ದೇಶಕ್ಕಾಗಿ ತಮ್ಮದೆಲ್ಲ ತ್ಯಾಗ ಮಾಡಿದ ಮಹಾತಾಯಿ ಕಸ್ತೂರಬಾ

ಧಾರವಾಡ,ಮಾ31 : ತಮ್ಮಇಷ್ಟದಂತೆ ಬದುಕಿದೇಶಕ್ಕಾಗಿತಮ್ಮದೆಲ್ಲವನ್ನುತ್ಯಾಗ ಮಾಡಿದ ಮಹಾತಾಯಿಕಸ್ತೂರಬಾಎಂದು ಕ.ವಿ.ವಿ. ಗಾಂಧಿಅಧ್ಯಯನ ಪೀಠದ ವಿಶ್ರಾಂತ ಮುಖ್ಯಸ್ಥರಾದ ಪ್ರೊ.ಶಿವಾನಂದ ಶೆಟ್ಟರಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ದಿ.ಶ್ರೀಮತಿ ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ಅಂಗವಾಗಿ ಆಯೋಜಿಸಿದ್ದ `ಮಹಾನ್ ಮಹಿಳೆ ಕಸ್ತೂರಬಾಗಾಂಧಿ’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಕಸ್ತೂರಬಾಗಾಂಧೀಜಿಯವರಎಲ್ಲಾ ಹೋರಾಟಗಳಿಗೆ ನೈತಿಕ ಬೆಂಬಲ ನೀಡಿದರು.ದಕ್ಷಿಣಆಫ್ರಿಕಾದಲ್ಲಿದ್ದ ಬ್ರಿಟಿಷರುತಂದ ಹೊಸ ಕಾನೂನು ನಿಯಮಗಳು ಮಹಿಳೆಯರ ಅಸ್ತಿತ್ವವನ್ನೆ ಅಲ್ಲಗಳೆಯುವಂತಿದ್ದವು. ಇದರ ವಿರುದ್ಧಕಸ್ತೂರಬಾ ಸಾವಿರಾರು ಮಹಿಳೆಯರೊಂದಿಗೆ ಬೀದಿಗಿಳಿದು ಬ್ರಿಟಿಷ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿ ಯಶಸ್ವಿಯಾಗುವ ಮೂಲಕ ಸಾರ್ವಜನಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಹತ್ತಿದರು. ಹಲವಾರು ಬಾರಿಜೈಲುವಾಸವನ್ನೂ ಅನುಭವಿಸಿದರು. ಗಾಂಧೀಜಿಅವರು ಅನುಭವಿಸಿದ ಎಲ್ಲಾ ನೋವುಗಳಲ್ಲಿ ಭಾಗಿಯಾಗಿ, ಗಾಂಧೀಜಿಗೆಒಬ್ಬಆದರ್ಶ ಸತಿಯಾಗಿ, ಗೆಳತಿಯಾಗಿ, ತಾಯಿಯಾಗಿ ಸದಾಅವರನ್ನು ಮುನ್ನಡೆಸಿ, ಆದರ್ಶದಾಂಪತ್ಯಜೀವನಕ್ಕೆ ಮಾದರಿಯೆನಿಸಿದರು.ಗಾಂಧೀಜಿ ಹಲವಾರು ಸಂದರ್ಭದಲ್ಲಿಕಸ್ತೂರಬಾಅವರಿಗೆ ನೀಡಿದ ಅಗ್ನಿಪರೀಕ್ಷೆಗಳನ್ನು ತನ್ನ ನೈತಿಕ ಶಕ್ತಿಯಿಂದ ಸಮರ್ಥವಾಗಿ ಎದುರಿಸಿದರು.ಕಸ್ತೂರಬಾಅವರಲ್ಲಿದ್ದ ಸಹನಶೀಲತೆ, ತಾಳ್ಮೆ ಗುಣಗಳೇ ನನ್ನ ಹೋರಾಟಕ್ಕೆ ಅಹಿಂಸಾ ಪಾಠ ಕಲಿಸಿಕೊಟ್ಟವು ಎಂದುಗಾಂಧೀಜಿ ಬರೆದುಕೊಳ್ಳುತ್ತಾರೆ.
