನರುಜ್ಜೀವನಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೊಸ ಶಕ್ತಿಯಿಂದ ತುಂಬಿದೆ. ಈ ಪ್ರಜ್ಞೆ ಮತ್ತು ಶಕ್ತಿಯು ಕೋಟ್ಯಂತರ ಜನರ ಕನಸುಗಳನ್ನು ಸಂಕಲ್ಪಗಳಾಗಿ ಬದಲಾಯಿಸಬಹುದು ಮತ್ತು ಆ ಸಂಕಲ್ಪಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದು ತಿಳಿಸಿದ್ದಾರೆ.
ಲೋಕಸಭೆ ಅಧ್ಯಕ್ಷ ಓಂ ಬಿರ್ಲಾ, ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ ಕರ್, ರಾಜ್ಯಸಭೆ ನಾಯಕ ಪಿಶೂಷ್ ಗೋಯಲ್, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ವೇಲೆ ಇದ್ದರು.
ಸಂವಿಧಾನ ಸದನ: ಪಿಎಂ ಸಲಹೆ
ಹೊಸ ಸಂಸತ್ತಿಗೆ ಹೋಗುವಾಗ, ಹಳೆಯ ಸಂಸತ್ತಿನ ಘನತೆ ಎಂದಿಗೂ ಕಡಿಮೆಯಾಗಬಾರದು. ಇದನ್ನು ಹಳೆಯ ಸಂಸತ್ತಿನ ಕಟ್ಟಡವಾಗಿ ಬಿಡಬಾರದು. ಎಲ್ಲರೂ ಒಪ್ಪಿದರೆ ಇದನ್ನು ’ಸಂವಿಧಾನ ಸದನ’ ಎಂದು ಕರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.
ಭವಿಷ್ಯಕ್ಕಾಗಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೇವಲ ರಾಜಕೀಯ ಲಾಭಗಳ ಬಗ್ಗೆ ಯೋಚಿಸಲು ನಮ್ಮನ್ನು ನಿರ್ಬಂಧಿಸಲು ಸಾಧ್ಯವಿಲ್ಲ… ಜ್ಞಾನ ಮತ್ತು ನಾವೀನ್ಯತೆಯು ಬೇಡಿಕೆಗಳ ಬಗ್ಗೆ ಗಮನಹರಿಸಬೇಕು. ಚಂದ್ರಯಾನ-೩ ರ ಯಶಸ್ಸಿನ ನಂತರ,ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಸ್ಫೂರ್ತಿ ಪಡೆದಿದ್ದಾರೆ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದಿದ್ದಾರೆ.
ಹಲವು ಮಹತ್ವ ಕಾನೂನು ಜಾರಿ
ಸಂಸತ್‌ನಲ್ಲಿ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯ ನೀಡುವ ‘ತ್ರಿವಳಿ ತಲಾಖ್’ ವಿರೋಧಿಸುವ ಕಾನೂನನ್ನು ಒಗ್ಗಟ್ಟಿನಿಂದ ಅಂಗೀಕರಿಸಿರುವುದು ಸೇರಿದಂತೆ ಅನೇಕ ಮಹತ್ವದ ಕಾನೂನು ಜಾರಿ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಸಂಸತ್ತು ಕೂಡ ಲಿಂಗ ಪರಿವರ್ತನೆಯಾದ ಮಂದಿಗೆ ನ್ಯಾಯ ನೀಡುವ ಕಾನೂನುಗಳನ್ನು ಅಂಗೀಕರಿಸಿದೆ. ವಿಶೇಷಚೇತನರಿಗೆ ಉಜ್ವಲ ಭವಿಷ್ಯ ಖಾತರಿಪಡಿಸುವ ಕಾನೂನುಗಳನ್ನು ಎಲ್ಲರೂ ಒಗ್ಗಟ್ಟಿನಿಂದ ಅಂಗೀಕರಿಸಿದ್ದೇವೆ. ಸಂಸತ್ತಿನಲ್ಲಿ ೩೭೦ ನೇ ವಿಧಿಯನ್ನು ರದ್ದುಗೊಳಿಸುವ ಅವಕಾಶ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.