
ಕಲಬುರಗಿ,ಆ.19:ದೇಶಕ್ಕಾಗಿ ಪ್ರಾಣಾರ್ಪಣೆಗೈದ ಸೈನಿಕರಿಗೆ, ಧೈರ್ಯಶಾಲಿ ವೀರ ಯೋಧರಿಗೆ ಹಾಗೂ ತ್ಯಾಗ ಬಲಿದಾನಗೈದವರಿಗೆ ನಾವು ಯಾವುತ್ತು ಸ್ಮರಿಸಿಕೊಳ್ಳಬೇಕು ಎಂದು ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹೇಳಿದರು.
ಶನಿವಾರದಂದು ಕಲಬುರಗಿ ನಗರದ ಗುಲಶನ್ ಉದ್ಯಾನವನದಲ್ಲಿ ಭಾರತದ ಸ್ವಾತಂತ್ರ್ಯದ 75ನೇ ವರ್ಷಗಳ ಸವಿ ನೆನಪಿಗಾಗಿ ಆಜಾದಿ ಕಾ ಅಮೃತ ಮಹೋತ್ವವದ ಅಂಗವಾಗಿ ದೇಶಕ್ಕಾಗಿ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸುವುದಕ್ಕಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನವನ್ನು ಮಹಾನಗರ ಪಾಲಿಕೆ ವತಿಯಿಂದ ಶಿಲಾಫಲಕ ಅನಾವರಣ ಮತ್ತು ಸಸಿಗಳು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಎಲ್ಲರೂ ಒಗ್ಗಟಾಗಿ ಸಂವಿಧಾನ ಅಡಿಯಲ್ಲಿ ಕೆಲಸ ಮಾಡಬೇಕೆಂದರು.
ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ಧರ್ಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಅಭಿವೃದ್ದಿ ಭಾರತದ ನಿರ್ಮಾಣದಲ್ಲಿ ನಾನು ಪಾಲ್ಗೊಳ್ಳುವುದಾಗಿ ಮತ್ತು ದೇಶದ ಏಕತೆ ಒಗ್ಗಟ್ಟಿಗಾಗಿ ಶ್ರಮಿಸುವುದಾಗಿ ದೇಶಕ್ಕಾಗಿ ನನ್ನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ದೇಶಕ್ಕಾಗಿ ತ್ಯಾಗ ಬಲಿದಾನಗೈದ ಕೆಚ್ಚೆದೆಯ ವೀರರಿಗೆ ಗೌರವ ಸಲ್ಲಿಸುವುದಾಗಿ ಹಾಗೂ ದೇಶದ ರಕ್ಷಣೆ ಮತ್ತು ಪ್ರಗತಿಗೆ ನನ್ನ ಸಮರ್ಪಿಸಿಕೊಳ್ಳುವುದಾಗಿ ಕೈಯಲ್ಲಿ ಗಣ್ಯರು ಹಾಗೂ ಅಧಿಕಾರಿಗಳು ಮಣ್ಣು ಹಿಡಿದು ಪಂಚ ಪ್ರಾಣ ಶಪಥ ಮಾಡಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ ದೇವಿದಾಸ ಪಾಟೀಲ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ದೇಶಕ್ಕಾಗಿ ಬಲಿದಾನ ಕೊಟ್ಟಿದ್ದಾರೆ. ನಾವು ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಈಗಾಗಲೇ ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಸಂತಸದ ಸಂಗತಿ ಎಂದರು.
ಈಗಾಗಲೇ ನನ್ನ ಮಣ್ಣು ನನ್ನ ದೇಶ ಅಭಿಯಾನ ಮಹಾನಗರ ಪಾಲಿಕೆ ವತಿಯಿಂದ ಶಿಲಾಫಲಕ ಅನಾವರಣ ಮತ್ತು ಸಸಿಗಳಿಗೆ ಚಾಲನೆ ನೀಡಲಾಗಿದೆ ನಗರದ ಸುತ್ತಮುತ್ತ 77 ಗಿಡಗಳನ್ನು ಹಚ್ಚಲಾಗುವುದು ಎಂದರು.
ಅದೇ ರೀತಿಯಾಗಿ ಪಾಲಿಕೆಯ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ಧರ್ಗಿ, ಉಪ ಮಹಾಪೌರರಾದ ಶಿವಾನಂದ ಪಿಸ್ತಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಆಡಳಿತ ಪಕ್ಷದ ನಾಯಕ ಕೃಷ್ಣಪ್ಪ, ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ, ಪಾಲಿಕೆ ಸದಸ್ಯರು, ವಲಯ ಆಯುಕ್ತರು ಹಾಗೂ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.