
ಕೋಲಾರ,ಏ.೭: ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನರಾಯ್ ಅವರ ಜನ್ಮದಿನವನ್ನು ಬುಧವಾರ ನಗರದ ಜೆಡಿಎಸ್ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ ದೇಶದಲ್ಲಿ ಅಪಾರವಾದ ಜನಮನ್ನಣೆ ಗಳಿಸಿದ ಬಾಬು ಜಗಜೀವನ್‌ರಾಮ್ ಅವರ ಅದರ್ಶಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಂಡು ದೇಶಕ್ಕೆ ಮಾದರಿಯಾಗು ಪ್ರಜೆಗಳಾಗಬೇಕು ಜಗಜೀವನ್‌ರಾಮ್ ಅವರು ಹಸಿರು ಕಾಂತ್ರಿಯ ಹರಿಕಾರರಾಗಿದ್ದು, ಉಪ ಪ್ರಧಾನಿಯಾಗಿ ಅಪಾರಸೇವೆ ಸಲ್ಲಿಸಿದ್ದಾರೆ.ಇವರ ತತ್ವಸಿದ್ದಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಜೊತೆಗೆ ಈ ಬಗ್ಗೆ ಇತರರಿಗೂ ಅರಿವು ಮೂಡಿಸಬೇಕು ಇವರ ಆಡಳಿತ ಅವಧಿಯಲ್ಲಿ ದೇಶದಲ್ಲಿ ಆದ ಬದಲಾವಣೆಗಳನ್ನು ಸ್ಮರಣೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ ದೇಶದಲ್ಲಿ ಹೋರಾಟಗಾರರಾಗಿ , ಹಸಿರುಕ್ರಾಂತಿಯ ಹರಿಕಾರನಾಗಿ ದೇಶಕ್ಕಾಗಿ ನೀಡಿದ ಕೊಡುಗೆಗಳು ಅಪಾರ. ಇಂತಹ ಮಹಾನ್ ನಾಯಕರ ಆದರ್ಶ, ಚಿಂತನೆಗಳು ಇಂದಿಗೂ ದಾರಿದೀಪವಾಗಿವೆ. ಶೋಷಿತರ ದಮನಿತರ ಪರವಾಗಿ ಹೋರಾಟ ನಡೆಸಿದ ಮಾಜಿ ಉಪ ಪ್ರಧಾನಮಂತ್ರಿ ಬಾಬು ಜಗಜೀವನ ರಾಮ್ ಅವರಿಗೆ ಅನಂತ ಪ್ರಣಾಮಗಳು ಕೃಷಿ, ರಕ್ಷಣಾ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾದದ್ದು ಅವರ ಕನಸಿನ ಭವ್ಯ ಭಾರತ ನಿರ್ಮಾಣ ಮಾಡಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಹೂಹಳ್ಳಿ ಪ್ರಕಾಶ್ ಮಾತನಾಡಿ ದೇಶದಲ್ಲಿ ಜಾತಿ ಬೇಧವಿಲ್ಲದಂತೆ ಜೀವನ ನಡೆಸು ಜೊತೆಗೆ ಬಡವರಿಗೆ ಸರಕಾರದ ಸೌಲಭ್ಯಗಳನ್ನು ಕೊಡುವ ಮೂಲಕ ಬಡವರನ್ನು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಅಂಬೇಡ್ಕರ್ ಕನಸುಗಳಿಗೆ ಕೈ ಜೋಡಿಸಿದವರು ಬಾಬು ಜಗಜೀವನ್ ರಾಯ್ ಅವರು ಅವರ ಜೀವನ ಚರಿತ್ರೆಯೇ ನಮಗೆಲ್ಲ ಆದರ್ಶವಾಗಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಣಕನಹಳ್ಳಿ ನಟರಾಜ್, ಪ್ರಜ್ಞಾವಂತ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹೂಹಳ್ಳಿ ಪ್ರಕಾಶ್, ಮಾಜಿ ತಾಲ್ಲೂಕು ಅಧ್ಯಕ್ಷ ಬಾಬು ಮೌನಿ, ಮುಖಂಡರಾದ ಹಾರೋಹಳ್ಳಿ ವೇಣು, ಗಂಗಮ್ಮನಪಾಳ್ಯ ಶಿವು, ಶ್ಯಾಮ್, ಗಣೇಶ್, ಕರ್ನಲ್ ಶಿವು, ನಗರಸಭಾ ಸದಸ್ಯ ರಾಕೇಶ್ ಗೌಡ , ರೋಜಾ ಮುಂತಾದವರಿದ್ದರು.