ದೇವೆಗೌಡರಿಂದ ಕ್ಷೇತ್ರ ನೀರಾವರಿ-ಕರೆಮ್ಮ

ಸಿರವಾರ,ಮಾ.೧೨- ರಾಜ್ಯದಲ್ಲಿ ಹಿಂದುಳುದ ಕ್ಷೇತ್ರವಾಗಿದ್ದ ದೇವದುರ್ಗ ಕ್ಷೇತ್ರಕ್ಕೆ ನೀರಾವರಿಯನ್ನು ಮಾಡಿದ್ದೂ ಮಾಜಿ ಪ್ರದಾನ ಮಂತ್ರಿಯಾದ ಹೆಚ್.ಡಿ.ದೇವೆಗೌಡರಾಗಿದ್ದಾರೆ.
ನೀರಾವರಿಯಿಂದ ಕ್ಷೇತ್ರದ ರೈತರು ಎರಡು ಬೆಳೆ ಬೆಳೆದು, ಆರ್ಥಿಕವಾಗಿ ಸದೃಡ್ಡರಾಗುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಲಾಭ, ಪಂಚರತ್ನ ಯೋಜನೆಯ ಜಾರಿಯಾಗಲಿದೆ ಎಂದು ದೇವದುರ್ಗ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಜಿ.ಕರೆಮ್ಮ ನಾಯಕ ಹೇಳಿದರು.
ಸಮೀಪದ ನಾಗಡದಿನ್ನಿ ಗ್ರಾಮದಲ್ಲಿ ಇತ್ತಿಚೆಗೆ ಕಾಂಗ್ರೆಸ್- ಬಿಜೆಪಿ ನೂರಾರು ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಪಕ್ಷದ ಶಾಸಕ ಕೆ.ಶಿವನಗೌಡ ನಾಯಕ ಅವರು ಅಧಿಕಾರಿದ ಮದವೇರಿದೆ, ಮತದಾರರನ್ನು ಹಣದಿಂದ ಖರೀದಿಸಲು ಮುಂದಾಗಿದ್ದಾರೆ.
ಬಿಜೆಪಿ ಸರಕಾರ ಹಿಂದುಳಿದ ತಾಲೂಕು ಎಂದು ಸಾವಿರಾರು ರೂಪಾಯಿ ಮಂಜೂರು ಮಾಡಲಾಗಿದೆ. ಅದನ್ನು ಕ್ಷೇತ್ರದ ಜನರ ಅಭಿವೃದ್ಧಿಗೆ ಬಳಸದೆ, ತನ್ನ ಸ್ವಯಂ ಅಭಿವೃದ್ದಿಗೆ ಬಳಸಿಕೊಂಡು, ರಾಯಚೂರು, ಬಳ್ಳಾರಿ, ಬೆಂಗಳೂರು ನಗರದಲ್ಲಿ ಆಸ್ತಿಯನ್ನು ಮಾಡಿದ್ದಾರೆ. ಇದಕ್ಕೆ ಎಲ್ಲಾ ಮತದಾರರು ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ತಕ್ಕ ಉತ್ತರ ನೀಡಬೇಕು. ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್ ಶಾಸಕರು ಮಾಡಿದ ಅಭಿವೃದ್ದಿ ಕಾರ್ಯಗಳೆ ಹೆಚ್ಚು ಇವರ ಅಭಿವೃದ್ದಿ ಶೂನ್ಯ ಎಂದರು.
ಈ ಸಂದರ್ಭದಲ್ಲಿ ಬಸಯ್ಯತಾತ ನಾಗಡದಿನ್ನಿ, ಚನ್ನಪ್ಪತಾತ ಮಂದಕಲ್, ಮೂಡಲಗುಂಡ ಸಿದ್ದನಗೌಡ ನಾಯಕ, ಉಮೇಶಗೌಡ ಎನ್.ಗಣೇಕಲ್, ಮಹಿಬೂಬ್ ಸಾಬ್, ಹೆಗ್ಗಡದಿನ್ನಿ, ಆಂಜಿನೇಯ್ಯ ನಾಯಕ ನಾಗಡದಿನ್ನಿ, ಸಿದ್ದಲಿಂಗಪ್ಪಗೌಡ, ಹನುಮಂತರಾಯ ವಕೀಲ್, ಚನ್ನಪ್ಪ ಗೆಜ್ಜಭಾವಿ, ರಾಮನಗೌಡ, ರಮರೇಶ ನಾಯಕ ಜಾಡಲದಿನ್ನಿ, ಇಸ್ಕಾ ಮೇಸ್ತ್ರಿ, ಶಾಲಂ ಉದ್ಧಾರ, ಮಹೇಶಗೌಡ ಅಗ್ರಹಾರ, ಜಯಪ್ಪ ರಾಠೋಡ, ಹುಸೇನ್ ಟೈಲರ್, ಹೆಗ್ಗಡದಿನ್ನಿ, ದ್ರಾಕ್ಷಿಣಿ ನಾಗಡದಿನ್ನಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.