ದೇಶಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟಿದ ಟಿಪ್ಪು- ರಾಜಾ ವೆಂಕಟಪ್ಪ ನಾಯಕ

ಸಿರವಾರ.ನ.೧೦-ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟ ಟಿಪ್ಪು ಸುಲ್ತಾನ್ ಅವರನ್ನು ನೆನೆಯುವ ಕೆಲಸ ಆಗಬೇಕು. ಇಂದಿನ ಮಕ್ಕಳಿಗೆ ಟಿಪ್ಪು ಶೌರ್ಯ,ಪರಾಕ್ರಮ ದೇಶಭಕ್ತಿ ತಿಳಿಸುವ ಕೆಲಸ ಆಗಬೇಕು ಎಂದು ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಪಟ್ಟಣದ ಟಿಪ್ಪು ಸುಲ್ತಾನ್ ನಾಮಪಲಕಕ್ಕೆ ಇಂದು ಮಾಲಾರ್ಪಣೆ ಮಾಡಿದ ಅವರು ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟ ಟಿಪ್ಪು ಸುಲ್ತಾನ್, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದನಿ ಎತ್ತಿದ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬರು. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ, ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದರು. ಇಂತಹ ಉದಾತ್ತ ವ್ಯಕ್ತಿತ್ವದ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸುವುದು ರಾಜಕೀಯಪ್ರೇರಿತವಾಗಿದೆ. ನಿಜವಾದ ದೇಶಭಕ್ತನನ್ನು ಮತಾಂಧ ಎನ್ನುವುದು, ಶಾಲಾ ಪಠ್ಯದಿಂದ ಅವರ ಕುರಿತ ಪಠ್ಯವನ್ನು ಕೈಬಿಡುವುದು ದುರದುಷ್ಟಕರ. ಉಳುವವನೇ ಭೂ ಒಡೆಯ ಕಾನೂನನ್ನು ಮೊದಲಿಗೆ ಜಾರಿಗೆ ತಂದಿದ್ದು ಹೈದರಾಲಿ. ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂದರು.
ಈ ಸಂದರ್ಭದಲ್ಲಿ ಆದರ್ಶನಾಯಕ,ನಾಗರಾಜ ಗೌಡ ಡಿಎನ್ ವೈ, ದಾನಪ್ಪ ಗ್ಯಾನಪ್ಪ, ವಲಿಗುತ್ತೆದಾರ, ಮೌಲಾಸಾಬ,ರವಿಕುಮಾರ, ಸತ್ತರಸಾಬ್ ಗುತ್ತೆದಾರರ, ಇಮಾಮ್, ಅರಳಪ್ಪಯದಲದಿನ್ನಿ, ಶರಿಪ್, ಟಿಪ್ಪು ಸುಲ್ತಾನ ಸಂಘದ ಅದ್ಯಕ್ಷ ಎಂ.ಡಿ.ವಾಹೀದ್, ಗೌರವ ಅದ್ಯಕ್ಷ ಶಾಲಂಖಾಸ್ಮೀರಿ, ಉಪಾದ್ಯಕ್ಷ ರಜಾಕ್, ಮಹಿಬೂಬ್ ಸೇರಿದಂತೆ ಇನ್ನಿತರರು ಇದ್ದರು.