ಕಸ್ತೂರಬಾಗಾಂಧಿ ಶಿಕ್ಷಣ ಪಡೆಯದಿದ್ದರೂಅವರಲ್ಲಿಅಪಾರವಾದ ಲೋಕಾನುಭವ, ವ್ಯವಹಾರಿಕಜಾಣ್ಮೆಇತ್ತು.ಎಂತಹಕಠಿಣ ಪರಿಸ್ಥಿತಿಯಲ್ಲೂ ಸಂಪ್ರದಾಯ, ನಿಷ್ಠೆಯನ್ನು ಬಿಟ್ಟು ನಡೆಯಲಿಲ್ಲ. ಗಾಂಧಿ ಮಾರ್ಗ ಹಾಗೂ ಸಿದ್ಧಾಂತದಂತೆ ಜೀವನದುದ್ದಕ್ಕೂ ಬಾಳಿ ಬದುಕಿದವರಾಗಿದ್ದರುಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ನಿವೃತ್ತ ಸರ್ಜನ್‍ಡಾ.ಟಿ.ಜಿ. ಪಾಟೀಲ ಮಾತನಾಡಿ, ದಿ.ಮಹಾಲಿಂಗಮ್ಮನವರು ಮಾತೃ ಹೃದಯಿಗಳು.ದಿಟ್ಟ, ನೇರ ನುಡಿಯಅವರುಎಲ್ಲರ ಸುಖ ದುಃಖದಲ್ಲೂ ಪಾಲ್ಗೊಳ್ಳುವ ಉದಾರಗುಣ ಹೊಂದಿದರೆಂದು ಹೇಳಿದರು.
ದತ್ತಿ ದಾನಿಗಳಾದ ರಾಜೇಂದ್ರ ಸಾವಳಗಿ ತಾಯಿ ಮಹಾಲಿಂಗಮ್ಮನವರುಕುಟುಂಬ ವತ್ಸಲರು. ನಮ್ಮೆಲ್ಲರಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಿದವರೆಂದು ಹೇಳಿದರು.
ವೇದಿಕೆಯ ಮೇಲೆ ಕೃಪಾ ಮ್ಯಾಗೇರಿಇದ್ದರು. ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು. ದಿ. ಶ್ರೀಮತಿ ಮಹಾಲಿಂಗಮ್ಮ ಸಾವಳಗಿ ಅವರ ಭಾವಚಿತ್ರಕ್ಕೆಗಣ್ಯರುಕುಟುಂಬದ ಸದಸ್ಯರು ಪುಷ್ಪನಮನ ಸಲ್ಲಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣಒಡ್ಡೀನ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಹ ಕಾರ್ಯದರ್ಶಿ ಶಂಕರ ಕುಂಬಿ ನಿರೂಪಿಸಿದರು.ಡಾ. ಜಿನದತ್ತ ಹಡಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಶೈಲಜಾಅಮರಶೆಟ್ಟಿ, ಡಾ.ಶ್ರೀಶೈಲ ಹುದ್ದಾರ, ಡಾ.ಧನವಂತ ಹಾಜವಗೋಳ, ಸುರೇಶ ಸಾವಳಗಿ, ಸಿ.ಎಸ್. ಪಾಟೀಲ, ನಿಂಗಣ್ಣಕುಂಟಿ, ಎಂ.ಎ. ನರೇಗಲ್, ಎಂ.ಎಂ.ಚಿಕ್ಕಮಠ, ಪ್ರೊ. ನಾಗೂರ, ಪ್ರಕಾಶಧರಣೆಪ್ಪನವರ, ಪಿ.ಬಿ. ಸಂಕನಗೌಡ್ರ, ನಲವಡಿ, ವೀಣಾ ಸಂಕನಗೌಡ್ರ, ಅರುಣಕುಮಾರಅಗ್ನಿಹೋತ್ರಿ, ಬಿ.ಎಂ. ಹನಸಿ, ಎಚ್.ಡಿ ನದಾಫ್, ದಿಲೀಪ ಗೋತ್ರಾಳಿ, ಶಂಕರಲಿಂಗ ಶಿವಳ್ಳಿ, ಚಂದ್ರಶೇಖರಅಮೀನಗಡ, ಡಾ. ಗಿಡ್ನವರ, ಶಶಿಧರ ತೊರಗಲ್‍ಮಠ, ಬಿ.ಎಸ್. ಶಿರೋಳ, ರಾಯಭಾಗಕರ, ಎಸ್.ಬಿ. ಜೋಡಳ್ಳಿ, ಸುರೇಖಾ ಸಂಕನಗೌಡ್ರ, ಶಂಕರ ಸಣಕಲ್, ಎಸ್.ವಿ. ಗುಳ್ಳ, ಬಿ.ಎಂ.ಸುರಗೊಂಡ, ಶ್ರೀಶೈಲಗೌಡ ಕಮತರ,ಈರಪ್ಪ ಬಿರಾದಾರ, ಪಾರ್ವತಿ ಹಾಲಭಾವಿ, ರಾಜು ಹಳ್ಳಿಕೇರಿ, ಶಿವಣ್ಣ ಅಂಗಡಿ ಸೇರಿದಂತೆ ಸಾವಳಗಿ, ಸವದತ್ತಿ, ಸಂಕನಗೌಡ್ರ, ನಲವಡಿ ಕುಟುಂಬಸ್ಥರು ಇದ್ದರು.